Breaking News

ರಾಯರಡ್ಡಿಯವರ ಮೇಲೆ ಗೂಭೆ ಕೂರಿಸುವದು ಸರಿಯಲ್ಲ ; ಜ್ಯೋತಿ

It is not right to make an owl sitting on Rayardi; Jyoti


ಕೊಪ್ಪಳ : ರಾಜ್ಯದ ಮಾಜಿ ಸಚಿವರು, ಮಾಜಿ ಸಂಸದರೂ, ಹಾಲಿ ಶಾಸಕರೂ ಆಗಿರುವ ವಿದ್ಯಾವಂತ ಮತ್ತು ಪ್ರಜ್ಞಾವಂತ ಹಿರಿಯ ರಾಜಕಾರಣಿ ಬಸವರಾಜ ರಾಯರಡ್ಡಿ ಅವರು ಸದನದಲ್ಲಿ ಆನೆಗೊಂದಿ ವಲಯದ ಬಗ್ಗೆ ಮಾಡಿರುವ ಪ್ರಸ್ತಾಪವನ್ನು ತಪ್ಪಾಗಿ ಅರ್ಥೈಸಿರುವದಲ್ಲದೇ ಅದನ್ನೇ ರಾಜಕಾರಣ ಮಾಡುತ್ತಿರುವದಕ್ಕೆ ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿರಿಯ ಶಾಸಕರಾಗಿರುವ ಬಸವರಾಜ ರಾಯರಡ್ಡಿಯವರು ಸದನದಲ್ಲಿ ಮಾತನಾಡುವಾಗ ಆನೆಗೊಂದಿ ಭಾಗದ ಅನಧಿಕೃತ ರೆಸಾರ್ಟ್ ತೆರವು ವಿಚಾರ ಪ್ರಸ್ತಾಪ ಮಡುತ್ತ, ರೆಸಾರ್ಟ್ ಕಾರಣಕ್ಕೆ ಆ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಡ್ರಗ್ಸ್ ದಂಧೆ ಇದೆ, ಅದು ಡ್ರಗ್ಸ್ ಹಬ್ ಆಗುತ್ತಿದೆ ಎಂದಿದ್ದಾರೆ. ಅಷ್ಟಕ್ಕೆ ಕೆಲವು ಅಂತಹ ಚಟುವಟಿಕೆಯಲ್ಲಿ ಇರುವ ಜನರೇ ಪ್ರತಿಭಟನೆ ಮಾಡಿ ಒತ್ತಡ ಹೇರುವ ಪ್ರಯತ್ನ ಮಾಡಿದ್ದು ಅಕ್ಷಮ್ಯ. ಉತ್ತಮ ಹಾದಿಯಲ್ಲಿ ಹಣಗಳಿಸುವ ಬದಲು ಅನಧಿಕೃತ ಮತ್ತು ಅಕ್ರಮ ಕೆಲಸಗಳಲ್ಲಿ ಭಾಗಿಯಾಗುವ ಜನರನ್ನು ಜೈಲಿಗೆ ಕಳುಹಿಸುವ ಕೆಲಸ ಆಗಬೇಕಿದೆ ಎಂದು ಹೇಳಿದ್ದಾರೆ.
ಸಧ್ಯ ಪಕ್ಷಬೇಧ ಮರೆತು ರಾಯರಡ್ಡಿಯವರ ವಿರುದ್ಧ ತಿರುಗಿ ಬಿದ್ದಿರುವ ಜನರೇ ಅಲ್ಲಿ ಅಕ್ರಮ ರೆಸಾರ್ಟ್‌ಗಳನ್ನು ನಡೆಸುತ್ತಿರುವದಕ್ಕೆ ಪಟ್ಟಿ ದೊರೆತಿದ್ದು, ಪ್ರತಿಭಟನೆಯನ್ನು ಜನಸಾಮಾನ್ಯರು ಮಾಡಿರದೇ ರೆಸಾರ್ಟ್ ಮಾಲೀಕರು ಮತ್ತು ಅವರ ಹಿಂದಿರುವ ಜನ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಪೊಲೀಸರು ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಹನುಮನ ಶಕ್ತಿ ಕೇಂದ್ರ ಕಿಷ್ಕಿಂದಾ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಜನರು ದೇವರ ದರ್ಶನಕ್ಕೆ ಬರುತ್ತಾರೆ ಹೊರತು ರೆಸಾರ್ಟ್‌ಗಳಲ್ಲಿ ತಂಗಲು ಅಲ್ಲ, ಆದ್ದರಿಂದ ಸರಕಾರ ಈ ಬಗ್ಗೆ ಗಮನ ಹರಿಸಿ ಅಂತಹ ಸ್ಥಳಗಳಲ್ಲಿ ರೆಸಾರ್ಟ್‌ಗಳಿಗೆ ಅವಕಾಶ ನೀಡಬಾರದು ಮತ್ತು ಅಕ್ರಮವಾಗಿ ಕಟ್ಟಿರುವ ರೆಸಾರ್ಟ್ ಮತ್ತು ಹೋಟಲ್‌ಗಳನ್ನು ತೆರವುಗೊಳಿಸಬೇಕು. ಇನ್ನು ಹಂಪಿ ಭಾಗದ ರೆಸಾರ್ಟ್‌ಗಳ ಪರವಾಗಿ ರಾಯರಡ್ಡಿ ಲಾಭಿ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಅಂತಹ ಪರಿಸ್ಥಿತಿ ರಾಯರಡ್ಡಿಯವರಿಗೆ ಬಂದಿಲ್ಲ. ಅಲ್ಲಿನ ಅಕ್ರಮದಲ್ಲಿ ಪಾಲ್ಗೊಂಡ ಜನ ಅಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಗಂಗಾವತಿಯಲ್ಲಿ ಈಗ ಕಾಂಗ್ರೆಸ್ ಮತ್ತು ಹಣದ ಪಕ್ಷ ಮಾತ್ರ ಇದ್ದು, ಬಿಜೆಪಿ ಇತರರು ನಾಮಾವಶೇಷವಾಗಿದ್ದಾರೆ, ಅದನ್ನು ಜೀರ್ಣಿಸಿಕೊಳ್ಳಲಾಗದ ಹಲವರು ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಕೇಸ್ ದಾಖಲಾಗಿಲ್ಲ ಅಂದ ಮಾತ್ರಕ್ಕೆ ಅಲ್ಲಿ ಅಕ್ರಮಗಳೇ ಇಲ್ಲ ಎಂದು ಹೇಳಲು ಬರುವದಿಲ್ಲ, ಸರಕಾರ ತುರ್ತಾಗಿ ಇಂತಹ ಎಲ್ಲಾ ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ತನಿಖೆಗೆ ತಂಡ ರಚಿಸಬೇಕು ಎಂದು ಜ್ಯೋತಿ ಗೊಂಡಬಾಳ ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು

About Mallikarjun

Check Also

ಮಾರ್ಟಳ್ಳಿ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!

Universe corruption in Manrega scheme in Martalli Panchayat..! ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.