
Gundamma Camp leaders welcome students on the first day of school

ಶಾಲೆ ಪ್ರಾರಂಭ ಮೊದಲನೇ ದಿನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಗುಂಡಮ್ಮ ಕ್ಯಾಂಪ್ ಮುಖಂಡರು

ಗಂಗಾವತಿ:ಸರ್ಕಾರವು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಿ ಎನ್ನುವ ಘೋಷವಾಕ್ಯದಡಿ ಕೆಲಸನಿರ್ವಹಿಸಿದರೆ.
ಅದರೆ ಗುಂಡಮ್ಮ ಕ್ಯಾಂಪ್ 25ನೇ ವಾರ್ಡಿನ ಯುವಕರು ಹಿರಿಯರು ಸೇರಿ ದಾಖಲಾತಿ ಹೆಚ್ಚಿಸಿ ಸರಕಾರಿ ಕಿರಿ ಪ್ರಾರ್ಥಮಿಕಶಾಲೆ ಉಳಿಸಿ ಎನ್ನುವ ಸಂಕಲ್ಪ ಮಾಡಿ ಪಣತೊಟ್ಟು ಮಕಳ ದಾಖಲಾತಿಗೆ ಮನೆ,ಮನೆಗೆ ಬೇಟಿ ನೀಡಿ ಪಾಲಕರಲ್ಲಿ ಶಾಲೆಯ ಸೌಲಭ್ಯ ಗಳ ಮಾಹಿತಿನೀಡಿದರು.
ಈ ಭಾಗದ ಸಮಾನ ಮನಸ್ಕರ ಯುವಕರು ಸಮಿತಿಯೊಂದನ್ನು ರಚಿಸಿಕೊಂಡು, ಸರಕಾರಿ ಶಾಲೆಗಳ ಮಹತ್ವ ಮತ್ತು ಅಲ್ಲಿ ಸಿಗುವ ಸೌಲಭ್ಯಗಳ ವಿವರಗಳನ್ನು ಪೋಷಕರಿಗೆ ತಲುಪಿಸಲು ಮುಂದಾಗಿದ್ದಾರೆ.
ಸುಮಾರು 30 ವರ್ಷಗಳ ಹಳೆಯದಾದ ಶಾಲೆಯು ಸಾವಿರಾರು ವಿದ್ಯಾರ್ಥಿಗಳು ಕಲೆತು ಅತ್ಯುನ್ನತ ಮಟ್ಟದಲ್ಲಿದ್ದಾರೆ.

2026-2027ನೇ ಶೈಕ್ಷಣಿಕ ವರ್ಷದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂಬ ಏಕೈಕ ಉದ್ದೇಶದಿಂದ ಪ್ರತಿ ಮನೆಮನೆಗೂ ಭೇಟಿ ನೀಡಿ ತಂದೆ-ತಾಯಿಯರಿಗೆ ಶಾಲೆಯ ಬಗ್ಗೆ ಮನವರಿಕೆ ಮಾಡಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ತಿಳಿಸುತ್ತಿದ್ದಾರೆ.
ಪ್ರೇರಣಾದಾಯಕ ಕೆಲಸ : ಸರ್ಕಾರವು ಶಾಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಶಾಲೆಗೆ ಮಕ್ಕಳು ಸಂಖ್ಯೆ ಗಣನೀಯ ಕಡಿಮೆಯಾಗಿದೆ ಎಂದು ತಿಳಿಸಿ ಶಾಲೆ ಮುಚ್ಚುವುದನ್ನು ನಾವು ಎಲ್ಲ ನೋಡಿದ್ದೇವೆ ಆದರೆ ಗುಂಡಮ್ಮ ಕ್ಯಾಂಪ್ ವಯಸ್ಕರ ಮನಸ್ಥಿತಿಯು ವಿಭಿನ್ನ ಯಶಸ್ವಿ ಪ್ರಯತ್ನವು ಮಾಡುತ್ತಿದ್ದಾರೆ. ಈ ಪ್ರಯತ್ನ ಯಶಸ್ವಿಯಾಗಲಿ ಮತ್ತು ಈ ಪ್ರಯತ್ನದಿಂದ ಹಲವಾರು ವಿದ್ಯಾರ್ಥಿಗಳಿಗೂ ಹಾಗೂ ಬೇರೆ ಬೇರೆ ವಾರ್ಡಿನ ಜನರಿಗೂ ಪ್ರೇರಣೆಯಾಗುವಂತ ಕೆಲಸವಾಗಿದೆ.
ಕೆ ಸನ್ನೀಕ್ ಮಾತನಾಡಿದರು
ಇದು ಕೇವಲ ಒಂದು ದಿನದ ಆಂದೋಲನವಲ್ಲ, ಜೂನ್ ತಿಂಗಳಲ್ಲಿ ಶಾಲಾ ಆರಂಭದವರೆಗೆ ನಿರಂತರವಾಗಿ ಈ ಅಭಿಯಾನ ನಡೆಯಲಿದೆಎಂದರು.

ಬಳಿಕ ಶಾಲಾ ಸುಧಾರಣಾ ಸಮಿತಿ,ವಾರ್ಡ್ ನ ಮುಖಂಡರಿಂದ ಹಿರಿಯ ಪತ್ರಕರ್ತರಾದ ಹೆಚ್ ಮಲ್ಲಿಕಾರ್ಜುನ್ ಹುನುಕುಂಟಿ ಅವರ 70ನೇ ಹುಟ್ಟುಹಬ್ಬ ವನ್ನುಇದೆ ಶಾಲೆಯ ಮಕ್ಕಳ ಜೊತೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು ಬಳಿಕ ಮಾತನಾಡಿ ಅವರು
ಹೆಚ್ಚಿನ ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಕನ್ನಡ ಶಾಲೆ ಉಳಿಸುವ ಸಂಕಲ್ಪ ನಮ್ಮದಾಗಿದೆ ಎಂದರು.
ವಾರ್ಡಿನ ಹಿರಿಯರಾದ ಹೆಚ್ .ಮಲ್ಲಿಕಾರ್ಜುನ, ಸನ್ನೀಕ್ ಸಿದ್ದು ಗೌಳಿ, ಉಲ್ಲಾಸ, ದೇವರಾಜ್ ಗುಡದಳ್ಳಿ, ಜೀವರಾಜ್, ಕೊಟ್ರೇಶ್ ಹೊಂಬಾಳ್, ಹಾಗೂ ಶಿಕ್ಷಕರು, ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಅಂಗನವಾಡಿ ಶಿಕ್ಷಕರು ಭಾಗವಹಿಸಿದ್ದರು.
