Breaking News

ತುರುವೇಕೆರೆ:ಫೆಬ್ರವರಿ ಒಂದನೇ ತಾರೀಕು ತಾಲೂಕು ಮಟ್ಟದ ಮಹಿಳಾವಿಚಾರಗೋಷ್ಠಿ.

Turuvekere: Taluk level women’s seminar on February 1st.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ, ಫೆಬ್ರವರಿ 1 ಕ್ಕೆ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ತುರುವೇಕೆರೆಯ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತುರುವೇಕೆರೆ ಕ್ಷೇತ್ರ ಯೋಜನಾಧಿಕಾರಿ ಯಶೋಧರ್ ರವರು ಹೇಳಿದರ

ಪಟ್ಟಣದ ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿಯಲ್ಲಿ, ತಾಲೂಕು ಯೋಜನಾಧಿಕಾರಿ ಅನಿತಾ ಶೆಟ್ಟಿ, ಕ್ಷೇತ್ರ ಯೋಜನಾಧಿಕಾರಿ ಯಶೋಧರ್, ಮ್ಯಾನೇಜರ್ ಚೈತ್ರ, ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಾವಣ್ಯ, ಇವರ ಸಮ್ಮುಖದಲ್ಲಿ ಪತ್ರಿಕಾ ಮಾಧ್ಯಮ ಗೋಷ್ಠಿಯನ್ನು ಕರೆಯಲಾಗಿತ್ತು,

ಇದೆ ವೇಳೆ ಕ್ಷೇತ್ರ ಯೋಜನಾಧಿಕಾರಿ ಯಶೋಧರ್ ಮಾತನಾಡಿ, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ 2011ನೇ ವರ್ಷದಲ್ಲಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಸಂಘಟನೆ, ಸೌಲಭ್ಯ ವಂಚಿತರ ಸಬಲೀಕರಣ ಹಾಗೂ ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ ಗ್ರಾಮೀಣರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾ ಬಂದಿದೆ ,ಜೊತೆಗೆ ಈ ಯೋಜನೆಯು ಶಿಸ್ತು ,ನೈತಿಕ ಮೌಲ್ಯಗಳು, ಜನರಲ್ಲಿ ಧಾರ್ಮಿಕ, ಜಾಗೃತಿ ಮೂಡಿಸುವ ವಿವಿಧ ದ್ಯೇಯೋದ್ದೇಶಗಳನ್ನು ಹೊಂದಿದ್ದು,

ಈ ಯೋಜನೆಯ ಕನಸುಗಾರರು ಮತ್ತು ಮಾರ್ಗದರ್ಶಕರು ಆದ ಪೂಜ್ಯಶ್ರೀ ಡಿ ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರ ಆಶಯದಂತೆ,

ಗ್ರಾಮೀಣ ಪ್ರದೇಶದ ಕೃಷಿಕರಿಗೆ, ಮಹಿಳೆಯರಿಗೆ, ಯುವಕ, ಯುವತಿಯರಿಗೆ, ದುಶ್ಚಟಗಳಿಂದ ಬಳಲುತಿರುವ ಜನರಿಗೆ, ದುಡಿಯಲು ಸಾಮರ್ಥ್ಯವಿಲ್ಲದವರಿಗೂ ಕೂಡ ಈ ಯೋಜನೆಯಿಂದ ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಈ ಯೋಜನೆಗಳಾದ ಜನಸಂಘಟನೆ, ಪ್ರಗತಿ ಬಂದು ಸಂಘಟನೆ, ಸ್ವಸಹಾಯ ಸಂಘ, ಮಹಿಳಾ ಜ್ಞಾನವಿಕಾಸ, ಪ್ರಗತಿ ನಿಧಿ, ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷಾ, ಪ್ರಗತಿ ರಕ್ಷಾ ಕವಚ, ಮಾಶಾಸನ, ಸುಜ್ಞಾನ ನಿಧಿ ಶಿಷ್ಯ ವೇತನ, ಜನಮಂಗಲ, ಸಾಮಾನ್ಯ ಸೇವಾ ಕೇಂದ್ರ, ಹೀಗೆ ಹಲವಾರು ಯೋಜನೆಗಳಿಂದ 67,17,32,725 ಕೋಟಿ ರೂ, ಈ ಭಾಗದಲ್ಲಿರುವ ಸಂಘದ ಸದಸ್ಯರ ವಿವಿಧ ಬೇಡಿಕೆಗಳಿಗೆ ಅನುಗುಣವಾಗಿ ಇಸವಿ1995-96 ರಲ್ಲಿ ತಾಲೂಕಿನಲ್ಲಿ ಪ್ರಗತಿ ನಿಧಿ ಕಾರ್ಯಕ್ರಮ ಪ್ರಾರಂಭವಾಗಿದ್ದು,ಇಂದಿನವರೆಗೂ ಈ ಯೋಜನೆಯಡಿ ವಿವಿಧ ಮಾದರಿಯ ಸಂಘದ ಸದಸ್ಯರುಗಳಿಗೆ ಪ್ರಗತಿ ನಿಧಿ ನೀಡಲಾಗಿದೆ ,

ಪ್ರಗತಿ ನಿಧಿ ಯೋಜನೆಯಡಿ 26 ಸಾವಿರಕ್ಕೂ ಹೆಚ್ಚು ಸದಸ್ಯರು ಇದರ ಫಲಾನುಭವಿಗಳಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಅನೇಕ ಸೇವೆಗಳನ್ನು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾಗುವುದು ಎಂದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.