Breaking News

ಹರ್ಷವರ್ಧನ ಪತ್ತಾರ ಅವರಿಗೆ ಉತ್ತಮ ಭವಿಷ್ಯವಿದೆ : ಬಿ.ಕೆ.ರವಿ

Harshvardhan Pattara has a bright future: B.K.Ravi

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ತಳಕಲ್ಲದ ರಂಗಭೂಮಿ ಕಲಾವಿದರಾದ ಭಾಗ್ಯವಂತಪ್ಪ(ಭಾಗ್ಯವಾನ್) ಇವರ ಗಂಡು ಮೊಮ್ಮಗನಾದ ಕುಮಾರ ಹರ್ಷವರ್ಧನ ವೀರಶೇಖರ ಪತ್ತಾರ ಇವರು ಅದ್ಭುತ ಚಿತ್ರ ಕಲಾವಿದರಾಗಿದ್ದು, ಕಿರಿಯ
ವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡುತ್ತಿದ್ದಾರೆ. ಕೇವಲ ಪೆನ್ಸಿಲ್‌ನಿಂದ ನನ್ನ ಭಾವ ಚಿತ್ರ ತೆಗೆದಿರುವುದನ್ನು ನೋಡಿ ಕೆಲಕ್ಷಣ ನಾನು ಭಾವುಕನಾದೆನು. ಹರ್ಷವರ್ಧನ ಪತ್ತಾರ ಅವರು ನಿರಂತರವಾಗಿ ಈ ಕಲೆಯನ್ನು ಮುಂದುವರೆಸಿಕೊAಡು ಹೋದರೆ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಕೊಪ್ಪಳದ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾದ ಪ್ರೊಫೆಸರ್ ಬಿ.ಕೆ.ರವಿ ಅವರು ಹೇಳಿದರು.

ಜಾಹೀರಾತು

ಅವರು ತಳಕಲ್ಲದಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಹರ್ಷವಧನ ಪತ್ತಾರ ಅವರು ನೀಡಿದ ತಮ್ಮ ಭಾವಚಿತ್ರವನ್ನು ಹಾಗೂ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮಾತನಾಡುತ್ತಾ, ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಜೀವಶಾಸ್ತç ವಿಷಯದ ಉಪನ್ಯಾಸಕರಾದ ವೀರಶೇಖರ ಬಿ. ಪತ್ತಾರ ಅವರ ಪುತ್ರರಾದ ಹರ್ಷವರ್ಧನ ಪತ್ತಾರ ರವರಿಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವ ಹವ್ಯಾಸವಿರುವುದು ಸಂತಸದ ಸಂಗತಿ. ವೀರಶೇಖರ ಬಿ. ಪತ್ತಾರ ಅವರೂ ಸಹ ಒಳ್ಳೆಯ ಕವಿಗಳು ಮತ್ತು ಕಲಾವಿದರಾಗಿದ್ದಾರೆ. ಒಟ್ಟಾರೆಯಾಗಿ ಇವರ ಕುಟುಂಬವೇ ಕಲಾವಿದರ ಕುಟುಂಬವಾಗಿರುವುದು ಹೆಮ್ಮೆಯ ಸಂಗತಿ ಎಂದರು.

ರಂಗಕಲಾವಿದರಾದ ಭಾಗ್ಯವಂತಪ್ಪ(ಭಾಗ್ಯವಾನ್) ಪತ್ತಾರ, ಉಪನ್ಯಾಸಕರಾದ ವೀರಶೇಖರ ಪತ್ತಾರ, ಚಿತ್ರಕಲಾವಿದರಾದ ಹರ್ಷವರ್ಧನ ಪತ್ತಾರ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಜ್ಞಾನೇಶ್ವರ ಬಿ.ಪತ್ತಾರ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

About Mallikarjun

Check Also

ಜರ್ಮನಿಯ ಫ್ರಾಂಕ್‌ಫರ್ಟ್ ನಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆದ್ದ ಕನ್ನಡಿಗರು.

Kannadigas won gold and bronze medals at the World Karate Championship held in Frankfurt, Germany. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.