
Celebrating festivals in villages creates a sense of pride: MLA M.R. Manjunath.

ಗ್ರಾಮಗಳಲ್ಲಿ ಹಬ್ಬಗಳನ್ನು ಆಚರಿಸುವುದರಿಂದ ಸ್ವಾಮರಸ್ಯ ಮೂಡುತ್ತದೆ : ಶಾಸಕ ಎಮ್ ಆರ್ ಮಂಜುನಾಥ್

ವರದಿ : ಬಂಗಾರಪ್ಪ .ಸಿ .
ಹನೂರ: ದೇಶದಲ್ಲಿ ನಮ್ಮ ಪೂರ್ವಿಕರು ಸಾಂಪ್ರದಾಯಕವಾಗಿ ಆಚರಣೆ ಮಾಡಿಕೊಂಡು ಬಂದಿರುವ ಧಾರ್ಮಿಕ ಸೇವಾ ಪೂಜಾ ಕಾರ್ಯಗಳನ್ನು ಹಿರಿಯರು ಮುಂದುವರಿಸಿಕೊಂಡು ಬಂದಿರುವುದು ಸಂತಸದ ವಿಷಯ ಎಂದು ಶಾಸಕ ಎಂ. ಆರ್. ಮಂಜುನಾಥ್ ಹೇಳಿದರು.
ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಶ್ರೀ ಬಣ್ಣದ ಮಾರಮ್ಮ ದೇವಸ್ಥಾನದ ಜೀರ್ಣೊದ್ದಾರ ಸಮಾರಂಭದಲ್ಲಿ ಗ್ರಾಮಸ್ಥರೊಂದಿಗೆ ಭಾಗವಹಿಸಿ ಬಣ್ಣದ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ವೇಧಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ದೇವಸ್ಥಾನಗಳು ಮಾನವನ ಮಾನಸಿಕ ನೆಮ್ಮದಿ ಕೇಂದ್ರವಾಗಿರುತ್ತದೆ ಇದರಿಂದ ಸಾಕಷ್ಟು ಸಂತೋಷವನ್ನು ಕಾಣಬಹುದು ಹಾಗೆಯೇ ನೆಂಟರಿಷ್ಟರು ಬಂಧು ಬಳಗ ಸ್ನೇಹಿತರುಗಳ ಸಂಬಂಧಗಳು ಗಟ್ಟಿಯಾಗುವುದಕ್ಕೂ ದೇವರ ಹೆಸರಿನಲ್ಲಿ ನಡೆಯುವ ಹಬ್ಬಗಳು ಸಹಕಾರಿಯಾಗಿರುತ್ತದೆ.
ದೇವಸ್ಥಾನಗಳ ಜೀರ್ಣೋದ್ಧಾರ ಹಬ್ಬದ ವಿಶೇಷ ದಿನಗಳು ದೂರದ ಸಂಬಂಧಗಳನ್ನು ಗಟ್ಟಿ ಮಾಡಲೆಂದೆ ನಮ್ಮ ಪೂರ್ವಿಕರು ವರ್ಷಕ್ಕೊಮ್ಮೆಯಾದರೂ ಇಂತಹ ಹಬ್ಬಗಳನ್ನು ಮಾಡುವ ಮೂಲಕ ಗ್ರಾಮದಲ್ಲಿ ಮಳೆ ಬೆಳೆಯಾಗಿ ಜನರೆಲ್ಲ ಸುಖ ಶಾಂತಿ , ನೆಮ್ಮದಿಯಿಂದ ಬದುಕಬೇಕೆಂಬು ಉದ್ದೇಶದಿಂದ ಹಿಂದಿನವರು ಕೈಗೊಂಡು ಮಾಡುತ್ತಿದ್ದ ಸಂಪ್ರದಾಯದ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಬರುವುದು ಸೂಕ್ತವಾಗಿದ್ದು ಇಂದಿನ ಯುವ ಪೀಳಿಗೆಯೂ ಸಹ ಪೂರ್ವಿಕರು ನಡೆದುಕೊಂಡ ದಾರಿಯಲ್ಲಿ ಅನುಸರಿಸಬೇಕಾಗಿ ತಿಳಿಸಿದರು .
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಗ್ರಾಮದಲ್ಲೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಾಕಷ್ಟು ಅನುದಾನ ನೀಡುವುದಾಗಿ ತಿಳಿಸಿದರು. ಅಲ್ಲದೆ ನಾನು ಒಬ್ಬ ಶಾಸಕನಾಗಿ ನನ್ನ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೇನೆ ಇನ್ನೂ ಹೆಚ್ಚಿನ ಜವಾಬ್ದಾರಿ ಇದ್ದು ನಿಮ್ಮೆಲ್ಲರ ಸಹಕಾರ ನನಗೆ ಬೇಕಾಗಿದೆ ನಾನು ಸಹ ನಿಮ್ಮ ಕಷ್ಟ ಸುಖಗಳಲ್ಲಿ ನಾನು ಒಬ್ಬನಾಗಿ ಭಾಗಿಯಾಗಿ ನಿಮ್ಮೊಡನೆ ಇರುವುದಾಗಿ ತಿಳಿಸಿದರು.
ಸ್ಮಶಾನ ಕ್ಕೆ ಜಾಗ ದೊರಕಿಸಿಕೊಡುವಂತೆ ಮನವಿ : ಗ್ರಾಮಸ್ಥರು ಈ ಭಾಗದಲ್ಲಿ ನಮ್ಮ ಸಮುದಾಯಗಳಿಗೆ ಸ್ಮಶಾನಕ್ಕೆ ಸ್ಥಳ ಇಲ್ಲದ ಕಾರಣ ಸ್ಮಶಾನಕ್ಕೆ ಜಾಗ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸ್ಮಶಾನಕ್ಕೆ ಸ್ಥಳವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು..
ಪಿಡಿಓ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಿಂದ ಮನವಿ : ಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕುಂಠಿತವಾಗಿದೆ ಚರಂಡಿಗಳು ಸ್ವಚ್ಛತೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ,ಸಾರ್ವಜನಿಕರ ಕೆಲಸ ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲ ಎಂದು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ದೊರೆ ಯನ್ನು ಈ ಕೂಡಲೇ ವರ್ಗಾವಣೆ ಮಾಡಲು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಶಾಸಕರು ಇದನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು.
ಇದೇ ಸಮಯದಲ್ಲಿ ಶಿವಮ್ಮಲ್ಲೇ ಗೌಡ, ಶಿವರಾಮು, ರಾಜಪ್ಪ,ನಾಡಗೌಡ,ಮಹೇಂದ್ರ, ಪುಟ್ಟಸ್ವಾಮಿ, ಮಲ್ಲಣ್ಣ,
ಜಾನಿ,ಮಲ್ಲೇಶ್,ಕೆಂಪ್ಪರಾಜು, ನಾಗೇಂದ್ರ,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ,
ಚಿನ್ನವೆಂಕಟ್, ಸಿಂಗನಲ್ಲೂರು ರಾಜಣ್ಣ,ಎಸ್. ಆರ್ ಮಹದೇವ್,ಸೇರಿದಂತೆ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.
