Breaking News

ಶಿವರಾತ್ರಿಯಶುಭದಿನದಂದುಶ್ರೀಶಂಕರಾಚಾರ್ಯ ವಿರಚಿತ ಮೂರು ಸ್ತೋತ್ರಗಳಲೋಕಾರ್ಪಣೆನಾರಾಯಣರಾವ್ ವೈದ್ಯ

On the auspicious day of Shivratri Presentation of three hymns composed by Sri Shankaracharya Narayana Rao Vaidya

ಗಂಗಾವತಿ: ಸನಾತನ ಧರ್ಮದ ಪ್ರವರ್ತಕರಾದ ಶ್ರೀ ಶಂಕರಾಚಾರ್ಯರ ವಿರಚಿತ ಮೂರು ಸ್ತೋತ್ರಗಳ ಲೋಕಾರ್ಪಣೆ ಶಿವರಾತ್ರಿಯ ಶುಭದಿನದಂದು ದೇಶ ಸೇರಿದಂತೆ ವಿದೇಶದಲ್ಲಿನ ಶಂಕರ ಮಠದಲ್ಲಿ ಲೋಕಾರ್ಪಣೆಗೊಳಿಸಲಾಯಿತು ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ಶಂಕರ ಮಠದಲ್ಲಿ ಶುಕ್ರವಾರದಂದು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಕಲ್ಯಾಣ ವೃಷ್ಠಿ ಸ್ಥಾವ, ಶಿವ ಪಂಚಾಕ್ಷರ ನಕ್ಷತ್ರ ಮಾಲಸ್ತೋತ್ರ ಹಾಗೂ ಲಕ್ಷ್ಮಿ. ನರಸಿಂಹ ಕರುಣಾರಸ ಮೂರು ಸ್ತೋತ್ರಗಳ ಕಿರುಹೊತ್ತಿಗೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶೃಂಗೇರಿ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸತ್ವ ಪಡೆದ ಸುವರ್ಣ ಮಹೋತ್ಸವದ ಅಂಗವಾಗಿ ಮೂರು ಕಿರು ಸ್ತೋತ್ರಗಳ ಜೊತೆಗೆ ವರ್ಷವಿಡೀ ಸರ್ವ ಸನಾಂಗಕ್ಕೆ ಅನ್ವಯವಾಗುವ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ಶಿವರಾತ್ರಿ ಪ್ರಯುಕ್ತ ಶ್ರೀ ಚಂದ್ರಮೌಳೇಶ್ವರ ಪರಿವಾರ ದೇವರುಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ಶಾರದಾ ಶಂಕರ ಭಜನಾ ಮಂಡಳಿ ಹಾಗೂ ಇತರೆ ಭಜನಾ ಮಂಡಳಿ ಸದಸ್ಯರಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಹಾಗೆಯೇ ಶಂಕರ ಮಠದ ಪ್ರಧಾನ ಅರ್ಚಕ ಕುಮಾರಭಟ್ ಅವರು ೫೦ನೇ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಶಂಕರ ಮಠದಲ್ಲಿ ಕಳೆದ ೨೦ ವರ್ಷಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ ಪ್ರಯುಕ್ತ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೆಬ್ಬಳ್ಳಿಯ ಅವಧೂತರ ಆಶಯದಂತೆ ರಾಮತಾರಕ ಜಪ ಬರವಣಿಗೆಗಾಗಿ ಭಕ್ತರಿಗೆ ಉಚಿತವಾಗಿ ನೋಟ್‌ಪುಸ್ತಕ ಹಾಗೂ ಲೇಖನಿಯನ್ನು ನೀಡಿ ಯಾವುದೇ ಜಾತಿ, ಮತ ಭೇದವಿಲ್ಲದೇ ಶ್ರೀರಾಮ್, ಜಯರಾಮ್ ಜಯಜಯರಾಮ್ ಎಂಬ ತಾರಕ ಮಂತ್ರವನ್ನು ಬರೆಯಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ, ಶೇಷಗಿರಿ, ಶ್ರೀಪಾದ್ ಮುಧೋಳಕರ್, ಬಾಲಕೃಷ್ಣ ದೇಸಾಯಿ, ಶ್ರೀನಿವಾಸ್ ಕರಮುಡಿ, ವೇಣು ಅಳವಂಡಿ, ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀದೇವಿ ಪುರಾಣಿಕ್, ಕಾರ್ಯದರ್ಶಿ ಗಾಯತ್ರಿ ಅಳವಂಡಿಕರ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.