Breaking News

ಸೆಪ್ಟೆಂಬರ್-೨೫ ರಂದು ಶ್ರೀ ಶಿವಯೋಗಿ ಶಿವಾಚಾರ್ಯರು ವಿರಚಿತಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಮತ್ತು ಪ್ರವಚನ ಶಿಬಿರದ ಸಮಾರೋಪ ಕಾರ್ಯಕ್ರಮ.

Sri Shivayogi Shivacharya passed away on September-25
Concluding program of Siddhanta Shikhamani Granth Parayana and Discourse Camp.

ಜಾಹೀರಾತು

ಗಂಗಾವತಿ: ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ (ರಿ) ಅರಳಹಳ್ಳಿ ಹಾಗೂ ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ ಮತ್ತು ಕನ್ನಡ ಜಾಗೃತಿ ಸಮಿತಿ (ರಿ) ಗಂಗಾವತಿ ಇವರುಗಳ ಸಹಯೋಗದಲ್ಲಿ ಸೆಪ್ಟೆಂಬರ್-೧೫ ರಿಂದ ೨೫ ರವರೆಗೆ ಗಂಗಾವತಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಕೊಟ್ಟೂರೇಶ್ವರ ಸ್ಕಾö್ಯನಿಂಗ್ ಸೆಂಟರ್ ಹತ್ತಿರವಿರುವ ಕನ್ನಡ ಜಾಗೃತಿ ಭವನದಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯರು ವಿರಚಿತ ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಮತ್ತು ಪ್ರವಚನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದ ಸಮಾರೋಪ ಕಾರ್ಯಕ್ರಮವು ಇದೇ ಸೆಪ್ಟೆಂಬರ್-೨೫ ರಂದು ಬೆಳಗ್ಗೆ ೭:೦೦ ಗಂಟೆಯಿAದ ಪೂಜ್ಯ ಷ.ಬ್ರ. ೧೦೮ನೇ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೆಬ್ಬಾಳ ಇವರಿಂದ ಇಷ್ಟಲಿಂಗ ಮಹಾಪೂಜೆ, ತದನಂತರ ಪೂಜ್ಯ ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಮಿಗಳು ಎಮ್ಮಿಗನೂರು ಹಾಗೂ ಪೂಜ್ಯ ಶ್ರೀ ಮ.ನಿ.ಪ್ರ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಗಂಗಾವತಿ, ಶ್ರೀ ಮ.ನಿ.ಪ್ರ ಮಹಾಲಿಂಗ ಮಹಾಸ್ವಾಮಿಗಳು ಸುವರ್ಣಗಿರಿ ಮಠ ಯದ್ದಲದೊಡ್ಡಿ, ಷ.ಬ್ರ. ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಮುಕ್ತಗುಚ್ಚ ಕಲ್ಮಠ ಮಾನವಿ, ಸುಳೇಕಲ್ ಬೃಹನ್ಮಠದ ಶ್ರೀ ಭುವನೇಶ್ವರಯ್ಯ ತಾತನವರು, ಅರಳಹಳ್ಳಿ ಬೃಹನ್ಮಠದ ಶ್ರೀ ಗವಿಸಿದ್ಧಯ್ಯ ತಾತನವರು ಅವರ ನೇತೃತ್ವದಲ್ಲಿ ಧರ್ಮಸಭೆ, ಗಣಾರಾಧನೆ, ಮಹಾಗಣಾರಾಧನೆ (ಪ್ರಸಾದ ವಿತರಣೆ) ನಡೆಯಲಿದ್ದು, ಸಾಯಂಕಾಲ ೬ ರಿಂದ ೮ ರವರೆಗೆ ಅಬಲೂರು ಚರಂತಿಮಠದ ಪ.ಪೂ ಶ್ರೀ ಗಂಗಾಧರ ದೇವರು ಇವರಿಂದ ೧೧ ದಿನಗಳವರೆಗೆ ಸಾಗಿಬಂದ ಪ್ರವಚನ ಶಿಬಿರದ ಕೊನೆಯ ದಿನದ ಸಮಾರೋಪ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾಡಿನ ಅನೇಕ ಪೂಜ್ಯರು, ಜನಪ್ರತಿನಿಧಿಗಳು, ಗಣ್ಯರು, ಮುಖಂಡರುಗಳು, ಸರ್ವ ಸಮಾಜಗಳ ಸದ್ಭಕ್ತರು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದ ನೇತೃತ್ವವನ್ನು ಅರಳಹಳ್ಳಿ ರಾಜರಾಜೇಶ್ವರಿ ಬೃಹನ್ಮಠದ ಪೂಜ್ಯ ಶ್ರೀ ಶರಣಬಸವ ತಾತನವರು ವಹಿಸಿಕೊಳ್ಳಲಿದ್ದಾರೆ. ದಿನನಿತ್ಯದ ನಿರೂಪಣೆಯನ್ನು ಡಾ. ಷಣ್ಮುಖಸ್ವಾಮಿ ಕಡ್ಡಿಪುಡಿ ವಕೀಲರು ಹಾಗೂ ಶ್ರೀಮತಿ ಡಾ. ಅರ್ಚನಾ ಹಿರೇಮಠ ರವರು ನಡೆಸಿಕೊಂಡು ಬಂದಿರುತ್ತಾರೆ.

About Mallikarjun

Check Also

ಪತ್ರಕರ್ತರ ಬೆನ್ನೆಲುಬಾಗಿ ನಿಲ್ಲಲಿದೆ ಮಾಧ್ಯಮ ಪತ್ರಕರ್ತರ ಸಂಘ.

The Media Journalists Association will stand as the backbone of journalists. ಉಡುಪಿ:ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರು ಸೇರಿದಂತೆ …

Leave a Reply

Your email address will not be published. Required fields are marked *