Breaking News

ರಾಜಶೇಖರ್ ಹಿಟ್ನಾಳ್ ಗೆಲುವು ನಿಶ್ಚಿತ:ರಾಹುಲ್ ಗಾಂಧಿ ಪ್ರಧಾನಿ ಖಚಿತ ಪ್ರಕಾಶ ಭಾವಿ ವಿಶ್ವಾಸದ ನುಡಿ.

ಕಲ್ಯಾಣ ಸಿರಿ:ಕಾರಟಗಿ, ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಶೇಖರ್ ಹಿಟ್ನಾಳ್ ಗೆಲುವು ನಿಶ್ಚಿತ ಮತ್ತು ಈ ಬಾರಿ ದೇಶದಲ್ಲಿ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿಯಾಗುವುದು ಖಚಿತ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ತಾಲೂಕು ಪಂಚಾಯತಿಯ ಮಾಜಿ ಅಧ್ಯಕ್ಷರಾದ ಪ್ರಕಾಶ ಭಾವಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮದವರದೊಂದಿಗೆ ರಾಜಕೀಯ ವಿದ್ಯಾಮಾನದ ಬಗ್ಗೆ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರಿಕೆಯ ಕುರಿತು ಮಾತನಾಡಿದರು. ದೇಶದ ಮೂಲೆ ಮೂಲೆಯಲ್ಲಿ ಜನರು ಈ ಬಾರಿ ನರೇಂದ್ರ ಮೋದಿ ಅವರ ಕಳಪೆ ಸಾಧನೆಯ ಬಗ್ಗೆ ಬೇಸರ ಗೊಂಡಿದ್ದು, ಅಭಿವೃದ್ಧಿಯ ಚಿಂತನೆಯುಳ್ಳ, ಸರ್ವಜನಾಂಗದ ಹಿತ ಚಿಂತಕರಾದ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿಯಾಗಬೇಕೆಂದು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಮಗು ಕೂಡಾ ರಾಹುಲ್ ಗಾಂಧಿಯವರ ಬಗ್ಗೆ ಅಭಿಮಾನ ವ್ಯಕ್ತಪಡಿಸುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಮೋದಿ ಬರೀ ಹಸಿ ಸುಳ್ಳುಗಳನ್ನು ಹೇಳಿ, ದೇಶದ ಜನರ ದಾರಿ ತಪ್ಪಿಸಿದ್ದಾರೆ. ಭಾರತವನ್ನು ಜಗತ್ತಿನ ಬಲಿಷ್ಟ ರಾಷ್ಟ್ರವನ್ನಾಗಿಸುವಲ್ಲಿ ರಾಹುಲ್ ಗಾಂಧಿಯವರು ಸಕಲ ಶಕ್ತಿವ.ತರಾಗಿದ್ದು, ಅವರು ಪ್ರಧಾನಮಂತ್ರಿ ಯಾದಲ್ಲಿ ಅಭೂತಪೂರ್ವ ಕೆಲಸ ಮಾಡಲಿದ್ದಾರೆ. ಬಿಜೆಪಿ ಪಕ್ಷದ ಅದೆಷ್ಟೋ ಮುಖಂಡರು, ಕಾರ್ಯಕರ್ತರು ಕೂಡಾ ಈ ದೇಶಕ್ಕೆ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕೆಂಬ ಇಚ್ಛೆ ಆಂತರಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೂನ್ಯ ಸ್ಥತಿಯಲ್ಲಿದ ಭಾರತವನ್ನು ದೊಡ್ಡ – ಆರ್ಥಿಕ ರಾಷ್ಟ್ರವನ್ನಾಗಿಸುವಲ್ಲಿ ಜವಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಬಹಳಷ್ಟು ಶ್ರಮಿಸುವುದರ ಜೊತೆಗೆ ದೇಶದ ಸಾಮಾನ್ಯ ಜನರ ಯೋಗ ಕ್ಷೇಮೆದಲ್ಲೂ ವಿಶೇಷ ಯೋಜನೆ ರೂಪಿಸಿದ್ದಾರೆ. ಜನರ ಆರೋಗ್ಯ, ರಕ್ಷಣೆ, ಶಿಕ್ಷಣ, ಉದ್ಯೋಗಕ್ಕಾಗಿ ಗಾಂಧಿ ಕುಟುಂಬವು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ದೇಶದುದಕ್ಕೂ ಕಾಂಗ್ರೆಸ್ ಬಲಿಷ್ಟ ತಂಡವನ್ನು ನಿರ್ಮಾಣ ಮಾಡಿರುವ ರಾಹುಲ್ ಅವರು ಈ ಭಾರಿಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ. ಅವರ ಸಂಕಲ್ಪ ನಿಶ್ಚಿತವಾಗಿ ಈಡೇರಿಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ರಾಜಶೇಖರ ಹಿಟ್ನಾಳ್ ಅವರಿಗೆ ಘೋಷಿಸಿದ ಪ್ರಾರಂಭದಲ್ಲಿಯೇ ನಮಗೆ ಗೆಲುವು ನಿಶ್ಚಿತವಾಯಿತು. ಆದರೆ ಪಕ್ಷದ ಮುಖಂಡರು ಕಾರ್ಯಕರ್ತರ ಸಾಮೂಹಿಕ ಕೆಲಸದಿಂದ ಚುನಾವಣೆ ಸಮೀಪಸುತ್ತಿದ್ದಂತೆ ಕಾಂಗ್ರೆಸ್ ಗೆಲುವಿನ ನಾಗಾಲೋಟದಲ್ಲಿದೆ ಎಂಬ ನಂಬಿಕೆಯೂ ಹೆಚ್ಚಾಯಿತು. ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಉತ್ಸಾಹ ಹೆಚ್ಚಿದ್ದು, ಮತದಾನದ ಕೊನೆಯ ಕ್ಷಣದವರೆಗೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ.

ವಿಶೇಷವಾಗಿ ಸಚಿವ ಶಿವರಾಜ್ ತಂಗಡಗಿ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಭಯ್ಯಪೂರ್ ಅವರು ಜಿಲ್ಲೆಯ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಉತ್ಸಾಹ ನೀಡಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಗೆಲುವಿಗೆ ಶ್ರಮಿಸಿದ್ದಾರೆ. ಕೊಪ್ಪಳ ಲೋಕಸಭಾ ವ್ಯಾಪ್ತಿಯ ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಗಿಂತಲೂ ಅತಿ ಹೆಚ್ಚಿನ ಲೀಡ್ ಬರಲಿದೆ. ಕನಿಷ್ಟ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು ಗೆಲುವು ಸಾಧಿಸಲಿದ್ದಾರೆ. ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಂತೂ ಬಿಜೆಪಿ ಆಟಕುಂಟು, ಲೆಕ್ಕಕ್ಕೆ ಇಲ್ಲ ಎಂಬಂತಾಗಿದ್ದು, ನಮಗೆ ಹೆಚ್ಚಿನ ಲೀಡ್ ಬರಲಿದೆ. ಬೇರೆ ವಿಧಾನಸಭಾ ಕ್ಷೇತ್ರಗಳಿಗಿಂತಲೂ ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ಕಾಂಗ್ರೆಸ್ ಪಕ್ಷಕ್ಕೆ ಬರುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು, ರಾಹುಲ್ ಗಾಂಧಿ ಹೆಸರಿನ ಪ್ರಭಾವ ಮತ್ತು ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮ ಕೊಪ್ಪಳ ಕ್ಷೇತ್ರದಲ್ಲಿ ನಿಶ್ಚಿತವಾಗಿ ಕೈ ಕೇಕೆ ಹಾಕಲಿದೆ. ಲೋಕಸಭೆ ಚುನಾವಣೆ ಮತದಾನ ಮುಕ್ತಾಯವಾಗಿದೆ ಎನ್ನುವಷ್ಟರಲ್ಲಿ ನಮ್ಮ ಭಾಗದಲ್ಲಿ ಈಶಾನ್ಯ ಪದವಿಧರ ಕ್ಷೇತ್ರದ ಎಂಎಲ್‌ಸಿ ಚುನಾವಣೆ ಘೋಷಣೆಯಾಗಿದ್ದರಿಂದ ನಾವೆಲ್ಲರು ಮತ್ತೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಪಕ್ಷದ ನಿರ್ಧಾರದಂತೆ ಎಲ್ಲಾ ಕ್ಷೇತ್ರದಲ್ಲಿ ಚುನಾವಣೆ ಸಭೆ, ಪದವಿಧರ ಮತದಾರರ ಭೇಟಿ ಮತ್ತಿತರ ಕಾರ್ಯಗಳು ಪ್ರಾರಂಭವಾಗಿವೆ. ದೊಡ್ಡ ಕ್ಷೇತ್ರವಾಗಿರುವುದರಿಂದ ಸ್ಥಳೀಯವಾಗಿ ಕಾರ್ಯಕರ್ತರು ಮತ್ತು ಮುಖಂಡರು ಹೆಚ್ಚು ಸಕ್ರೀಯವಾಗಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಅವರು ಈಗಾಗಲೇ ಒಮ್ಮೆ ಎಂಎಲ್‌ಸಿಯಾಗಿದ್ದರಿಂದ ಅವರಿಗೆ ಅನುಭವವಿದೆ. ಪದವಿಧರ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ನಿಶ್ಚಿತವಾಗಿ ಆಯ್ಕೆ ಮಾಡಲಿದ್ದಾರೆ ಎಂದು ಭಾವಿ ಪ್ರಕಾಶ ಅವರು ವಿಶ್ವಾಸ ವ್ಯಕ್ತಪಡಿಸಿದರು.

About Mallikarjun

Check Also

ಅನಿಲ ಬಡಚಿರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಅಥಣಿ:-*ವಿಪತ್ತುಗಳಂತ ತುರ್ತು ಸಂದರ್ಭದಲ್ಲಿ ಅತ್ಯುತ್ತಮ ಸೇವೆಗಾಗಿ ಅಥಣಿ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಅನಿಲ ಬಡಚಿರವರಿಗೆ ಮುಖ್ಯ ಮಂತ್ರಿ ಚಿನ್ನದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.