Breaking News

ಅಲೆಮಾರಿ ಜನಾಂಗದ ಅಭಿವೃದ್ಧಿಗೆ ರೂ.500 ಕೋಟಿ ಬಿಡುಗಡೆ ಮಾಡಿ – ಡಾ.ಸಿದ್ಧರಾಮ ವಾಘಮಾರೆ

Release Rs.500 crores for the development of nomads – Dr.Siddharama Waghamare

ಬೀದರ: ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಹಿಂದುಳಿದ ವರ್ಗಗಳು, ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ರೂ.500 ಕೋಟಿ ಹಣವನ್ನು ಆಯವಯದಲ್ಲಿ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಅಖಿಲ ಭಾರತೀಯ ಗೋಂಧಳಿ ಸಮಾಜ ಸಂಘಟನೆ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಡಾ.ಸಿದ್ಧರಾಮ ಡಿ.ವಾಘಮಾರೆ ಅವರು, ಅರಣ್ಯ ಮತ್ತು ಜೈವಿಕ ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ ಲಿಂಗಾಯತ ನಿಗಮ, ಒಕ್ಕಲಿಗ ನಿಗಮ, ಮರಾಶ ನಿಗಮಕ್ಕೆ ನೀಡಿದಂತೆ ಸರಿ ಸಮನಾಗಿ ತಾರತಮ್ಯ ಮಾಡದೇ 500 ಕೋಟಿ ಅನುದಾನ ಕಡ್ಡಾಯವಾಗಿ ನಿಗಮಕ್ಕೆ ಕೋಟ್ಟರೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿರುವ ಅಲೆಮಾರಿ ನಿಗಮ, ಡಿ.ದೇವರಾಜ ಅರಸು ನಿಗಮ, ಹಡಪದ ನಿಗಮ, ಇತ್ಯಾದಿ 11 ನಿಗಮ ಸ್ಥಾಪನೆಗೊಂಡಿದೆ, ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಲು ಹಣದ ಕೊರತೆ, ಸಿಬ್ಬಂದಿ ಕೊರತೆ ಕಛೇರಿಗಳ ಕೊರತೆಯಿಂದ ಸಂಕಷ್ಟದಲ್ಲಿದೆ ಎಂದು ಅವರು ಸರ್ಕಾರದ ಗಮನ ಸೆಳೆದಿದ್ದಾರೆ. ನಿಗಮದ ಜನಾಂಗಗಳ ಅಭಿವೃದ್ಧಿ ಯಾಗಬೇಕಾದರೆ ಆಯಾ ನಿಗಮಕ್ಕೆ ಸಂಬಂಧಿಸಿದ ಜಾತಿಯವರನ್ನೇ ಅಧ್ಯಕ್ಷನ್ನಾಗಿ ನೇಮಿಸಬೇಕು. ನಿರ್ದೇಶಕರನ್ನು ಆಯಾ ಜಾತಿಯ ಜನರನ್ನೇ ಕಡ್ಡಾಯವಾಗಿ ನೇಮಕ ಮಾಡುವಂತೆ ಸರ್ಕಾರ ಆದೇಶ ಹೊರಡಿಸಬೇಕು. ಅಲೇಮಾರಿ, ಅರೆ ಅಲೆಮಾರಿ ಪಟ್ಟಿಗೆ ಸೇರಿದ ಗೋಂಧಳಿ ಸಮಾಜದ ಜನರನ್ನು ಪ.ಜಾ, ಪ.ಪಂಗಡಕ್ಕೆ ಸೇರಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಪ.ಜಾ., ಪ.ಪಂಗಡಗಳ ಅಲೆಮಾರಿಗಳ ಮತ್ತು ಹಿಂದುಳಿದ ವರ್ಗಗಳ 46 ಜಾತಿ ಅಲೆಮಾರಿಗಳ ತಾರತಮ್ಯವನ್ನು ಸರಿಪಡಿಸಬೇಕು. ಕೇಂದ್ರದಿಂದ ಬರುವ ಅನುದಾನದ ಉಪಯೋಗ ಹಿಂದುಳಿದ ಅಲೆಮಾರಿಗಳಿಗೆ ಸಿಗುತ್ತಿಲ್ಲ. ಒಬ್ಬ ಜಾತಿಯವರು ಒಂದು ಕಡೆ ಲಾಭ ತೆಗೆದುಕೊಳ್ಳಬೇಕು. ಎರಡೆರಡು ಕಡೆ ಲಾಭ ತೆಗೆದುಕೊಳ್ಳದಂತೆ ಮುತುವರ್ಜಿವಹಿಸಿ ಕಟ್ಟುನಿಟ್ಟಿನ ಆದೇಶ ಮಾಡಬೇಕು. ಗೋಂಧಳಿ ಜನಾಂಗದವರಿಗೆ 75 ವರ್ಷಗಳಿಂದಲೂ ಅನ್ಯಾಯವಾಗಿದೆ. ಇಲ್ಲಿಯವರೆಗೆ ಸರ್ಕಾರದಲ್ಲಿ ಉನ್ನತ ಸ್ಥಾನ ಮಾನ ಸಿಕ್ಕಿಲ್ಲ. ಆದಕಾರಣ ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸಾಮಾಜಿಕ ನ್ಯಾಯ ಒದಗಿಸಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಾಗಲಿ, ವಿಧಾನ ಪರಿಷತ್ತ ಸದಸ್ಯರಾಗಲಿ, ರಾಜ್ಯಸಭಾ ಸದಸ್ಯರಾಗಲಿ ಶೋಷಿತರಿಗೆ ನೇಮಕ ಮಾಡಿ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಆ ಮೂಲಕ ಮೀಸಲಾತಿ ಒದಗಿಸಬೇಕು ಗೋಂಧಳಿ ಸಮಾಜದ ಕಲಾವಿದರಿಗೆ ಮಾಶಾಸನ, ಅನುದಾನ, ವಾದ್ಯ ಪರಿಕರಗಳ ಪೀಠೋಪಕರಣಗಳನ್ನು ಖರಿದಿ ಮಾಡಲು ಆದೇಶಿಸಬೇಕು. ನೆನೆಗುದ್ದಿಗೆ ಬಿದ್ದಿರುವ ಕಲಾವಿದರ ಮಾಶಾಸನಗಳನ್ನು ಈ ಕೂಡಲೇ ಸರ್ಕಾರದಿಂದ ಬಿಡುಗಡೆ ಮಾಡುವಂತೆ ಸಂಬಂಧ ಪಟ್ಟ ಸಚಿವರಿಗೆ, ಕಾರ್ಯದರ್ಶಿಗಳಿಗೆ, ನಿದೇಶಕರಿಗೆ ಆದೇಶ ಮಾಡಬೇಕು. ವಸತಿ ರಹಿತ-ಸಹಿತ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳಾದ ಸಿ.ಸಿ ರಸ್ತೆ, ಸಮುದಾಯ ಭವನಗಳು, ಕಲಾ ಭವನಗಳು, ಮನೆ ಕಟ್ಟಿಕೊಳ್ಳಲು ಭೂ ಖರೀದಿಸಲು ಶೈಕ್ಷಣಿಕ ಶಿಕ್ಷಣ ಸಾಲ ಸೌಲಭ್ಯದ ಅರಿವು ಮೂಡಿಸಲು, ಯೋಜನೆಗಳನ್ನು ಅನುಷ್ಠಾನ ತರಲು 500 ಕೋಟಿ ಹಣವನ್ನು ಆಯವಯದಲ್ಲಿ ಮೀಸಲಿಡಬೇಕು. ಇಂದು ಈ ಕುರಿತು ವಿಧಾನಸೌಧದಲ್ಲಿ ಸಂಜೆ 4-30ರಿಂದ ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳು ಆದ್ಯತೆ ಮೇರೆಗೆ ಕಾರ್ಯಚರಣೆಯಲ್ಲಿ ಬರುವಂತೆ ಸಂಬಂಧ ಪಟ್ಟವರಿಗೆ ಆದೇಶಿಸಬೇಕೆಂದು ಕೋರಿದ್ದಾರೆ.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.