Breaking News

ಯುತ್ ಕಾಂಗ್ರೇಸ್ ಯುವಚೈತನ್ಯ ಸಮಾವೇಶ ಪೂರ್ವಭಾವಿ ಸಭೆ

Youth Congress Yuvachaitanya Conference Pre-meeting

ಜಾಹೀರಾತು

ಮಾನ್ವಿ: ಪಟ್ಟಣದ ಕಾಂಗ್ರೇಸ್ ಪಕ್ಷದ ಭಾರತ್ ಜೋಡೊ ಭವನದ ಆವರಣದಲ್ಲಿ ಮಾನ್ವಿ ತಾಲೂಕು ಯುತ್ ಕಾಂಗ್ರೇಸ್ ವತಿಯಿಂದ ನಡೆದ ಕಾಂಗ್ರೇಸ್ ಯುವಚೈತನ್ಯ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಯುತ್ ಕಾಂಗ್ರೇಸ್ ಮುಖಂಡರಾದ ಎನ್.ಎಸ್.ರವಿ ಬೋಸರಾಜು ಮಾತನಾಡಿ ಪಕ್ಷದ ಹಿರಿಯ ಮುಖಂಡರಾದ ರಾಹುಲ್ ಗಾಂಧಿಯವರು ದೇಶದಲ್ಲಿರುವ ಶೇ ೬೦ ರಷ್ಟು ಯುವ ಸಮುದಾಯಕ್ಕೆ ದೇಶವನ್ನು ಕಟ್ಟುವುದಕ್ಕೆ ಅವಕಾಶ ನೀಡುವುದಕ್ಕಾಗಿ ಪಕ್ಷವನ್ನು ಸಂಘಟಿಸುವಂತೆ ಕರೆ ನೀಡಿದ್ದಾರೆ. ಇಂದು ಕೇಂದ್ರ ಸರಕಾರವು ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿದ ಸಂವಿಧಾನವನ್ನು ಛಿದ್ರಗೊಳಿಸುವ ಹಾಗೂ ರಾಜ್ಯದಲ್ಲಿ ಜನಪ್ರಿಯ ಆಡಳಿತ ನೀಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಬಿ.ಜೆ.ಪಿ. ಪಕ್ಷದವರು ಅಪಪ್ರಚಾರ ನಡೆಸುತ್ತಿದ್ದಾರೆ ಹಾಗೂ ಸುಳ್ಳು ಅರೋಪಗಳನ್ನು ಮಾಡುತ್ತಿದ್ದಾರೆ ೨೦೨೧ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯ ಮಂತ್ರಿಗಳ ಕುಟುಂಬದವರಿಗೆ ನೀಡಿದ ನಿವೇಶನದ ಬಗ್ಗೆ ಬಿಜೆಪಿಯವರೇ ಅರೋಪ ಮಾಡುತ್ತಿದ್ದಾರೆ. ದೇಶದಲ್ಲಿ ಸಂವಿಧಾನ ರಕ್ಷಣೆಯನ್ನು ಮಾಡುವುದಕ್ಕೆ ಯುವಜನತೆ ಮುಂದೆ ಬರಬೇಕಾಗಿದೆ ಮಾನ್ವಿ ಪಟ್ಟಣದಲ್ಲಿ ಬೃಹತ್ ಯುವಚೈತನ್ಯ ಸಮಾವೇಶ ನಡೆಸಿ ಮುಖ್ಯಮಂತ್ರಿಗಳಿಗೆ ಬೆಂಬಲವನ್ನು ಸೂಚಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ರಾಜ್ಯ ಸಚಿವರು ಜನಪ್ರತಿನಿಧಿಗಳು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ಕಿರಲಿಂಗಪ್ಪ, ಹನುಮೇಶನಾಯಕ , ರಾಜಾ ಸುಭಾಷಚಂದ್ರ ನಾಯಕ, ಶರಣಬಸವನಗೌಡ, ದೊಡ್ಡಬಸಪ್ಪಗೌಡ, ರೌಡೂರುಮಹಾಂತೇಶ್‌ಸ್ವಾಮಿ, ಚಂದ್ರಶೇಖರ ಕುರ್ಡಿ, ಖಾಲೀದ್ ಖಾದ್ರಿ ಗುರು, ಜಯಪ್ರಕಾಶ, ನಾಗೇಶ, ರಾಮಕೃಷ್ಣ, ಬಾಲಸ್ವಾಮಿಕೊಡ್ಲಿ, ಉದಯ, ಶಿವರಾಜ್ ನಾಯಕ, ಹುಸೇನ್ ಬೇಗ್, ಕೆ.ಬಸವಂತಪ್ಪ, ಜಿಲಾನಿ ಖುರೇಷಿ, ಪ್ರವೀಣಕುಮಾರ, ಪ್ರೀತಂ ಕೊಡ್ಲಿ, ಜಿಶಾಂತ, ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.