Anniversary of Tipaturu Aditya Public School

2024-25 ನೇ ಸಾಲಿನ ಆದಿತ್ಯ ಪಬ್ಲಿಕ್ ಸ್ಕೂಲ್ ನ ಅದ್ದೂರಿ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ.
ತಿಪಟೂರು: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ,ಆ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮವೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ತಾಲೂಕಿನ ಕಲ್ಲೇಗೌಡನ ಪಾಳ್ಯದ ಆದಿತ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ 2024-25 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಷಡಕ್ಷರಿ ರವರು,ಮಕ್ಕಳ ಭವಿಷ್ಯಕ್ಕೆ ಶಾಲೆಗಳು ಅಡಿಪಾಯ ಹಾಕುತ್ತವೆ. ಮನೆ ಮೊದಲ ಪಾಠಶಾಲೆಯಾದರೆ ಶಾಲೆಗಳು ಔಪಚಾರಿಕ ಶಿಕ್ಷಣವನ್ನು ವೈಜ್ಞಾನಿಕ ರೀತಿಯಲ್ಲಿ ತಿಳಿಸಿಕೊಡುತ್ತವೆ. ಈ ಮೂಲಕ ಮಕ್ಕಳು ಶಿಕ್ಷಣ ರೂಪದಲ್ಲಿ ಪ್ರಪಂಚವನ್ನು ಎದುರು ನೋಡುವಂತೆ ಮಾಡುವ ಹಾಗೂ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡುವ ಕುಲುಮೆಗಳಾಗಿವೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಂ.ಸುದರ್ಶನ್ ಮಾತನಾಡಿ,ಮಕ್ಕಳು ದೇಶದ ಭವಿಷ್ಯವೆಂದು ತಿಳಿದು ಅವರಿಗೆ ಉತ್ತಮ ಶಿಕ್ಷಣ ನೀಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ಶಿಕ್ಷಣ ನೀಡುವವರೆಗೂ ವಿರಮಿಸಬಾರದು.ಪೋಷಕರು ಈ ನಿಟ್ಟಿನಲ್ಲಿ ಆಲೋಚಿಸಬೇಕು. ಸರ್ಕಾರಗಳು ಸಹ ಗುಣಮಟ್ಟದ ಶಿಕ್ಷಣ ನೀಡುವ ಕೆಲಸಗಳಿಗೆ ಹೆಚ್ಚಿನ ಆದ್ಯತೆಯನ್ನು ಈಗಿನ ಸಂದರ್ಭದಲ್ಲಿ ನೀಡುತ್ತಿವೆ ಎಂದರು.
ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಪವನ್ ಕುಮಾರ್,ಬಿಇಓ ಚಂದ್ರಯ್ಯ, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ,ಶಾಲಾ ಸದಸ್ಯರಾದ ಮಂಜುನಾಥ್, ಸುರೇಶ್ ಮತ್ತು ರಾಜಶೇಖರ್ ಆದಿತ್ಯ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷೆ ಎಸ್.ಪಂಕಜ, ಕಾರ್ಯದರ್ಶಿ ಆದಿತ್ಯ ಜಯದೇವ್ ಮತ್ತು
ನಿರ್ದೇಶಕಿ ಅನುಷಾ ಸೇರಿದಂತೆ ನಗರಸಭಾ ಸದಸ್ಯರುಗಳು, ಚುನಾಯಿತ ಜನಪ್ರತಿನಿಧಿಗಳು, ವಕೀಲರು,ಮುಖಂಡರುಗಳು, ಶಾಲಾ ಶಿಕ್ಷಕ ವೃಂದ,ಸಿಬ್ಬಂದಿ ವರ್ಗ,ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.
ಕಾರ್ಯಕ್ರಮ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವರದಿ ಮಂಜು.ಗುರುಗದಹಳ್ಳಿ