Breaking News

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದಕಾರಟಗಿಯಲ್ಲಿ ೨೧ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ.

Free mass marriage program for 21 couples at Karatagy by Kalyan Karnataka Dalit Sangharsh Samiti.

ಭಗವಾನ್ ಬುದ್ಧ, ವಿಶ್ವಗುರು ಬಸವಣ್ಣ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ ಜಯಂತಿ ಅಂಗವಾಗಿ ಕಾರಟಗಿ ತಾಲೂಕಿನ ಕಾರಟಗಿ ನಗರದ ನವಲಿ ರಸ್ತೆಯ ಶ್ರೀ ಸಿದ್ಧೇಶ್ವರ ರಂಗಮAದಿರದ ಆವರಣದಲ್ಲಿ ೨೦೨೪ ರ ಮೇ-೧೦ ರಂದು ಬೆಳಿಗ್ಗೆ ೧೦:೪೬ ರಿಂದ ೧೨:೧೦ ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ, ಹಂಪಿಯ ಮಾತಂಗ ಮಹರ್ಷಿ ಆಶ್ರಮದ ಪ.ಪೂ. ಶ್ರೀ ಪೂರ್ಣಾನಂದ ಭಾರತಿ ಸ್ವಾಮಿಜಿ ಹಾಗೂ ಕಾರಟಗಿಯ ಶ್ರೀ ವೇ.ಮೂ. ಮರುಳಸಿದ್ದಯ್ಯಸ್ವಾಮಿ ಹಿರೇಮಠ ಇವರುಗಳ ಆಶೀರ್ವಾದದಿಂದ ೨೧ ಜೋಡಿಗಳ ಉಚಿತ ಜೊಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದರು.
ಆ ದಿನದಂದು ಬೆಳಿಗ್ಗೆ ೬:೩೦ಕ್ಕೆ ಬಾಜಾ ಭಜಂತ್ರಿಯೊAದಿಗೆ ದಾರ್ಶನಿಕರ ಭಾವಚಿತ್ರಗಳ ಮೆರವಣಿಗೆಯನ್ನು ಕಾರಟಗಿ ನಗರದ ಇಂದಿರಾನಗರ ವಿರುಪಣ್ಣ ತಾತನ ಗುಡಿಯಿಂದ ಕಾರ್ಯಕ್ರಮದ ವೇದಿಕೆಯವರೆಗೆ ನಡೆಸಿ, ನಂತರ ಬೆಳಿಗ್ಗೆ ೧೦:೩೦ ಕ್ಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಗುತ್ತದೆ. ತದನಂತರ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.
ಸಾಮೂಹಿಕ ವಿವಾಹ ನೋಂದಣಿಗಾಗಿ ಆಸಕ್ತರು ಏಪ್ರಿಲ್-೩೦ ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿರಿ ಎಂದು ಕೋರಿದ್ದಾರೆ.
೯೯೭೨೮೪೨೪೮೦, ೯೯೦೨೩೫೪೦೫೧, ೯೯೧೬೩೧೦೯೨೧,

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.