Breaking News

ಶಾಸಕ ರಾಯರಡ್ಡಿ ಅಧಿಕಾರಿಗಳನ್ನು ಬಿಟ್ಟು ದೌರ್ಜನ್ಯನಡೆಸುತ್ತಿದ್ದಾರೆ,,! ಹಾಲಪ್ಪ ಆಚಾರ ಆರೋಪ,,

MLA Rayardi is committing atrocities by leaving the officials,,! Allegation of Halappa ritual

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,

ಕುಕನೂರು : ಶಾಸಕ ರಾಯರಡ್ಡಿಯವರು ಅಧಿಕಾರವನ್ನು ಬಳಸಿಕೊಂಡು ಅಧಿಕಾರಿಗಳಿಂದ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಲಪ್ಪ ಆಚಾರ ಹೇಳಿದರು.

ಅವರು ಕುಕನೂರು ಪಟ್ಟಣದಲ್ಲಿ ರವಿವಾರದಂದು ನಡೆದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಪ್ರಕಟಿಸದೇ ಮುಂದೂಡಿದ್ದು, ರವಿವಾರ ರಾತ್ರಿಯಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಮುಖಂಡರು, ಕಾರ್ಯಕರ್ತರು ಎಪಿಎಂಸಿ ಆವರಣದಲ್ಲಿ ಅಹೋ ರಾತ್ರಿ ಧರಣಿ ನಡೆಸಿ ಸೋಮವಾರವು ಮುಂದೊರೆಸಿದ ಧರಣಿ ಸ್ಥಳಕ್ಕೆ ಆಗಮಿಸಿ ಅವರು ಮಾತನಾಡಿದರು.

ನಮ್ಮ ಆಡಳಿತಾವಧಿಯಲ್ಲಿ ಯಲಬುರ್ಗಾ ತಾಲೂಕಿನಲ್ಲಿಯೇ ನಾವು ಸಹಕಾರಿ ಕ್ಷೇತ್ರದಲ್ಲಿ ಅಭೂತ ಪೂರ್ವ ಚಾಪು ಮೂಡಿಸಿದ್ದನ್ನು ನೋಡಿ ಕಾಂಗ್ರೆಸ್ ನವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲಾ. ಕೆಟ್ಟ ಮನಸ್ಥಿತಿ ಹೊಂದಿದ ಕಾಂಗ್ರೆಸ್ಸಿಗರಿಗೆ ರೈತಪರ ಯಾವುದೇ ಕಾಳಜಿ ಇಲ್ಲಾ ಅವರು ಎಲ್ಲಾ ಕಡೆಯಲ್ಲೂ ರಾಜಕೀಯ ನಡೆಸಲು ಮುಂದಾಗುತ್ತಿದ್ದಾರೆ ಎಂದು ಕುಟುಕಿದರು.

ಅವರಿಗೆ ರೈತರಿಗಂತು ಒಳ್ಳೆಯದನ್ನು ಮಾಡಲಿಗುವುದಿಲ್ಲಾ, ಮಾಡಿದ್ದನ್ನು ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲಾ ಎನ್ನುವುದಕ್ಕೆ ನಿನ್ನೆ ನಡೆದ ಒಂದು ಸಾಕ್ಷಿ ಸಾಕಷ್ಟೇ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷವಾದರು ಇವರಿಗೆ ಜನಪರ ಕಾಳಜಿ ಇಲ್ಲಾ, ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇದರಿಂದ ಸಾಲು ಸಾಲು ಆತ್ಮ ಹತ್ಯೆಗಳು ಆಗುತ್ತಿವೆ. ಇದು ಸರಕಾರದ ಅಭಿವೃದ್ದಿಯೇ ಎಂದು ಪ್ರಶ್ನಿಸಿದರು,,?

ನೀರಾವರಿ ಬಗ್ಗೆ ಮಾತನಾಡುವ ರಾಯರಡ್ಡಿಯವರೇ ನಿಮಗೆ ಸಮರ್ಪಕವಾಗಿರುವ ಕುದ್ರಿಮೋತಿ, ಮುರುಡಿ, ಬೇವೂರು ಕೆರೆಗಳನ್ನೇ ತುಂಬಿಸಲು ಆಗುತ್ತಿಲ್ಲಾ ಇನ್ನೇನು ನೀರಾವರಿ ಮಾಡುತ್ತೀರಿ ನೀವು ಎಂದು ವ್ಯಂಗ್ಯವಾಡಿದ ಅವರು ರಾಯರಡ್ಡಿಗೆ ಇಷ್ಟು ವರ್ಷ ಇಲ್ಲದ ಸಹಕಾರಿ ಕ್ಷೇತ್ರದ ನೆನಪು ನಿನ್ನೆ ರವಿವಾರ ರಾತ್ರಿ ನೆನಪಾದಂತಿದೆ, ಅದು ಸಾಮಾನ್ಯ ಅಧಿಕಾರಿಗಳನ್ನು ಬಲಿ ಪಶು ಮಾಡಲು ಎಂದರು.

ನಂತರ ಹಾಲಪ್ಪ ಆಚಾರ ಪೋಲಿಸ್ ಇಲಾಖೆಯ ಡಿವೈಎಸ್ ಪಿ ಮುತ್ತಣ್ಣ ಸವರಗೋಳ ಜೊತೆ ಮಾತನಾಡಿ ಆರ್ ಓ ಯಾವ ಪುರುಷಾರ್ಥಕ್ಕೆ ಮೂರ್ಚೆಯ ನಾಟಕ ಮಾಡಿ ಆಸ್ಪತ್ರೆ ಸೇರಿದರು ಎನ್ನುವುದು ನನಗೆ ಗೊತ್ತು, ಚುನಾವಣೆಯ ಮೇಲಾಧಿಕಾರಿಯ ಮಾತಿಗೂ ಬೆಲೆ ಇಲ್ಲದಂತಾಗಿದೆ. ಒಂದು ವೇಳೆ ಚುನಾವಣಾಧಿಕಾರಿ ಸತ್ತರೇ ಫಲಿತಾಂಶ ಪ್ರಕಟಿಸುವುದಿಲ್ಲವೇ,,? ಪೋಲಿಸ್ ಇಲಾಖೆ ಹಾಗೂ ಕಾನೂನಿಗೆ ನಾವು ಗೌರವ ನೀಡುತ್ತೇವೆ ಆದರೆ ನೀವು ಇದಕ್ಕೆ ಬೆಂಬಲ ನೀಡಿದರೇ ನಿಮ್ಮನ್ನು ಇದರಲ್ಲಿ ತಳಕು ಹಾಕಿಕೊಳ್ಳುತ್ತೇವೆ ಎಂದು ಎಚ್ಚರಿಸಿ ನ್ಯಾಯಯುತ ಫಲಿತಾಂಶ ನೀಡುವಂತೆ ಆಗ್ರಹಿಸಿದರು.

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *