Donation of Rs 1 lakh for temple development
ಗಂಗಾವತಿ.:ತಾಲೂಕಿನ ಮರಳಿ ಗ್ರಾಮದಲ್ಲಿರುವ ಗಂಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ೧ ಲಕ್ಷ ರೂಗಳನ್ನು ದೇಣಿಗೆಯಾಗಿ ಶುಕ್ರವಾರ ನೀಡಲಾಯಿತು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಕಾಂತೆಪ್ಪ ಮಾತನಾಡಿ, ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ದೇವಸ್ಥಾನ, ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅಷ್ಟೇ ಅಲ್ಲದೆ ಸ್ವಸಹಾಯ ಗುಂಪುಗಳನ್ನು ನಿರ್ಮಾಣ ಮಾಡಿ, ಮಹಿಳೆಯರು ಸ್ವಯಂ ಉದ್ಯೋಗವನ್ನು ಮಾಡಲು ಪ್ರೋತ್ಸಾಹಿಸಲಾಗಿದೆ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಂಸ್ಥೆಯಿAದ ಸದ್ಯ ಮರಳಿ ಗ್ರಾಮದ ಗಂಗಾಪರಮೇಶ್ವರಿ ದೇವಸ್ತಾನಕ್ಕೂ ಸಹ ೧ ಲಕ್ಷ ರೂಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು. ನಂತರ ಗಂಗಾಮತ ಸಮಾಜದ ಎಂ.ಹೊನ್ನಪ್ಪ ಅವರಿಗೆ ಡಿಡಿ ಮೂಲಕ ವಿತರಣೆ ಮಾಡಲಾಯಿತು.
ಮುಖಂಡರಾದ ಎಂ.ಬಸಪ್ಪ ಉಮಲೂಟಿ, ರಮೇಶ ಕುಲಕರ್ಣಿ, ಜಂಗ್ಲಿ ಈರಪ್ಪ, ನಾಗರಾಜ ಬುಕನಟ್ಟಿ, ರಾಮಣ್ಣ ಕುಂಟೋಜಿ, ಪಂಪಾಪತಿ ಸಾಹುಕಾರ, ಶಿವಲಿಂಗಪ್ಪ ಮಡ್ಡೇರ, ಶಿವಕುಮಾರ, ಅಕ್ಷತಾ ತಂಗಡಗಿ, ವಿಜಯಲಕ್ಷಿö್ಮ ಹಾಗೂ ಇತರರಿದ್ದರು.