Official recognition of Koppal University for awarding UGC degree
ಕೊಪ್ಪಳ ಜುಲೈ 26 (ಕರ್ನಾಟಕ ವಾರ್ತೆ): ಯುಜಿಸಿ ಪದವಿಗಳನ್ನು ನೀಡಲು ಕೊಪ್ಪಳ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ ಅಧಿಕೃತ ಮಾನ್ಯತೆ ದೊರೆತಿದೆ.
ಕರ್ನಾಟಕ ಸರ್ಕಾರವು 2022-23ನೇ ಸಾಲಿನಲ್ಲಿ ಕೊಪ್ಪಳದಲ್ಲಿ ನೂತನವಾಗಿ ಕೊಪ್ಪಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಪ್ರಥಮ ಕುಲಪತಿಗಳಾಗಿ ಪ್ರೊ. ಬಿ.ಕೆ.ರವಿ ಅವರು 2023ರ ಮಾರ್ಚ್ 20ರಂದು ಹಾಗೂ ಪ್ರೋ. ಕೆ.ವಿ ಪ್ರಸಾದ್ ಅವರು ಮಾರ್ಚ್ 29ರಂದು ಕುಲಸಚಿವರಾಗಿ (ಮೌಲ್ಯಮಾಪನ) ಅಧಿಕಾರ ವಹಿಸಿಕೊಂಡಿರುತ್ತಾರೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯು.ಜಿ.ಸಿ)ವು ತನ್ನ ಅಧಿನಿಯಮ 1956ರ ಪ್ರಕರಣ 2(ಎಫ್) ಅಡಿಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಮಾನ್ಯತೆಯನ್ನು ಜುಲೈ 21ರಂದು ನೀಡಿದ್ದು, ಕೊಪ್ಪಳ ವಿಶ್ವವಿದ್ಯಾಲಯವು ಯುಜಿಸಿ ಅಡಿಯಲ್ಲಿ ಬರುವ ಎಲ್ಲಾ ಪದವಿಗಳನ್ನು ನೀಡಲು ಅಧಿಕೃತ ಮಾನ್ಯತೆಯನ್ನು ಹೊಂದಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರು (ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.