Breaking News

ನಂದಿನಿ ಬಡಾವಣೆಯಲ್ಲಿ ಶ್ರೀದೇವಿಮುತ್ತು ಮಾರಿಯಮ್ಮ ದೇವಾಲಯದ ಕರಗ : ೪೨ನೇ ಬಾರಿ ಕರಗ ಹೊತ್ತು ದಾಖಲೆ ನಿರ್ಮಿಸಿದ ಪದ್ಮಾವತಿ ಅಮ್ಮ

Karaga of Sridevimuthu Mariamma Temple in Nandini Barangay: Padmavati Amma set record for 42nd Karaga.

ಬೆಂಗಳೂರು; ನಂದಿನಿ ಬಡಾವಣೆಯ ಕೃಷ್ಣನಂದ ನಗರದಲ್ಲಿ ಶ್ರೀದೇವಿಮುತ್ತು ಮಾರಿಯಮ್ಮ ದೇವಾಲಯದ 42ನೇಹೂವಿನ ಕರಗ ಮತ್ತು ಅಗ್ನಿಕೊಂಡ ಮಹೋತ್ಸವ ವೈಭವದಿಂದ ನೆರವೇರಿತು.

ಇಲ್ಲಿ ಮಹಿಳೆ ಹೂವಿನಕರಗ ಹೂರುವುದು ವಿಶೇಷವಾಗಿದೆ. ದೇವಿ ಆರಾಧಕರದ ಶ್ರೀ ಪದ್ಮಾವತಿ ಅಮ್ಮನವರು ಸತತ 42 ವರ್ಷಗಳಿಂದ ಹೂವಿನ ಕರಗ ಹೊತ್ತು ಯಶಸ್ವಿಯಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ, ಸಂಭ್ರಮಿಸಿದರು. ಮಹಿಳೆಯೊಬ್ಬರು ಕರಗ ಹೊರುವುದು ತೀರಾ ಅಪರೂಪ. ಆದರೆ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕರಗ ಹೊತ್ತಿರುವುದು ದಾಖಲೆಯಾಗಿ ಪರಿಣಮಿಸಿದೆ.

ಕೃಷ್ಣನಂದ ನಗರದ ದೇವಾಲಯದಿಂದ ಹೂವಿನ ಕರಗ ಮೆರವಣಿಗೆ ಹೊರಟು ಯಶವಂತಪುರದ ಎಪಿಎಂಸಿ ಯಾರ್ಡ್. ಗೌತಮ್ ನಗರ, ಮಾರಪ್ಪನ ಪಾಳ್ಯ. ಸೋಮೇಶ್ವರ ನಗರ ದ ಮುಖ್ಯಬೀದಿಗಳಲ್ಲಿ ಸಂಚರಿಸಿ ರಾತ್ರಿ 10 ಗಂಟೆಗೆ ಅಗ್ನಿಕುಂಡವನ್ನು ತುಳಿಯುವುದರ ಮೂಲಕ ಸಂಪನ್ನವಾಯಿತು. ಭಕ್ತಾದಿಗಳು ಭಕ್ತಭಾವದಿಂದ ಅಗ್ನಿ ಕುಂಡ ತುಳಿದು ಹರಕೆ ತೀರಿಸಿದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.