Breaking News

ವಿಶೇಷ ರೀತಿಯಲ್ಲಿ ಕಲ್ಯಾಣ ಮಹೋತ್ಸವ

Kalyan Mahotsav in a special way

ಸುರಪುರ,27: ತಾಲೂಕಿನ ಸತ್ಯಂಪೇಟೆ ನಗರದಲ್ಲಿ, ನಿನ್ನೆ ದಿನ ನನ್ನ ಸಹೋದರಿ(ಮಲ್ಲಿಕಾರ್ಜುನ ಅಮರಮ್ಮ ಅವರ ಮಗಳು ) ಅಕ್ಕಮಹಾದೇವಿಯ ವಚನ ಮಾಂಗಲ್ಯ ನಡೆಯಿತು. ಈ ಕಲ್ಯಾಣ ಮಹೋತ್ಸವ ಹಲವಾರು ಕ್ರಾಂತಿಕಾರಕ ಹೆಜ್ಜೆಗಳಿಗೆ ಕಾರಣಿಭೂತವಾಗಿತ್ತು.

ಮದುವೆಗೂ ಬಸವ ಬೆಳಕು ಕಾರ್ಯಕ್ರಮಕ್ಕೆ ಎತ್ತಣಿಂದೆತ್ತ ಸಂಬಂಧ ಎನ್ನುವವರಿದ್ದಾರೆ. ಆದರೆ ಬಸವಮಾರ್ಗ ಪ್ರತಿಷ್ಠಾನದ ತಿಂಗಳ ಬಸವ ಬೆಳಕು -೧೧೨ ರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಆಗಮಿಸಿದ್ದ ಪ್ರೊ. ಆರ್.ಕೆ. ಹುಡುಗಿಯವರ ಮಾತುಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದ್ದವು. ನಾನೂ ಕಲ್ಯಾಣ ಮಹೋತ್ಸವದ ನೆಪದಲ್ಲಿ ನಡೆಯುವ ಸಣ್ಣ ಪುಟ್ಟ ಅವಾಸ್ತವ ಸಂಗತಿಗಳ ಕುರಿತು ಮಾತನಾಡಿದೆ.

ಆರಂಭದಲ್ಲಿ ವಿ.ಸಿದ್ದರಾಮಣ್ಣನವರು ಬರೆದ ಏರುತಿದೆ ಹಾರುತಿದೆ ಷಟಸ್ಥಲ ಧ್ವಜವು ಮೆರೆಯುತಿದೆ ಎಂಬ ಹಾಡಿನೊಂದಿಗೆ ಹಿರಿಯ ವಕೀಲರಾದ ಶ್ರೀ.ಜಿ.ಎಸ್.ಪಾಟೀಲ ಧ್ವಜಾರೋಹಣ ಮಾಡಿದರು. ತರುವಾಯ ಅಲ್ಲಮಪ್ರಭು ಸತ್ಯಂಪೇಟೆ ‘ಉಳ್ಳವರು ಶಿವಾಲಯವ ಮಾಡುವರು’ ಎಂಬ ವಚನ ಹಾಡಿದ. ಪ್ರಣವ ಮತ್ತು ಪ್ರಮಥ ಸತ್ಯಂಪೇಟೆ ವಚನದಲ್ಲೇನಿದೆ ? ಎಂಬ ಅರಿವಿನ ಜ್ಯೋತಿ ಹೊತ್ತಿಸಿದರು.

ಶ್ರೀ. ಶಿವಣ್ಣ ಇಜೇರಿ ಲಿಂಗಣ್ಣ ಸತ್ಯಂಪೇಟೆ ಅಣ್ಣ ಈ ಮನೆಗೆ ವಚನ ವಿಚಾರದ ಬುನಾದಿ ಹಾಕಿಕೊಟ್ಟವರು ಎಂದು ಬಣ್ಣಿಸಿದರು. ಕಲ್ಯಾಣ ಮಹೋತ್ಸವದ ಕೇಂದ್ರ ಬಿಂದುಗಳಾದ ಅಕ್ಕಮಹಾದೇವಿ ಮತ್ತು ಮಲ್ಲಿಕಾರ್ಜುನ ಇಬ್ಬರೂ ವೇದಿಯಲ್ಲಿ ಮಾತನಾಡಿ ಅಚ್ಚರಿ ಹುಟ್ಟಿಸಿದರು. Kuok

ಇಡೀ ರಾಜ್ಯದ ತುಂಬಾ ನಡೆದಿರುವ ಸಂವಿಧಾನ ಜಾಥ ಕಾರ್ಯಕ್ರಮದಿಂದ ಪ್ರೇರಣೆಯಾಗಿ ಡಾ.ಬಾಬಾಸಾಹೇಬರು ಬರೆದ ಸಂವಿಧಾನ ಪೀಠಿಕೆ ಓದಿ ,ನೂರಾರು ಜನರು ಪ್ರತಿಜ್ಞೆ ಸ್ವೀಕರಿಸಿದರು.

ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗಿರುತ್ತವೆ ಎಂಬ ಮಾತನ್ನು ಅಲ್ಲಗಳೆಯುತ್ತ, ಸತಿಪತಿಗಳಿಬ್ಬರು ವಚನ ಮಾಂಗಲ್ಯ ಪ್ರತಿಜ್ಞೆ ನೆರವೇರಿಸಿದರು. ಸಾಕ್ಷಿ ಶಿವರಂಜನ ಹಾಗೂ ಮುಕ್ತಾಯಕ್ಕ ನರಕಲದಿನ್ನಿ ಅವರು ನಡೆಸಿಕೊಟ್ಟ ಹೂವ ತೂರ್ಯಾಡೋಣ ಎಂಬ ಹಾಡಿನ ಕಾರ್ಯಕ್ರಮ ಎಲ್ಲರ ಮನಸೆಳೆಯಿತು.

ಬಹಳಷ್ಟು ಜನರಲ್ಲಿ ತಪ್ಪು ತಿಳುವಳಿಕೆ ಇದೆ. ಮದುವೆಗಳು ಶುಭ ಶಕುನ, ಮರಣಗಳು ಅಪಶಕುನ ಎನ್ನುತ್ತಾರೆ. ಆದರೆ ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಸಂಗಯ್ಯ ? ದೋಷವೆಲ್ಲಿಯದೋ ,ದುರಿತವೆಲ್ಲಿಯದೋ ಸಂಗಯ್ಯ !? ಎಂಬ ಶರಣರ ಮಾತು ಸ್ಪಷ್ಟವಾಗಿ ಅರಿತುಕೊಂಡ ಸತ್ಯಂಪೇಟೆ ಕುಟುಂಬ ಸುರಪುರದ ಶಾಸಕ ವೆಂಕಟಪ್ಪ ನಾಯಕರ ಅಕಾಲಿಕ ಮರಣಕ್ಕೆ ಸಂತಾಪ ಸಲ್ಲಿಸಿತು. ನ್ಯಾಯಕ್ಕಾಗಿ, ಹಕ್ಕಿಗಾಗಿ ಹೋರಾಡುತ್ತಿರುವ ಐದು ರೈತರ ಹತ್ಯೆಯನ್ನು ಖಂಡಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ಉಡುಗೊರೆಗಳ ಆರ್ಭಟವಿಲ್ಲ, ಆಯಾರ, ಪಟ್ಟಿಯ ಗೋಜಲು ಇಲ್ಲ. ಬೆಸಗೊಂಡವರೆಲ್ಲ ಬಂದರು ಕಲ್ಯಾಣ ಮಹೋತ್ಸವ ನೋಡಿ ಖುಷಿಗೊಂಡು ಹೋದರು. ದುಡಿಯುವ ವರ್ಗದ ಪ್ರತಿನಿಧಿಗಳಾದ ರೈತ ದಲಿತ ಸಂಘಟನೆಯ ಮುಖಂಡರೆಲ್ಲ ಸೇರಿ ಸಭೆಗೊಂದು ಕಳೆ ತಂದರು.

ಸಿ.ಪಿ.ಐ.ಎಂ. ನ ಚೆನ್ನಪ್ಪ ಆನೇಗುಂದಿಯವರು, ಗುರುಮಿಠಕಲ್ ನ ಶಾಂತವೀರ ಸ್ವಾಮೀಜಿ, ಚಿಗರಹಳ್ಳಿಯ ಸಿದ್ದಬಸವ ಸ್ವಾಮೀಜಿಗಳಿಂದ ಸಭೆ ಕಳೆಕಟ್ಟಿತ್ತು. ಮುಂಜಾನೆ ಧ್ವಜಾರೋಹಣಕ್ಕಿಂತ ಪೂರ್ವದಲ್ಲಿ ಇಂಧೂದರ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಇಷ್ಟಲಿಂಗ ಪೂಜೆಗೆ ತನ್ನದೆ ಆದ ಮಹತ್ವವಿತ್ತು.

ಸತ್ಯಂಪೇಟೆಯ ಊರಿನವರು ಹೇಗೋ ಆ ಪರಿವಾರದ ಎಲ್ಲಾ ಶರಣ ಹಕ್ಕಿಗಳ‌‌ ಕಲರವ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ, ಗುರಪ್ಪ ಯಜಮಾನರ ಅಂಗಳದಲ್ಲಿ ಅನುರಣಿಸುತ್ತಿತ್ತು. ಸತ್ಯಂಪೇಟೆ ಮನೆತನದ ಎಲ್ಲಾ ಚಿಣ್ಣರರ ಚಿಲಿಪಿಲಿಯ ಜೊತೆಗೆ ಅವರ ರಕ್ತ ಸಂಬಂಧಿಗಳು, ವಿಚಾರ ಸಂಬಂಧಿಗಳಿಂದ ಸಾಯಂಕಾಲದವರೆಗೆ ಮಹಾಮನೆಯ ಅಂಗಳ ಚರ್ಚಾಕೂಟವಾಗಿ ಪರಿಣಮಿಸಿತ್ತು.

ಈ ಎಲ್ಲಾ ಚಟುವಟಿಕೆಗಳಿಗೆ ಕುಟುಂಬ ಹಿರಿಯರಾದ ವಿಶ್ವಾರಾಧ್ಯ ಹಾಗೂ ನೀಲಾಂಬಿಕೆಯವರ ಪ್ರೇರಕ ಶಕ್ತಿಯನ್ನು ಎಲ್ಲರೂ ಕೊಂಡಾಡುತ್ತಿದ್ದರು.

ವಿಶ್ವಾರಾಧ್ಯ ಸತ್ಯಂಪೇಟೆ

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.