Inspection of Officers: Welcome to Ashokaswamy Heroor.
ಗಂಗಾವತಿ:ಮಾಧ್ಯಮಗಳ ವರದಿಗಳನ್ನು ಆಧರಿಸಿ, ಗಂಗಾವತಿ ನಗರದ ಔಷಧ ವ್ಯಾಪಾರಿ ಮಳಿಗೆಗಳ ಪರಿವೀಕ್ಷಣೆ ನಡೆಸಿದ ಬಳ್ಳಾರಿ ವಿಭಾಗದ ಉಪ ಔಷಧ ನಿಯಂತ್ರಕರ ನೇತೃತ್ವದ ಸಹಾಯಕ ಔಷಧ ನಿಯಂತ್ರಕರ ತಂಡದ ಕಾರ್ಯವನ್ನು ನಾನು ಸ್ವಾಗತಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮತ್ತು ರಾಜ್ಯದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.
ಇದರಿಂದ ಸಾರ್ವಜನಿಕರ ಅನುಮಾನ,ಮಾಧ್ಯಮಗಳ ಅಪಾದನೆ ಮತ್ತು ಔಷಧ ವ್ಯಾಪಾರಿಗಳ ನಿಯಮ ಉಲ್ಲಂಘನೆಗಳಿಗೆ ಉತ್ತರ ದೊರಕಿದೆ.ಇನ್ನಷ್ಟು, ಮತ್ತಷ್ಟು ಪರಿವೀಣೆಗಳು ನಮ್ಮ ಜಿಲ್ಲೆಯಾಧ್ಯಂತ ನಡೆಯಲಿ ಎಲ್ಲಾ ಔಷಧ ವ್ಯಾಪಾರಿಗಳಲ್ಲಿ ಜಾಗ್ರತೆ ಮೂಡಲಿ ಎಂಬುದು ನಮ್ಮ ನಮ್ಮ ಸಂಘದ ಆಶಯವಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಡ್ರಗ್ ಪೆಡ್ಲರ್ ಗಳ ಬಗ್ಗೆ ಆದಷ್ಟು ಬೇಗ ಮಾಹಿತಿ ದೊರೆತು,ಜಿಲ್ಲೆಯ ಜನತೆ ನಿರಾಳವಾಗಲಿ ಎಂದು ಆಶಿಸುತ್ತೇನೆ.ಇಂತಹ ಪರಿವೀಕ್ಷಣೆಗೆ ನಮ್ಮ ಸಂಘದ ಬೆಂಬಲ ಸದಾ ಇರುತ್ತದೆ.ಅಮಲು ಬರಿಸುವ ಔಷಧಗಳು ಎಲ್ಲಿಂದ ಸರಬರಾಜು ಆಗುತ್ತಿವೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ನೆರವು ನೀಡಲು ಸಂಘದ ಎಲ್ಲಾ ಸದಸ್ಯರಿಗೆ ತಿಳಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಔಷಧ ವ್ಯಾಪಾರಿಗಳಿಂದ ಇಂತಹ ಔಷಧ ಸರಬರಾಜು ಆದಲ್ಲಿ ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ಸುಲಭದ ಕೆಲಸ.ಆದರೆ ವೈಧ್ಯರ ಮಾದರಿ ಔಷಧಗಳ ಮಾರಾಟದ ಮೂಲಕ ಇವು ಸರಬರಾಜು ಆಗುತ್ತಿದ್ದರೆ ಪತ್ತೆ ಕಾರ್ಯ ಸ್ವಲ್ಪ ವಿಳಂಭವಾಗುವುದು ಅಷ್ಟೇ.ಆದರೆ ಒಂದಿಲ್ಲೊಂದು ಒಂದು ದಿನ ಡ್ರಗ್ ಪೆಡ್ಲರ್ ಗಳು ಪತ್ತೆ ಅಗಲಿದ್ದಾರೆ ಎಂಬ ವಿಶ್ವಾಸವನ್ನು ಹೇರೂರ ವ್ಯಕ್ತಪಡಿಸಿದ್ದಾರೆ.