The rain is coming, the crop is withering! The sun is burning like summer
ಮಾನ್ವಿ : ತಾಲೂಕಿನದ್ಯಂತ ಕಳೆದ ತಿಂಗಳು ಕೆಲ ದಿನ ಸುರಿದ ಮಳೆರಾಯ ಈಗ ಕಣ್ಮರೆಯಾಗಿ ಬೆಳೆ ಅನಾವೃಷ್ಟಿಯಿಂದ ಒಣಗುತ್ತಿದ್ದು ರೈತರಿಗೆ ನಷ್ಟದ ಭೀತಿ ಎದುರಾಗಿದೆ.
ಭೂಮಿಯಲ್ಲಿ ತೆವಾಂಶ ಕೊರತೆ, ಮುಗಿಲಿನತ್ತ ಮುಖ ಮಾಡಿದ ರೈತರು ಕಳೆದ ತಿಂಗಳು ಸ್ವಲ್ಪ ಮಟ್ಟಿಗೆ ಸುರಿದ ಹುದ್ದೆ ಮಳೆ ತಿಂಗಳ ಬಳಿಕ ಕೈಕೊಟ್ಟು ರಣಬಿಸಿಲಿನಿಂದ ಬೆಳೆಗಳೆಲ್ಲ ಒಣಗಲು ಆರಂಭವಾಗಿದ್ದು ಭೂಮಿಯಲ್ಲಿ ತೆವಾಂಶ ಕೊರತೆ ಬೆಳೆಗಳಿಗೆ ರೋಗದ ಬಾಧೆ ಹೆಚ್ಚಿಸಿದ್ದು ಬೆಳೆ ಉಳಿಸಿಕೊಳ್ಳಲು ರೈತರು ಬೊರ್ ವೆಲ್ ನೀರನ್ನು ನಂಬಿಕೊಂಡಿದ್ದಾರೆ ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಮಳೆ ಬಾರದಿದ್ದರೆ ಸಮಸ್ಯೆ ಇನ್ನಷ್ಟು ಉಲ್ಬಣಿಸಿ ಕೈಗೆ ಬರುವ ಬೆಳೆ ಒಣಗಿ ನಷ್ಟ ಅನುಭವಿಸುವಂತಾಗುವುದು ಎನ್ನುವುದು” ರೈತರ ಅಳಲು. ಸ್ವಲ್ಪ ಮೊಡವಾದರು ಮಳೆ ಬರುತ್ತದೆ ಎಂದು ಅನ್ನದಾತರನ್ನು ಮುಖ ಆಶಾಭಾವನೆ ಮುಗಿಲಿನತ್ತ ಮಾಡುವಂತೆ ಮಾಡಿದೆ. ಒಕ್ಕಲಿಗರ ದೊಡ್ಡ ನಂಬಿಕೆ ಉತ್ತರೆ ಮಳೆ ಬರಿ ಬಿಸಿಲು, ಮಳೆಯಾಗದೆ ಇನ್ನಷ್ಟು ಚಿಂತೆ
ತುಂಬಿದೆ ಮೊದಲಿನಿಂದಲೂ ರೈತರಿಗೆ ಒಂದು ದೊಡ್ಡ ನಂಬಿಕೆ ಮಳೆಗಾಲದಲ್ಲಿ ಯಾವ ಮಳೆ ಕೈಕೊಟ್ಟರು ಉತ್ತರೆ ಮಳೆ ರೈತರ ಬೆಳೆಗಳಿಗೆ ನೀರುಣಿಸುವ ಮೂಲಕ ಜೀವ ನೀಡುತ್ತದೆ ಒಣ- ಗಿದ ಪೈರು ಚಿಗುರುವುದುವುದು ಈ ಉತ್ತರೆ ಕಾರ್ತಿ ಮಳೆಯಿಂದ ಎನ್ನುವುದು ನಮ್ಮ ಹಿರಿಯರು ಉತ್ತರೆ ಕಾರ್ತಿ ಮಳೆ ಮಣ್ಣಿನ ಮಕ್ಕಳಾಗಿ ಭಾಷೆ ನೀಡಿದ ಮಳೆ ಕಾರ್ತಿ ಇದಾಗಿದೆ ಅದೊಂದು ಆಶಾಭಾವನೆ ನಮ್ಮಲ್ಲಿದೆ ಈ ಮಳೆ ಕಾರ್ತಿ ಬಂದಾಗಿನಿಂದ ಬೇಸಿಗೆ ಬಿಸಿಲು ನಾವು ಎರಡು ಎಕರೆ ಜೋಳ ಬಿತ್ತನೆ ಮಾಡಿದ್ದೇವೆ ಮಳೆರಾಯ ಕರುಣೆ ತೋರಿಸಬೇಕು ಎನ್ನುತ್ತಾರೆ. ಉಮಳಿಹೊಸೂರು ರೈತ ಲಚ್ಚುಮಯ್ಯ ನಾಯಕ.
ಬಾಕ್ಸ್ ಸುದ್ದಿ…
ಮಳೆ ಕೈಗೊಡುತ್ತಿದೆ. ರೈತ ಕಂಗಾಲಾಗಿದ್ದಾನೆ. ತುಂಗಭದ್ರ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟವೂ ಹೆಚ್ಚಿದ್ದು.ಕೆಳಭಾಗದ ರೈತರಿಗೆ ನೀರಿಲ್ಲ ಬೆಳೆಗಳು ಒಣಗುತ್ತಿವೆ ಸರ್ಕಾರ ಈ ಬಗ್ಗೆ ತುರ್ತು ಸಭೆ ನಡೆಸಬೇಕು. ರೈತರ ನೆರವಿಗೆ ಬರಬೇಕು.
ಬಸವರಾಜ ನಾಯಕ ಹಿರೇಕೊಟ್ನೆಕಲ್ ಜಿಲ್ಲಾಧ್ಯಕ್ಷರು
ರೈತ ಸಂಘ ಹಾಗೂ ಹಸಿರು ಸೇನೆ.