Breaking News

ಕೆರೆ ದಡದಲ್ಲಿ ಹಾರಾಡಿದ ತಿರಂಗಾ ಸೂರ್ಯನಾಯಕ ತಾಂಡಾ‌ ಕೆರೆ ದಡದಲ್ಲಿ 78 ನೇ ಸ್ವಾತಂತ್ರೋತ್ಸವ

78th Independence Day Triranga Suryanayaka Tanda flew on the shore of the lake

ಜಾಹೀರಾತು
ಜಾಹೀರಾತು

ಗಂಗಾವತಿ : ತಾಲೂಕಿನ ಬಸಪಾಟ್ಟಣ ಗ್ರಾಪಂ ವ್ಯಾಪ್ತಿಯ ಸೂರ್ಯನಾಯಕ ತಾಂಡಾ ಕೆರೆ ದಡದಲ್ಲಿ 78 ನೇ ಸ್ವಾತಂತ್ರೋತ್ಸವ ಅಮನಗವಾಗಿ ಗ್ರಾಪಂ ವತಿಯಿಂದ ಗುರುವಾರ ಧ್ವಜಾರೋಹಣ ನೆರವೇರಿಸಲಾಯಿತು.

ಶಾಲಾ ಮಕ್ಕಳು, ಕೂಲಿಕಾರರು, ಗ್ರಾಪಂ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿಗಳು ತಿರಂಗಾ ಧ್ವಜ ಹಿಡಿದು ತಿರಂಗ ಯಾತ್ರೆ ನಡೆಸಿದರು. ಸ.ಕಿ.ಪ್ರಾ ಶಾಲೆ ಮಕ್ಕಳು ಖುಷಿಯಿಂದ ಪಾಲ್ಗೊಂಡು ಜಯಘೋಷ ಕೂಗಿದರು.

ಸೂರ್ಯನಾಯಕ ತಾಂಡಾ ಕೂಲಿಕಾರರು ಬಂಜಾರ ಉಡುಪು ತೊಟ್ಟು ನೃತ್ಯ ಮಾಡಿ ಗಮನಸೆಳೆದರು. ಇದೇ ವೇಳೆ ಆರ್ ಡಿಪಿಆರ್ ಇಲಾಖೆಯ ಏಕೀಕೃತ ಸಹಾಯವಾಣಿ ಸಂಖ್ಯೆ 8277506000
ಜಾಗೃತಿ ಮೂಡಿಸಲಾಯಿತು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ವಿದ್ಯಾವತಿ, ಗ್ರಾಪಂ ಅದ್ಯಕ್ಷರಾದ ಆಂಜನೇಯ ನಾಯಕ, ಉಪಾಧ್ಯಕ್ಷರಾದ ರತ್ನಮ್ಮ, ಸದಸ್ಯರಾದ ಗೌರಮ್ಮ ಶಂಕರ ನಾಯ್ಕ, ಗುರಯ್ಯ, ಮಲ್ಲಯ್ಯ, ದೇವಮ್ಮ, ಹಸೀನಾಬೇಗಂ, ದೇವಮ್ಮ, ಬಸಮ್ಮ, ಕನಕರಾಜ, ಗಡ್ಡಿ ಖಾಸೀಂಬಿ, ಎಸ್.ಡಿ.ಎ ಶ್ರೀನಿವಾಸ, ನರೇಗಾ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ತಾಂತ್ರಿಕ ಸಹಾಯಕರಾದ ಲಕ್ಷ್ಮೀದೇವಿ, ಎನ್ ಆರ್ ಎಲ್ ಎಂ ಸಿಬ್ಬಂದಿಗಳಾದ ಶ್ಯಾಮ್ ಸುಂದರ್, ಮಲ್ಲಿಕಾರ್ಜುನ, ಮುದ್ದಾನೇಶ, ತಾಲೂಕು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಗಳಾದ ಸುಮಿತ್ರಾ, ಸರಕಾರಿ ಕಿ.ಪ್ರಾ. ಶಾಲೆಯ ಮುಖ್ಯಶಿಕ್ಷರಾದ ಮಲ್ಲಿಕಾರ್ಜುನ ಹಟ್ಟಿ,
ಗ್ರಾಮ ಪಂಚಾಯತ ಸಿಬ್ಬಂದಿಗಳು, ಬಿಎಫ್ ಟಿ, ಸೇರಿ ಇತರರು ಇದ್ದರು.

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.