Breaking News

ಬಿಜೆಪಿ ಎಸ್ಟಿ ಮೋರ್ಚಗೆ ವೀರಭದ್ರಪ್ಪ ನಾಯಕ ಆಯ್ಕೆ

Veerabhadrappa elected leader of BJP ST Morcha

ಗಂಗಾವತಿ,09:  ಕರ್ನಾಟಕ ರಾಜ್ಯ  ಎಸ್ಟಿ ಮೋರ್ಚಾ ಕಾರ್ಯಕಾರಿಣಿ  ಪದಾಧಿಕಾರಿಗಳ ಆಯ್ಕೆಯಲ್ಲಿ ಗಂಗಾವತಿ ನಗರದ ಬಿಜೆಪಿ ಹಿರಿಯ ನಾಯಕ ವೀರಭದ್ರಪ್ಪ ನಾಯಕ ವಡ್ರಟ್ಟಿ ಇವರನ್ನು ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿ ಬಿಜೆಪಿ ಎಸ್ಟಿ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ದಿನಾಂಕ 6.3.2024 ರಂದು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ. ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿತವಾಗಿ ನಿರ್ವಹಿಸುತ್ತಾ, ಬಿಜೆಪಿ ಸಂಘಟನೆಯನ್ನು ತಳಮಟ್ಟದಲ್ಲಿ ಸಂಘಟಿಸುತ್ತಾ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ, ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸಬೇಕೆಂದು ರಾಜ್ಯಾಧ್ಯಕ್ಷ ಬಂಗಾರ ಹನುಮಂತು ಆದೇಶ ಪತ್ರದಲ್ಲಿ ಹೇಳಿದ್ದಾರೆ. ಸ್ಥಳೀಯ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಶಿಫಾರಸ್ಸಿನ ಮೇಲೆ ಬಿಜೆಪಿ ರಾಜ್ಯ ಎಷ್ಟು ಮೋರ್ಚ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾಗಿರುವ ವೀರಭದ್ರಪ್ಪ ನಾಯಕ ವಡ್ರಟ್ಟಿ ಇಂದು ಮಾಜಿ ಶಾಸಕರಾಗಿ ಭೇಟಿಯಾಗಿ ಸನ್ಮಾನ ಮಾಡಿದರು ಮತ್ತು  ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಪದಾಧಿಕಾರಿಗಳ ಆಯ್ಕೆಯನ್ನು ಬದಲಾವಣೆ ಮಾಡಿ ರಾಜ್ಯಾದ್ಯಂತ ಬಿಜೆಪಿ ಹೊಸ ಯುವಪಡೆಯನ್ನು ಕಟ್ಟಿಕೊಟ್ಟಿದೆ. ಅದರಂತೆ ಗಂಗಾವತಿ ನಗರದ ವೀರಭದ್ರಪ್ಪ ನಾಯಕ ವಡ್ರಹಟ್ಟಿ ಇವರು  ಪಕ್ಷದಲ್ಲಿ ಹಿರಿಯರಿದ್ದು. ಮತ್ತು ಪಕ್ಷ ಸಂಘಟನೆಯಲ್ಲಿ ಮುಂಚೂಣಿಯ ಜವಾಬ್ದಾರಿಯನ್ನು ಹೊತ್ತುಕೊಂಡು ಬಿಜೆಪಿಗಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ಇಂಥವರ ಸೇವೆಯನ್ನು ಗುರುತಿಸಿ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಣಿಗೆ ಸದಸ್ಯರನ್ನಾಗಿ ನೇಮಕ ಮಾಡಿದ್ದು ಬಿಜೆಪಿಗೆ ಈ ಭಾಗದಲ್ಲಿ ಮತ್ತಷ್ಟು ಬಲಬಂದಂತಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಿಗಿ, ನಗರ ಘಟಕ ಅಧ್ಯಕ್ಷ ಕಾಶೀನಾಥ ಚಿತ್ರಗಾರ, ನಗರ ಕಾರ್ಯದರ್ಶಿ ಸಂಗಯ್ಯ ಸ್ವಾಮಿ ಸಂಶಿ ಮಠ, ಮಾಜಿ ನಗರಸಭಾ ಅಧ್ಯಕ್ಷ ಹನುಮಂತಪ್ಪ ನಾಯಕ, ಮಾಜಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಹೊಸಮಲಿ ಹನುಮಂತಪ್ಪ, ವಾಲ್ಮೀಕಿ ಸಮಾಜ ಹಿರಿಯರಾದ ಜೋಗದ ನಾರಾಯಣಪ್ಪ ನಾಯಕ, ಪಕ್ಷದ ಮುಖಂಡರಾದ ಟಿ.ಆರ್.ರಾಯಬಾಗಿ, ಪರಶುರಾಮ ನಾಯಕ, ಮೋಹನ್ ಸಿಂಗ್, ವಿಟ್ಟಪ್ಪ, ಕನಕಪ್ಪ ನಾಯಕ, ಹನುಮಂತಪ್ಪ ಶಿಲ್ಪಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.