Breaking News

ಎಲ್ಲರನ್ನೂಸಮಾನತೆಯಿಂದ ಕಾಣುವ ಭಾವ ನಮ್ಮದು—ಸದಾನಂದ ಬಂಗೇರ

Ours is the feeling of treating everyone equally – Sadananda Bangera

ಯಲಬುರ್ಗಾ— ಗ್ರಾಮಾಭಿವ್ರದ್ದಿ ಉದ್ದೇಶದಿಂದ ಸ್ಥಾಪಿತವಾದ ಗ್ರಾಮೀಣಾಭಿವ್ರದ್ಧಿ ಸಂಸ್ಥೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನಜಾಗ್ರತಿ ಸಮೀತಿಗಳಿವೆ. ನಮ್ಮ ಸಂಸ್ಥೆಯಲ್ಲಿ ಎಲ್ಲರನ್ನೂ ಸಮಾನತೆಯಿಂದ ನೋಡುವ ಭಾವ ನಮ್ಮದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಬಿ.ಸಿ.ಟ್ರಸ್ಟಿನ ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ ರವರು ಹೇಳಿದರು.
ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯವರು ಆಯೋಜಿಸಿದ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುಡಿತ ಮಾಡಲಿಕ್ಕೆ ಹೆಚ್ಚು ಪ್ರಚೋದನೆ ನೀಡುವ ಜನರೆ ಸಮಾಜದಲ್ಲಿ ಹೆಚ್ಚಾಗಿದ್ದಾರೆ . ಆದರೆ ನಮ್ಮ ಮಂಜುನಾಥ ಸಂಸ್ಥೆ ಕುಡಿಯುವದನ್ನು ಬಿಡಿಸುವ ಕೆಲಸ ಮಾಡುವ ಮೂಲಕ ಅವರ ಜೀವನ ಒಳ್ಳೆಯ ಕಾರ್ಯಕ್ಕೆ ಎಲ್ಲರೂ ಸಹಕರಿಸಿ ಎಂದು ಅವರು ಕರೆ ನೀಡಿದರು.
ಜಿಲ್ಲಾ ಜನಜಾಗ್ರತಿ ಸಮಿತಿಯ ಉಪಾಧ್ಯಕ್ಷರಾದ ಸಂಗಣ್ಣ ಟೆಂಗಿನಕಾಯಿ ˌ ಸದಸ್ಯರಾದ ಶಕುಂತಲಾ ಪಾಟೀಲˌ ವೀರಣ್ಣ ನಿಂಗೋಜಿ ˌ ಶರಣಬಸಪ್ಪ ದಾನಕೈ ˌಮಹಾಂತೇಶ ಗಾಣಗೇರ ˌ ಗುರಪ್ಪ ಅಂಗಡಿರವರು ಮಾತನಾಡಿದರು .
ಗ್ರಾ.ಪಂ ಅಧ್ಯಕ್ಷೆ ಮಂಜುಳಾˌ ಲಲಿತಾˌ ˌ ಹಂಚ್ಯಾಳಪ್ಪ ಪೂಜಾರˌ ಶಿವಪುತ್ರಪ್ಪ ಮಲಿಗೋಡದˌ ರಾಯಪ್ಪ ಮಾಡಲಗೇರಿˌ ಹನುಮಂತಪ್ಪ ಬೇರಗಿ ˌ ಖಾನಸಾಬ ಮುಧೋಳˌ ಬಸವರಾಜ ಅಂಗಡಿˌ ಕಳಕಪ್ಪ ಯಡಿಯಾಪೂರˌ ಬಸನಗೌಡ ಹಿರೇಗೌಡರˌ ವೀರಪ್ಪ ಕುಂಬಾರ ಇನ್ನೀತರರು ಭಾಗಿಗಳಾಗಿದ್ದರು.
ಈಶ್ವರ ರಾಠೋಡ ಸ್ವಾಗತಿಸಿದರುˌ ಶೀವಲೀಲಾ ಪ್ರಾರ್ಥಿಸಿದರು. ಯೋಜನಾಧಿಕಾರಿ ಸತೀಶ ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು

About Mallikarjun

Check Also

ಜ್ಞಾನ ವಿಕಾಸ ಸಂಯೋಜಕೀಯರು ಹಮ್ಮಿಕೊಂಡ ಸಭೆ ಯಶಸ್ವಿ

ಗಂಗಾವತಿ: ತಾಲೂಕಿನ ಜ್ಞಾನ ಸಂಯೋಜಕೀಯರ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯ  ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ  ಪ್ರಕಾಶ ರಾವ್ ದೀಪ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.