Breaking News

೨೫೦ ನಕಲಿ ಪಾಸ್‌ಗಳನ್ನು ವಶಪಡಿಸಿಕೊಂಡ ವಿಧಾನಸೌಧ ಭದ್ರತಾ ತಂಡ

Vidhansouda security team seized 250 fake passes

ಬೆಂಗಳೂರು, ಜುಲೈ ೧೫: ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದ ಭದ್ರತಾ ಪಡೆ ೨೫೦ಕ್ಕೂ ಹೆಚ್ಚು ನಕಲಿ ಪಾಸ್‌ಗಳನ್ನು ವಶಪಡಿಸಿಕೊಂಡಿದ್ದು, ಈ ಘಟನೆಯ ನಂತರ, ಪೊಲೀಸರು ಇಂತಹ ನಕಲಿ ಪಾಸ್‌ ಬಳಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ೪ ಜುಲೈ ೭ ರಂದು ೭೨ ರ‍್ಷದ ತಿಪ್ಪೇರುದ್ರ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದ ನಂತರ ವಿಧಾನಸೌಧ ಭದ್ರತಾ ಅಧಿಕಾರಿಗಳು ಅರ‍್ಟ್ ಆಗಿದ್ದಾರೆ. ಅದೇ ದಿನ ಸ್ಪೀಕರ್ ಯುಟಿ ಖಾದರ್ ಸಭೆ ನಡೆಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು.
ಈ ಬಗ್ಗೆ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ಎಸ್‌ಡಿ ಶರಣಪ್ಪ, ನಾವು ಸಾಮಾನ್ಯವಾಗಿ ಕಟ್ಟುನಿಟ್ಟಾದ ಭದ್ರತಾ ತಪಾಸಣೆಗಳನ್ನು ಹೊಂದಿರುತ್ತೇವೆ. ಬಜೆಟ್ ಅಧಿವೇಶನದಲ್ಲಿ ನಡೆದ ಘಟನೆಯ ನಂತರ, ನಾವು ಭದ್ರತೆಯನ್ನು ಹೆಚ್ಚಿಸಿದ್ದೇವೆ ಮತ್ತು ತಪಾಸಣೆಯನ್ನು ತೀವ್ರಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ನಾವು ಸುಮಾರು ೨೫೦ ನಕಲಿ ಪಾಸ್‌ಗಳನ್ನು ಪತ್ತೆ ಮಾಡಿ ಅವುಗಳನ್ನು ವಶಪಡಿಸಿಕೊಂಡಿದ್ದೇವೆ. ಹಲವಾರು ನೌಕರರು ಮತ್ತು ಶಾಸಕರ ಸಿಬ್ಬಂದಿ ಕೂಡ ಹಳೆಯ ಪಾಸ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇಂತಹ ಘಟನೆಗಳು ಮರುಕಳಿಸಿದರೆ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು. ಎಂಎಲ್‌ಎ, ಎಂಎಲ್‌ಸಿ‌ಗಳಿಗೆ ನೀಡಿರುವ ಪಾಸ್‌ಗಳನ್ನು ಕಲರ್ ಜೆರಾಕ್ಸ್ ಮಾಡಿ‌ ವಿಧಾನಸೌಧ ಬರುತ್ತಿದ್ದರು. ನಕಲಿ ಪಾಸ್‌ಗಳನ್ನ ಬಳಸಿ ಒಳ ಪ್ರವೇಶಿಸುವವರ ನಿಯಂತ್ರಣಕ್ಕೆ ವಿಧಾನಸೌಧಕ್ಕೆ ಪ್ರವೇಶ ನೀಡುವ ಎಲ್ಲಾ ಗೇಟ್‌ಗಳಲ್ಲಿ ಪ್ರತಿಯೊಬ್ಬರ ಪರಿಶೀಲನೆ ನಡೆಸಲಾಗುತ್ತಿದೆ. ಅವಧಿ‌ ಮುಗಿದಿರುವ ಪಾಸ್, ಕಲರ್ ಜೆರಾಕ್ಸ್ ಪಾಸ್‌ಗಳನ್ನು ಪೊಲೀಸರು ಸೀಜ್‌ ಮಾಡಿದ್ದಾರೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್‌ಗಳ ಬಳಕೆಯಾಗುತ್ತಿದೆ ಎನ್ನಲಾಗಿದೆ. ಸದ್ಯ ನಕಲಿ ಪಾಸ್‌ ಬಳಸುತ್ತಿದ್ದ ಎಲ್ಲರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪರಿಶೀಲನೆ ನಂತರ ಮಾಜಿ ಎಂಎಲ್ಎ, ಎಂಎಲ್‌ಸಿ ಪಾಸ್‌ಗಳೇ ನಕಲಿಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ವಿಧಾನಸೌಧ ಸಿಬ್ಬಂದಿ ಎಂದೇ ನಕಲಿ ಪಾಸ್ ಬಳಕೆ ಮಾಡಿರುವುದು ಕಂಡುಬಂದಿದೆ.
ಈ ನಕಲಿ ಪಾಸ್‌ಗಳ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಧಾನಮಂಡಲ ಜಂಟಿ ಅಧಿವೇಶನದೊಳಕ್ಕೆ ಬಜೆಟ್ ಮಂಡನೆ ದಿನವೇ (ಜುಲೈ ೦೭) ಅನುಮಾನಾಸ್ಪದ ವ್ಯಕ್ತಿ ಆಗಮಿಸಿದ್ದ ಬೆನ್ನಲ್ಲೆ ಜುಲೈ ೧೦ರಂದು ಮಹಿಳೆಯೊಬ್ಬಳು ವಿಧಾನಸೌಧಕ್ಕೆ ಚಾಕು ಇಟ್ಟುಕೊಂಡು ಬಂದಿದ್ದ ಘಟನೆ ನಡೆದಿತ್ತು. ಸೋಮವಾರ ಎಂದಿನಂತೆ ವಿಧಾನಸೌಧ ಕರ‍್ಯಕಲಾಪಗಳು ಆರಂಭವಾಗಿದ್ದವು.
ಈ ವೇಳೆ ವಿಧಾನನೌಧ ಪ್ರವೇಶಿಸಲು ಆಗಮಿಸಿದ ಮಹಿಳೆಯ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದ್ದು, ಆಕೆಯನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದ್ದರು. ಸದನಕ್ಕೆ ಶಾಸಕರ ಸೋಗಿನಲ್ಲಿ ವ್ಯಕ್ತಿಯೊಬ್ಬ ಪ್ರವೇಶಿಸಿದ ಹಿನ್ನೆಲೆಯಲ್ಲಿ ಭದ್ರತಾ ತಪಾಸಣೆ ಕರ‍್ಯ ಚುರುಕುಗೊಳಿಸಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಪ್ರವೇಶಿಸುವ ಪ್ರತಿ ವ್ಯಕ್ತಿ ಹಾಗೂ ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಒಳ ಬಿಡಲಾಗುತ್ತಿದೆ.
ವಿಧಾನಸೌಧ ಪ್ರವೇಶಿಸುವ ಎಲ್ಲಾ ಗೇಟ್‌ಗಳಲ್ಲಿ ರ‍್ತವ್ಯ ನರ‍್ವಹಿಸುವ ಸಿಬ್ಬಂದಿಗೆ ತಪಾಸಣೆ ಬಿಗಿಗೊಳಿಸುವಂತೆ ಸೂಚಿಸಲಾಗಿದೆ. ಕಾರು ಕೊಟ್ಟಿಲ್ಲ ಎಂದು ನಿಕಾಹ್ ಸಮಾರಂಭ ನಡೆದು ಎರಡು ಗಂಟಗಳಲ್ಲೇ ತ್ರಿವಳಿ ತಲಾಖ್ ಘೋಷಿಸಿದ ವರ! ಅಲ್ಲದೆ, ಬ್ಯಾಗ್ ಸೇರಿ ಇನ್ನಿತರ ವಸ್ತುಗಳನ್ನು ಇಟ್ಟುಕೊಂಡು ಅನುಮಾನಾಸ್ಪವಾಗಿ ಬರುವ ಎಲ್ಲರನ್ನು ಲೋಹಪರಿಶೋಧಕ ಯಂತ್ರಗಳ ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೆ, ಬ್ಯಾಗ್‌ಗಳನ್ನು ಕಡ್ಡಾಯವಾಗಿ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಅಧಿಕೃತ ಗುರುತಿನ ಚೀಟಿ ಅಥವಾ ಪಾಸ್‌ ಇದ್ದರೆ ಮಾತ್ರ ಒಳಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

About Mallikarjun

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.