Breaking News

ಶಾಲಾ ಮಕ್ಕಳಿಗೆ ಸಂಚಾರಿ ನಿಯಮಗಳ ಮತ್ತು ಅಪರಾಧ ತಡೆ ಮಾಹಿತಿ ಕಾರ್ಯಕ್ರಮ:

Traffic rules and crime prevention information program for school children:

ಜಾಹೀರಾತು


ಗಂಗಾವತಿ,04
:ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಗೌರವ ಹಾಗೂ ಪ್ರಸ್ತುತ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ಮುಂಜಾಗ್ರತೆ ವಹಿಸಿದರೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ನಗರ ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಲ್ಲೇಶಪ್ಪ ಚಳಗೇರಿ ಹೇಳಿದರು. 
 ಅವರು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶಾಲಾ ಮಕ್ಕಳಿಗೆ ಅಪರಾಧ ತಡೆ  ಕಾರ್ಯಕ್ರಮ  ಮತ್ತು ಸಂಚಾರಿ ನಿಯಮಗಳ ಬಗ್ಗೆ ಅವರು ಮಾತನಾಡುತ್ತಾ, ಶಾಲಾ ಮಕ್ಕಳು ಶಾಲೆಗೆ ಹೋಗುವಾಗ ರಸ್ತೆಯನ್ನು ದಾಟುವಾಗ ಸಂಚಾರಿ ನಿಯಮ ಕಾನೂನನ್ನು ತಪ್ಪದೇ ಪರಿಪಾಲಿಸಬೇಕು, ಶಾಲಾ ಮಕ್ಕಳು ಈಗಿನಿಂದಲೇ ಕಾನೂನಿನ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾನೂನನ್ನು ಗೌರವಿಸಬೇಕು ಕಾನೂನು ಸಹ ನಿಮ್ಮನ್ನು ಸದಾ ಗೌರವಿಸುತ್ತದೆ ಎಂದು ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಜೊತೆಗೆ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಒಂದಲ್ಲ ಒಂದು ರೀತಿಯ ಅಪರಾಧಗಳಾಗುತ್ತಿವೆ. ಕಾನೂನಿನ ಬಗ್ಗೆ ಅವರಿಗಿರುವ ತಾತ್ಸಾರ ಮನೋಭಾವನೆಯೇ ಇದಕ್ಕೆ ಕಾರಣ.ಇಂಥ ಪ್ರಕರಣಗಳ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕ ವಲಯದಲ್ಲಿ ಜಾಗೃತಿ ಮತ್ತು ನೀವುಗಳು ಅಪರಾಧದಿಂದ ಜಾಗೃತ ವಹಿಸಬೇಕು ಎಂದು ಹೇಳಿದರು.
ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಪೊಲೀಸ್ ಇಲಾಖೆ ಅಪರಾಧ ತಡೆಗಟ್ಟುವ ಮಾಸಾಚರಣೆ ಆಯೋಜಿಸಲಾಗಿದೆ. ಉತ್ತಮ ಭವಿಷ್ಯದ  ಬಗ್ಗೆ ಗಮನಹರಿಸಬೇಕು, ವಿದ್ಯಾರ್ಥಿಗಳು ಅಪರಾಧದಿಂದ ದೂರವಿರಬೇಕು ಕಾನೂನನ್ನು ಸದಾ ಗೌರವಿಸಬೇಕು ಎಂದು ಮನವರಿಕೆ ಮಾಡಿದರು. ವಿದ್ಯಾರ್ಥಿ ಸಮೂಹದ ಮೇಲೆ ಅಪರಾಧ ತಡೆಗಟ್ಟುವ ಮತ್ತು ಸಂಚಾರಿ ನಿಯಮಗಳ ಪಾಲಿಸುವ ಜವಾಬ್ದಾರಿ ಇದ್ದು, ಮೊದಲು ವಿದ್ಯಾರ್ಥಿಗಳು ಜಾಗೃತಿಗೊಂಡು ಸಾರ್ವಜನಿಕರಿಗೆ ತಿಳಿ ಹೇಳಬೇಕು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ರಮೇಶ ಮಡ್ಡಿಕರ್,ನಿಂಗಪ್ಪ ಹಕಾರಿ ಮತ್ತು ಶಿಕ್ಷಕರು ಸೇರಿದಂತೆ ಇತರರು ಇದ್ದರು

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *