Breaking News

ನಿಕಟ ಪೂರ್ವ ತರಗತಿಯಲ್ಲಿರುವ ವಿದ್ಯಾರ್ಥಿನಿಯನ್ನು ಅಥಿತಿ ಶಿಕ್ಷಕಿ ಎಂದು ದಾಖಲೆ ಸೃಷ್ಟಿ ಅಕ್ರಮ ನೇಮಕಾತಿ

Illegal recruitment of a student in the immediate pre-class as a guest teacher


ಗಂಗಾವತಿ ನಗರದ ಸರಕಾರಿ ಬಾಲಕಿಯರ ಎಂ.ಎನ್.ಎಂ.ಶಾಲೆಯಲ್ಲಿ ಬಿ.ಇ.ಡಿ. ವಿದ್ಯಾರ್ಥಿಗಳ ನಿಕಟ ಪೂರ್ವ ತರಗತಿಯಲ್ಲಿರುವ ವಿದ್ಯಾರ್ಥಿನಿಯನ್ನು ಅಥಿತಿ ಶಿಕ್ಷಕಿ ಎಂದು ದಾಖಲೆಗಳನ್ನು ಸೃಷ್ಟಿಮಾಡಿ ಅಕ್ರಮ ನೇಮಕಾತಿ ಮಾಡಿಕೊಂಡು ಬಿಲ್ ಎತ್ತುವಳಿ ಮಾಡಿದ ಶಾಲೆಯ ಉಪ ಪ್ರಾಚಾರ್ಯರ ಮೇಲೆ ೧೯೮೩ ಶಿಕ್ಷಣ ಕಾಯ್ದೆಯ ಪ್ರಕಾರ ಅಮಾನತ್ತು ಮಾಡಲು ಆಗ್ರಹಿಸಿ ಎಸ್.ಎಫ್.ಐ. ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಮುಂದೆ ಪ್ರತಿಭಟನೆ. ನಡೆಸಿದರು.


ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸದ ಹಿತ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸುತ್ತೊಲೆ ಹೊರಡಿಸಿದ್ದು ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಅತಿ ಹೆಚ್ಚು ಇರುವ ಕಾರಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯು ವಿಶೇಷವಾಗಿ ಗುರುತಿಸಿ ಈ ಭಾಗದ ಮಕ್ಕಳ ಹಿತದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಅನುದಾನದ ಅಡಿಯಲ್ಲಿ ಈ ಭಾಗದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ “ಅಕ್ಷರಮಿತ್ರ”ಯೋಜನೆ ಹೆಸರಿನಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿತ್ತು.

ಸರಕಾರಿ ಶಾಲೆಗಳ ಮಕ್ಕಳ ಹಿತದೃಷ್ಟಿಯಿಂದ ಈ ಎರಡು ಅವಕಾಶಗಳನ್ನು ಸಮರ್ಪಕವಾಗಿ ಮುಖ್ಯೋಪಧ್ಯಾಯರು ಸದುಪಯೋಗ ಮಾಡಿಕೊಳ್ಳಬೇಕಾಗಿತ್ತು. ಆದರೆ ಈ ಎರಡು ಅವಕಾಶಗಳನ್ನು ದುರ್ಬಳಕೆ ಮಾಡಿಕೊಳ್ಳುವುದರ ಮೂಲಕ ಗಂಗಾವತಿ ನಗರದ ಸರಕಾರಿ ಬಾಲಕೀಯರ ಎಂ.ಎನ್.ಎಂ ಪ್ರೌಢಶಾಲಾ ವಿಭಾಗದ ಉಪ ಪ್ರಾಚಾರ್ಯರು ಬಿ.ಇ.ಡಿ. ೪ನೇ ಸೆಮಿಷ್ಟರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಸರಕಾರದ ಅತಿಥಿ ಶಿಕ್ಷಕ ಹಾಗೂ ಅಕ್ಷರ ಮಿತ್ರ ಯೋಜನೆಯ ಲಾಭ ಮಾಡಿಕೊಂಡು ಪ್ರಶಿಕ್ಷಣಾರ್ಥಿ ವಿದ್ಯಾರ್ಥಿನಿಯನ್ನು ವಿಜ್ಞಾನ ವಿಭಾಗದ ಸಿ.ಬಿ.ಜೆಡ್ ಮಗಿಸಿದ್ದಾರೆ ಎಂದು ಅತಿಥಿ ಶಿಕ್ಷಕಿ ಎಂದು ನೇಮಕಾತಿ ಮಾಡಿಕೊಳ್ಳುವುದರ ಮೂಲಕ ಶಿಕ್ಷಣ ಇಲಾಖೆಯ ಯೋಜನೆಯನ್ನು ಸ್ವಂತ ಭಳಕೆಗೆ ಮಾಡಿಕೊಳ್ಳುವುದರ ಮೂಲಕ ಈ ಶಾಲೆಯ ಉಪ ಪ್ರಾಚಾರ್ಯರು ೧೯೮೩ರ ಶಿಕ್ಷಣ ಕಾಯ್ದೆಯನ್ನು ಸಂಫೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ.

ಇಂತಹ ಶಿಕ್ಷಕರು ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕಿ, ಸಮಾಜದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಮಾದರಿಯಾಗಬೇಕಾದ ಶಿಕ್ಷಕರ ವೃತ್ತಿಗೆ ಮಸಿ ಬಳೆಯುವುದರ ಮೂಲಕ ತಮ್ಮ ನಿಜವಾದ ಬಣ್ಣವನ್ನು ಪ್ರದರ್ಶಿಸಿದ್ದಾರೆ.

ಶಾಲೆಗೆ ಪಾಠ ಮಾಡಲು ಬಂದಿರುವ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕು ಶಿಕ್ಷಣ ಇಲಾಖೆಗೆ ಮತ್ತು ಪ್ರಶಿಕ್ಷಣ ವಿದ್ಯಾರ್ಥಿಗಳಿಗೆ ಮೋಸ ವಂಚನೆ, ಮಾಡಿ ಆಗಸ್ಟ್ ಮತ್ತು ಸಪ್ಟೆಂಬರ್ ಎರಡು ತಿಂಗಳ ಗೌರವ ಧನವನ್ನು ಪಡೆದಿರುತ್ತಾರೆ. ಉಪ ಪ್ರಾಚಾರ್ಯರ ಮೋಸದ ಕೈಚಳಕದಿಂದ ಗಂಗಾವತಿ ನಗರದ ಸರಕಾರಿ ಬಾಲಕೀಯರ ಎಂ.ಎನ್.ಎಂ ಪ್ರೌಢಶಾಲಾ ವಿಭಾಗದಲ್ಲಿ ಅಕ್ರಮ ನೇಮಕಾತಿ ನಡೆದಿರುತ್ತದೆ ಅದ್ದರಿಂದ ಈ ಕೂಡಲೇ ತಾವುಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ೩ ದಿನಗಳ ಒಳಗಾಗಿ ಈ ಉಪ ಪ್ರಾಚಾರ್ಯರನ್ನು ಅಮಾನತ್ತು ಮಾಡಿ ನಂತರ ತನಿಖೆ ಮಾಡಿ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಭಾರತ ವಿದ್ಯಾರ್ಥಿ ಫಡರೇಷನ್ ಎಸ್.ಎಫ್.ಐ.ಸಂಘಟನೆಯು ಇಂದು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಿ ಒತ್ತಾಯ ಮಾಡಿದರು, ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ, ತಾಲ್ಲೂಕ ಅಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ಶಿವಕುಮಾರ, ಉಪಾಧ್ಯಕ್ಷ ನಾಗರಾಜ ಉತ್ತುನೂರ, ಪ್ರಮುಖರಾದ ಬಾಲಜಿ, ಶರೀಫ್, ನಾಗರಾಜ, ಪ್ರಶಾಂತ, ಬಸಯ್ಯ ಹಿರೇಮಠ, ಶಂಕರ, ಬಾಳಪ್ಪ ಹುಲಿಹೈದರ ಇತರರು ಇದ್ದರು.

         

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.