Narayan Rao Vaidya to Sringeri under Shankar Tattva Abhiyan
ಗಂಗಾವತಿ 15, ಶೃಂಗೇರಿ ಪೀಠದ ಉಭಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ವಿಧುಶೇಖರ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಇದೇ ದಿನಾಂಕ 26ರಂದು ಕೊಪ್ಪಳ ಜಿಲ್ಲಾ ಶಾರದಾ ಶಂಕರ ಭಜನಾ ಮಂಡಳಿ ಹಾಗೂ ಗಂಗಾವತಿಯ ಶ್ರೀ ಶಾರದಾ ಭಜನಾ ಮಂಡಳಿಯ ನೇತೃತ್ವದಲ್ಲಿ ಶೃಂಗೇರಿಯ ಶಾರದಾ ಪೀಠಕ್ಕೆ ಪ್ರಯಾಣ ಬೆಳೆಸಲಾಗುವುದು ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ, ಹೇಳಿದರು ಅವರು ಗುರುವಾರದಂದು, ಈ ಕುರಿತಂತೆ ಶಂಕರ್ ಮಠದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಶೃಂಗೇರಿಯ ಉಭಯ ಜಗದ್ಗುರುಗಳ ಸೇವೆಗಾಗಿ ಶಾಂಕರ ತತ್ವ ಅಭಿಯಾನದ ಅಡಿಯಲ್ಲಿ ಶೃಂಗೇರಿಗೆ ಹೋಗಲಾಗುತ್ತಿದ್ದು, ದಿನಾಂಕ 27ರಂದು ಬೆಳಿಗ್ಗೆ ಶಾರದಾಂಬೆ ದರ್ಶನ ಬಳಿಕ ಉಭಯ ಜಗದ್ಗುರುಗಳಿಗೆ ವಿಶೇಷ ಪೂಜಾ ಭಜನೆಯ ಮೂಲಕ ಸೇವೆಯನ್ನು ಸಮರ್ಪಿಸಲಾಗುವುದು, ಎಂದು ತಿಳಿಸಿದ ಅವರು ಇದೇ ದಿನಾಂಕ 19ಂದು ಶ್ರೀ ಶ್ರೀಪಾದವಲ್ಲಭರವರ ಜಯಂತೋತ್ಸವ ಶ್ರೀಮಠದಲ್ಲಿ ಆಯೋಜಿಸಲಾಗಿದ್ದು, ಸರ್ವರೂ ಭಾಗವಹಿಸುವಂತೆ ಮನವಿ ಮಾಡಿದರು, ಹಾಗೆ ವೇದಮೂರ್ತಿ ಮಹೇಶ್ ಭಟ್ ಜೋಶಿಯವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಶ್ರೀ ಶಾರದಾಂಬೆಯ ಶರಣ್ ನವರಾತ್ರಿ ಉತ್ಸವ ಅಕ್ಟೋಬರ್ 15 ರಿಂದ ಪ್ರಾರಂಭಗೊಂಡು ದಿನಾಂಕ 24ಂದು ವಿಜಯದಶಮಿ ಆಚರಣೆಯೊಂದಿಗೆ ಸಂಪನ್ನ ಗೊಳ್ಳುವುದು, ಎಂದು ವಿವಿಧ ವಿಷಯಗಳ ಕುರಿತು ಮಾತನಾಡಿದರು, ಈ ಸಂದರ್ಭದಲ್ಲಿ ಮಹೇಶ್ ಭಟ್ಟ ಜೋಶಿ, ಜಗನ್ನಾಥ ಅಳವಂಡಿ ಕರ್, ಶಂಕ್ರಣ್ಣ ದತ್ತಣ್ಣ, ಹೊಸಳ್ಳಿ ಶೇಷಗಿರಿ, ಗಡಾದ್, ವೇಣು ಅಳವಂಡಿ, ಶ್ರೀಧರ ರಾಘವೇಂದ್ ಅಳವಂಡಿಕ್ ರ ಶಾರದಾ ಭಜನಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು