Breaking News

ಕೊಪ್ಪಳ ಜಿಲ್ಲೆ ಕಂದಾಯ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು : ಚಂದ್ರಪ್ಪ ನಾಯಕ

Appropriate legal action should be taken against Koppal District Revenue Officers: Chandrappa Nayaka

ನವಲಿ ಹೋಬಳಿ ಕಂದಾಯ ನಿರೀಕ್ಷಕರಾದ ಹನುಮಂತಪ್ಪರವರು ಎರಡು ತಿಂಗಳಗಳಿಂದ ನವಲಿ ಹೋಬಳಿಯ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿರುವುದಿಲ್ಲ. ಹಾಗೂ ನವಲಿ ಹೋಬಳಿಯ ಕಛೇರಿಗೆ ಒಮ್ಮೆಯೂ ಬಂದಿರುವುದಿಲ್ಲ. ಇದರ ಬಗ್ಗೆ ಕೇಳಿದರೆ ನಿಮ್ಮ ಕೆಲಸ ಏನಿದ್ದರೂ ತಹಶೀಲ್ ಕಛೇರಿಗೆ ಬರಬೇಕು ನಾನು ನವಲಿ ಬರಲು ಸಮಯವಿಲ್ಲ ಎಂದು ಉತ್ತರವನ್ನು ನೀಡುತ್ತಿದ್ದಾರೆ. ಅಲ್ಲದೇ ಉಪ-ತಹಶೀಲ್ದಾರರಿಗೆ ಇದರ ಬಗ್ಗೆ ಕೇಳಿದರೆ ನನಗೆ ಆರ್.ಐ. ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲವೆಂದು ಹೇಳುತ್ತಿದ್ದಾರೆ. ಇದರಿಂದಾಗಿ ನವಲಿ ಹೋಬಳಿಯ ಎಲ್ಲಾ ರೈತರು ಪ್ರತಿ ದಿನ ಕಂದಾಯ ಇಲಾಖೆಯ ಎಲ್ಲಾ ಕೆಲಸ ಕಾರ್ಯಾಗಳಿಗಾಗಿ ಅವರ ಸಹಿ ಪಡೆಯಲು ಅವರು ಇದ್ದಲ್ಲಿಯೇ ಹೋಗಿ, ತಹಶೀಲ್ ಕಾರ್ಯಾಲಯದಲ್ಲಿ ಸಹಿ ಮಾಡಿಸಿಕೊಳ್ಳಬೇಕಾಗಿದೆ. ಇದರ ಬಗ್ಗೆ ನವಲಿ ಗ್ರಾಮ ಸಹಾಯಕರಿಗೆ ಕೇಳಿದರೆ ಆರ್.ಐ.ನವಲಿಗೆ ಬರುವುದಿಲ್ಲ. ನೀಮಗೆ ಕೆಲಸ ಮಾಡಿಸಿಕೊಳ್ಳಬೇಕಾದರೇ ಕನಕಗಿರಿ ಹೋಗಿ ಎಂದು ಹೇಳುತ್ತಿದ್ದಾರೆ. ನಾವು ಪ್ರತಿದಿನ ಸಾಕಷ್ಟು ದುಡ್ಡು ಖರ್ಚು ಮಾಡಿಕೊಂಡು ನವಲಿಯಿಂದ ಕನಕಗಿರಿಗೆ ಬರಬೇಕಾಗಿದೆ. ಅಲ್ಲದೇ ಸುಮಾರು 2 ತಿಂಗಳುಗಳಿಂದ 1 ದಿನವು ಸಹ ನವಲಿ ಹೋಬಳಿಯ ಯಾವುದೇ ಹಳ್ಳಿಗಳಿಗೆ ಬಂದಿರುವುದಿಲ್ಲ. ಇದರ ಬಗ್ಗೆ, ತಾವುಗಳು ಗಂಭೀರವಾಗಿ ವಿಚಾರಿಸಿ, ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಚಿರ್ಚಿನಗುಡ್ಡ ತಾಂಡದ ಗ್ರಾಮದ ನಿವಾಸಿಗಳಿಗೆ ಇಲ್ಲಿಯವರೆಗೂ ಹಕ್ಕು-ಪತ್ರಗಳನ್ನು ನೀಡಿರುವುದಿಲ್ಲ. ಈ ಹಿಂದೇ ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಸಹ ರಾಜಕೀಯ ಪಕ್ಷದವರು ಜನರ ಮಾತು ಕೇಳಿ, ತಮಗೆ ಬೇಕಾದವರಿಗೆ ಮಾತ್ರ ಮನೆಯ ಹಕ್ಕುಪತ್ರಗಳನ್ನು ನೀಡಿರುತ್ತಾರೆ. ಉಳಿದ ಅಮಾಯಕ ಅನಕ್ಷರಸ್ಥ ಫಲಾನುಭವಿಗಳ ಹಕ್ಕುಪತ್ರಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿರುತ್ತಾರೆ. ಇದರಿಂದಾಗಿ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ಮುಟ್ಟುತ್ತಿಲ್ಲ.
ನವಲಿ ಹೋಬಳಿ ಒಟ್ಟು 21ಹಳ್ಳಿಗಳ ಸುಮಾರು ನೂರಾರು ಫಾರಂ 57ಅರ್ಜಿಗಳನ್ನು ಇದುವರೆಗೂ ಪರಿಶೀಲನೇ ಮಾಡಿರುವುದಿಲ್ಲ. ಇದರ ಬಗ್ಗೆ ಕೇಳಿದರೇ ರೈತರಿಗೆ ತಿರುಗಿ ನೀನು ಅರ್ಜಿ ಹಾಕಿದ ಬಗ್ಗೆ ಏನಪ್ಪ ನಿನ್ನತ್ರ ಪ್ರೂಫ್ ಇದೆ, ಇದೇ ತೆಗೆದುಕೊಂಡು ಬಾ ಅಮೇಲೇ ನೋಡಣ ಎಂದು ಹೇಳುತ್ತಿದ್ದಾರೆ. ಅಲ್ಲದೇ ಸಾಕಷ್ಟು ರೈತರು ಸಲ್ಲಿಸಿದ ಫಾರಂ 57 ಅರ್ಜಿಗಳು ಇದುವರೆಗೂ ಕಂದಾಯ ನಿರೀಕ್ಷಕರು ಯಾವುದೇ ರೈತರ ಹೊಲದಲ್ಲಿ ಬಂದು ಪಂಚನಾಮ ಮಾಡಿರುವುದಿಲ್ಲ. ನಿನಗೆ ಇದರ ಬಗ್ಗೆ ಸಂಬಂಧಪಟ್ಟ ಇಲ್ಲ ನಾವೆಲ್ಲ ನೋಡಿಕೊಳ್ಳುತ್ತೇವೆ ನೀನು ಈಗ ಹೋಗು ಎಂದು ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ.

ನವಲಿ ಹೋಬಳಿಯ ಆದಾಪೂರು ಗ್ರಾಮದ ಸರ್ವೆ ನಂ.74// ಸರಕಾರಿ ಗಾಯರಾಣ ಜಮೀನಿನಲ್ಲಿ ಹನುಮಮ್ಮ ಗಂ/ ಸಂಗಪ್ಪ ಬುಕನಟ್ಟಿ ಸಾ|| ಆದಾಪೂರು ಇವರಿಗೆ ದಿನಾಂಕ: 24-03-2023ರಲ್ಲಿ ಎಮ್.ನಂ.31 ವಹಿವಾಟು ಸಂಖ್ಯೆ.100/2022-23 ವರ್ಗಾವಣೆಯಂತೆ ಇವರಿಗೆ ಕಬ್ಬಾ ಇಲ್ಲದಿದ್ದರೂ ಸಹ ಡ್ಯೂಬಲಿಕೇಟ್ ಪಹಣಿ ಎಂದು ಗೊತ್ತಿದ್ದರೂ ಸಹ ಇವರ ಹೆಸರಿಗೆ ಪೋತಿ ವಿರಾಸತ್ ಎಂದು ವಿ:8-00 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಪಹಣೀ ಮಾಡಿಕೊಟ್ಟಿರುತ್ತಾರೆ. ಹೀಗೆ ಸಾಕಷ್ಟು ಲಂಚದ ಆಸೆಗೆ ಯಾವ ಗ್ರಾಮಕ್ಕೂ ಬರದೇ ಸರಕಾರದ ಆಸ್ತಿಯನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸದೇ ತಮಗೆ ಇಷ್ಟಬಂದವರಿಗೆ ಹಕ್ಕುಪತ್ರ ನೀಡುವುದು. ಸರಕಾರಿ ಕೊಟ್ಟಿ ಪಹಣಿ ಮಾಡಿಕೊಡುವುದು, ರೈತರಿಗೆ ಬೆದರಿಕೆ ಹಾಕುವುದು, ನವಲಿ ಹೋಬಳಿಗೆ ಬರದೇ ತಹಶೀಲ್ ಕಾರ್ಯಾಲಯದಲ್ಲಿ ಕುಂತು ತಹಶೀಲ್ದಾರ ರೀತಿ ವರ್ತಿಸುವ ಇವರನ್ನು ಕೂಡಲೇ ಅಮಾನತುಗೊಳಿಸಿ. ಮತ್ತು ಸದ್ರಿಯವರು ಈ ಹಿಂದೆ ಗಂಗಾವತಿ ತಾಲೂಕಿನ ಮರಳಿ ಹೋಬಳಿಯಲ್ಲಿ ಆರ್.ಐ. ಎಂದು ಕಾರ್ಯಾನಿರ್ವಹಿಸುವಾಗ ಅನೇಕ ಅಕ್ರಮಗಳನ್ನು ಮಾಡಿ. ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಅಮಾನತು ಆಗಿದ್ದು, ಮಾನ್ಯ ಶಿವರಾಜ ಎಸ್.ತಂಗಡಗಿ ಮಾನ್ಯ ಉಸ್ತುವಾರಿ ಸಚಿವರು ಕೊಪ್ಪಳ ಇವರ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಪುನಃ ಆರ್.ಐ.ಎಂದು ಕೆಲಸ ಮಾಡುತ್ತಾ ಮತ್ತು ಮಾನ್ಯ ಮಾಜಿ ಶಾಸಕರು ಶ್ರೀ ಬಸವರಾಜ ಧಡೇಸುಗೂರು ಇವರ ಅವಧಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಸ್ಮಶಾನ ಉದ್ಘಾಟನೆ ಮಾಡಿ ಶಿಷ್ಟಚಾರ ಉಲ್ಲಂಘನೆ ಮಾಡಿ ಪುನಃ ಅಮಾನತು ಆಗಿ ಮತ್ತೆ ಅವರ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಆರ್.ಐ. ಎಂದು ಮುಂದುವರೆದಿರುತ್ತಾರೆ. ಇವರ ಈ ವರ್ತನೆಯಿಂದ ಇವರನ್ನು ಗಂಗಾವತಿ ವಿಧಾನಸಭೆಗೆ ವರ್ಗಾವಣೆ ಮಾಡಿದರೂ ಕೂಡ ಪುನಃ ತನ್ನ ಮೇಲಾಧಿಕಾರಿಗಳಿಗೆ ಲಂಚವನ್ನು ನೀಡಿ, ಪ್ರಸ್ತುತ ಆರ್.ಐ. ನವಲಿಯಲ್ಲಿ ಕಾರ್ಯಾನಿರ್ವಹಿಸುತ್ತಿದ್ದಾರೆ. ನವಲಿ ಹೋಬಳಿಯಲ್ಲಿ ಅನೇಕ ಅಕ್ರಮ ಮಾಡಿದ್ದು, ಇವರ ವಿರುದ್ಧ ಅನೇಕೆ ದೂರುಗಳನ್ನು ನೀಡಿದ್ದರೂ ಕೂಡ ಇದರಲ್ಲಿ ಕಂದಾಯ ಇಲಾಖೆ ಅನೇಕ ಅಧಿಕಾರಿಗಳು ಇವನನ್ನು ಬಚಾವ್‌ ಮಾಡಲು ಇವನ ಮೇಲೆ ಯಾವದೇ ದೂರು ಬಂದರು ಯಾವುದೇ ಕ್ರಮ ಕೈಗೊಳ್ಳದೇ ಕಡತವನ್ನು ಮುಚ್ಚಿಟ್ಟಿರುತ್ತಾರೆ. ಮತ್ತು ಸದ್ರಿಯವರು ನವಲಿ ಹೋಬಳಿಯಲ್ಲಿ ಅಕ್ರಮ ಉಸುಗು ಸಾಗಾಟ ಮಾಡಲು ಉಸುಗು ದಂಧೆಕೋರರಿಂದ ತಿಂಗಳ ಮಾಮೂಲಿ ವಸೂಲಿ ಮಾಡುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರಿ ಹಾನಿ ಉಂಟು ಮಾಡಿರುತ್ತಾರೆ. ಮತ್ತು ಇಲ್ಲಿಯವರೆಗೂ ಯಾವುದೇ ದಂಡವನ್ನು ಹಾಕದೇ ಬೇಜವಬ್ದಾರಿಯಂದ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸದ ಕೇಂದ್ರ ಸ್ಥಾನ ನವಲಿಯಾಗಿದ್ದರೂ ಅಲ್ಲಿ ಯಾವದೇ ಮನೆಯನ್ನು ಮಾಡದೇ ಬೇರೆ ತಾಲೂಕಿನಿಂದ ತಮಗೆ ಬೇಕಾದ ಸಮಯದಲ್ಲಿ ರೈತರಿಂದ ಲಂಚವನ್ನು ಸ್ವೀಕರಿಸಲು ಮಾತ್ರ ನವಲಿಗೆ ಬರುತ್ತಾರೆ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಬೇರೆ ಕಡೆ ಮನೆಯನ್ನು ಮಾಡಿಕೊಂಡಿರುತ್ತಾರೆ.


ಇವರುಗಳ ಮೇಲೆ ನಾವು ಮಾಡಿದಂತಹ ದೂರುಗಳು..
1) ದಿ: 07-08-2023ರಂದು ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಇವರಲ್ಲಿ ನೀಡಿದ ದೂರು.
2) ದಿ: 09-08-2023ರಂದು ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಇವರಲ್ಲಿ ನೀಡಿದ ದೂರು.
3) ದಿ: 07-08-2023 ಮಾನ್ಯ ಸಹಾಯಕ ಆಯುಕ್ತರು, ಕೊಪ್ಪಳ ಇವರಲ್ಲಿ ನೀಡಿದ ದೂರು
4) ದಿನಾಂಕ: 21- 10-2023 ರಂದು ಮಾನ್ಯ ಪ್ರಾದೇಶಿಕ ಆಯುಕ್ತರು, ಕಲ್ಬುರ್ಗಿ, ಇವರಿಗೆ ನೀಡಿದ ದೂರು.
5) ದಿನಾಂಕ: 21-10-2023 ರಂದು ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ, ಇವರಿಗೆ ನೀಡಿದ ದೂರು.
6) ದಿನಾಂಕ: 21-10-2023 ರಂದು ಮಾನ್ಯ ಮಾನ್ಯ ಸಹಾಯಕ ಆಯುಕ್ತರು, ಕೊಪ್ಪಳ, ಇವರಿಗೆ ನೀಡಿದ ದೂರು.
7) ದಿ: 08-11-2023 ರಂದು ನವಲಿ ಹೋಬಳಿಯ ಆದಾಪೂರ ಗ್ರಾಮದ ಸರ್ವೆ ನಂ.74ರ ಮೇಲೆ ಮಾನ್ಯ ಲೋಕಯುಕ್ತ ಕೊಪ್ಪಳ ಇವರಲ್ಲಿ ದೂರು ಸಲ್ಲಿಸಿದ ಪ್ರತಿ.

ಹನುಮಂತಪ್ಪ ಕಂದಾಯ ನಿರೀಕ್ಷಕರು ನವಲಿ, ಇವರ ಮೇಲೆ ಇಷ್ಟೆಲ್ಲಾ ದೂರುಗಳನ್ನು ನೀಡಿದರೂ ಸಹ, ಇದನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳದೇ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು (ವಿಷಯ ನಿರ್ವಾಹಕರು, ವಿಷಯ ಶಿರಸ್ಥೆದಾರರು) ಇವರ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ, ಇವರನ್ನು ಕೂಡಲೇ ಅಮನತುಗೊಳಿಸಿ. ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಡವ ಶ್ರಮಿಕ ಆಮಯಾಕ ರೈತರಿಗೆ ದೀನದಲಿತರಿಗೆ ನ್ಯಾಯ ಒದಗಿಸಿಕೊಡಬೆಕೆಂದು ಹಾಗೂ ನಾನು ಮಾನ್ಯ ಪ್ರಾದೇಶಿಕ ಆಯುಕ್ತರು, ಕಲ್ಬುರ್ಗಿ ಇವರಲ್ಲಿ ಪಿಟಿಸಿಎಲ್ ಪ್ರಕರಣದ ಕುರಿತು ಮನವಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾನ್ಯ ಪ್ರಾದೇಶಿಕ ಆಯುಕ್ತರು, ಕಲ್ಬುರ್ಗಿ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ, ಮಾನ್ಯ ಸಹಾಯಕ ಆಯುಕ್ತರು, ಕೊಪ್ಪಳ ಇವರುಗಳು. ಸ್ಪಂದನೆ ಮಾಡದೇ ಅನೇಕ ಪಿಟಿಸಿಎಲ್ ಪ್ರಕರಣಗಳನ್ನು ಎಸ್.ಸಿ/ಎಸ್.ಟಿ ಜಾತಿಯವರ ಪರವಾಗಿ ಮಾಡದೇ ಸಾಮಾನ್ಯ ಜಾತಿಯವರ ಪರವಾಗಿ ಆದೇಶ ಮಾಡುತ್ತಿದ್ದಾರೆ. ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಆದಾಪೂರ ಗ್ರಾಮದ ಸರ್ವೆ ನಂ.74// ವಿಸ್ತೀರ್ಣ: 4-00 ಎಕರೆ ಜಮೀನನ್ನು ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನಾಯಕ ಜಾತಿಯ ಈರಪ್ಪ ತಂದೆ ಹನುಮಪ್ಪ ಇವರ ಭೂಮಿಯನ್ನು ಕುಂಬಾರ ಜಾತಿಯ ಹನುಮಂತ ತಂದೆ ಈರಪ್ಪ ಮತ್ತು ತಿಮ್ಮಣ್ಣ ತಂದೆ ಈರಪ್ಪ ಸಾ|| ಆದಾಪೂರ ಇವರ ಹೆಸರಿನಲ್ಲಿ ಪೋತಿ ವಿರಾಸತ್ ಎಂದು ಆಕ್ರಮವಾಗಿ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದು, ಇದರ ಕುರಿತು ಜನತಾ ದರ್ಶನ ಕಾರ್ಯಾಕ್ರಮ ದಿ:01-12-2023ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಂತರ ಕಾರ್ಯಾಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದರೂ ಸಹ ಕಂದಾಯ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿರುವುದಿಲ್ಲ. ಹಾಗೂ ಕಂದಾಯ ಅಧಿಕಾರಿಗಳ ಮೆಲೆ ಅನೇಕ ದೂರುಗಳನ್ನು ನೀಡಿದ್ದರೂ ಸಹ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು, ತಹಶೀಲ್ದಾರರು ವಿಷಯ ಸಿರಸ್ಥೆದಾರರು, ವಿಷಯ ನಿರ್ವಾಹಕರು, ನಾನು ನೀಡಿದಂತಹ ಅರ್ಜಿಗಳಿಗೆ ಯಾವದೇ ಪ್ರತಿಉತ್ತರ ನೀಡದೇ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಹಾಗೇನಾದರೂ ವಿಳಂಬ ಮಾಡಿದಲ್ಲಿ, ತಮ್ಮ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಎಂದು ಬಿ.ಎಸ್.ಆರ್ ರೈತ ಸಂಘ(ರಿ) ರಾಜ್ಯಾಧ್ಯಕ್ಷರು ಚಂದ್ರಪ್ಪ ನಾಯಕ ಹೇಳಿದ್ದಾರೆ.. ಮತ್ತು ಸನ್ಮಾನ್ಯ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು, ಸನ್ಮಾನ್ಯ ಆ‌ರ್.ಅಶೋಕ ವಿರೋಧ ಪಕ್ಷದ ನಾಯಕರು, ಸನ್ಮಾನ್ಯ ಕೃಷ್ಣ ಬೈರೇಗೌಡ ಮಾನ್ಯ ಕಂದಾಯ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು. ಇವರುಗಳಲ್ಲಿ ಒತ್ತಹಿಸಿದ್ದಾರೆ..

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.