ಬಸವಣ್ಣನವರ ಅನುಭವ ಮಂಟಪ್ಪದಿಂದ ನಮ್ಮ ದೇಶವು ವಿಶ್ವಕ್ಕೆ ಮಾದರಿ :ಎಮ್ ಆರ್ ಮಂಜುನಾಥ್ .

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Basavanna's Anubhav Mantappa is a model for the world: MR Manjunath.




ಬಸವಣ್ಣನವರ ಅನುಭವ ಮಂಟಪ್ಪದಿಂದ ನಮ್ಮ ದೇಶವು ವಿಶ್ವಕ್ಕೆ ಮಾದರಿ :ಎಮ್ ಆರ್ ಮಂಜುನಾಥ್ .

ಜಾಹೀರಾತು

ವರದಿ: ಬಂಗಾರಪ್ಪ .ಸಿ.
ಹನೂರು:ಜಾತಿ ತಾರತಮ್ಯದ ವಿರುದ್ದ ಹೋರಾಡಿದ ಶ್ರೀ ಜಗಜ್ಯೋತಿ ವಿಶ್ವಗುರು ಬಸವಣ್ಣನವರು 12 ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ, ಸಹೋದರತೆ, ಸಹಬಾಳ್ವೆ, ಕಾಯಕ ನಿಷ್ಠೆಯ ಆದರ್ಶಗಳನ್ನು ಜಗಕ್ಕೆ ಸಾರಿದ್ದಾರೆ. ಇಂತಹ ದಾರ್ಶನಿಕ ಮಹನೀಯರ ತತ್ವ ಆದರ್ಶಗಳನ್ನು ನಾವು ಪಾಲಿಸಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಲು ಸಾಧ್ಯ. ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯ ಪಟ್ಟರು.

ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬಸವಣ್ಣ ರವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿದ ಶಾಸಕರು ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವುಗಳು ನಂತರ ಮರೆಯುತ್ತೇವೆ. ಸ್ವಾರ್ಥ ಮತ್ತು ನಾನು ಮೇಲು ಎಂಬ ನಾನತ್ವಗಳನ್ನು ಮೈಗೂಡಿಸಿಕೊಂಡರೆ. ಬಸವಣ್ಣ ರವರ ಸಮಾಜ ಸುಧಾರಣೆ ಆಗುವ ನಿಟ್ಟಿನಲ್ಲಿ ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ನೀವು ನಡೆಯಿರಿ ಅದನ್ನು ನೋಡಿ ನಮ್ಮ ಮುಂದಿನ ಪೀಳಿಗೆ ಕಲಿಯುತ್ತದೆ. ಇಂದು ನಾವು ನಮ್ಮ ಮಕ್ಕಳ ಮುಂದೆ ಎನು ಮಾಡುತ್ತೇವೆ ಅದನ್ನಗ ಅವರು ಸಹ ಅನುಸರಿಸುತ್ತಾರೆ. ಆಗಾಗಿ ಮಹನೀಯರ ಜಯಂತಿಗಳು ಒಂದು ದಿನಕ್ಕೆ ಸೀಮಿತವಾಗದೆ ಅವರ ಆದರ್ಶ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಆಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಎಂದರು.
ಮುಂದಿನ ದಿನಗಳಲ್ಲಿ ಸಮುದಾಯದ ವತಿಯಿಂದ ಪಟ್ಟಣದಲ್ಲಿ ಆಚರಣೆ ಮಾಡುವ ಬಸವೇಶ್ವರರ ಜಯಂತಿಗೆ ನನ್ನ ಸಂಪೂರ್ಣ ಸಹಕಾರವಿದೆ. ಅದೇ ರೀತಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಕಾಲಾವಕಾಶ ನೀಡಿ. ನಿಮ್ಮ ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಇದೇ ಸಮಯದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್,ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳಾದ ರೇಖಾ,ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್,ತಾಲೂಕು ಉಪಾಧ್ಯಕ್ಷರಾದ ಪ್ರತಿಮ ಮಹದೇವ್,ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್,ಮಾಜಿ ಚಾಮುಲ್ ಅಧ್ಯಕ್ಷರಾದ ಗುರುಮಲ್ಲಪ್ಪ,ಜಿಲ್ಲಾ ನಿರ್ದೇಶಕರಾದ ಬಸವರಾಜು,ಸಮುದಾಯದ ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ,ಟಿ ಸದಾಶಿವ ಮೂರ್ತಿ, ಉದ್ದನೂರು ಗಿರೀಶ್, ಜಿಕೆ ಹೊಸೂರು ಪ್ರಮೋದ್, ವಿನೋದ್,ಉಮೇಶ್,ಹಾಗೂ ಇನ್ನಿತರರು ಹಾಜರಿದ್ದರು.

Total Views: 0
Share This Article