Patriotic Independence Day Celebration at Yalasati Tanda
ಗುರುಮಠಕಲ್ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಸತ್ತಿ ತಾಂಡಾದಲ್ಲಿ 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಮೊಗಲಪ್ಪ ಅವರು ಮಹಾತ್ಮಾ ಗಾಂಧೀಜಿ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಶ್ರೀ ಸುಭಾಸ್ ನೆರವೇರಿಸಿ ಮಾತನಾಡಿ ” ಸುದೀರ್ಘ ವರ್ಷಗಳ ಹೋರಾಟದಿಂದ ನಮ್ಮ ದೇಶಕ್ಕೆ 15 ಆಗಸ್ಟ್ 1947 ರಂದು ಸ್ವತಂತ್ರ ಸಿಕ್ಕಿದೆ,
ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದ ದಿನವನ್ನು ದೇಶಾದ್ಯಂತ ಹಬ್ಬದಂತೆ ಆಚರಿಸಲಾಗುತ್ತಿದೆ”
ಈ ವೇಳೆ ಮುಖ್ಯ ಶಿಕ್ಷಕ ಮೊಗಲಪ್ಪ ಮಾತನಾಡಿ ” ಅಖಂಡ ಭಾರತದಲ್ಲಿ ಸ್ವಾಭಿಮಾನದ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಹೋರಾಡಿದ ಹೋರಾಟಗಾರರ ಬಲಿದಾನ ತ್ಯಾಗಗಳ ಮೂಲಕ ಬಿಸಿನೆತ್ತರನ್ನು ಭಾರತ ಮಾತೆಯ ಮಡಿಲಿಗೆ ಹರಿಸಿ ನಮಗೆ ಕೊಟ್ಟ ಸ್ವಾತಂತ್ರ್ಯವನ್ನ ನಾವೆಲ್ಲರೂ ಸ್ಮರಿಸೋಣ ಮತ್ತು ಗೌರವಿಸೋಣ “
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕ ರಾಜೇಶ್, ಗ್ರಾಮಸ್ಥರಾದ ನರಸಪ್ಪ, ಹಣಮಂತ, ವಿಜಯ್, ರವಿ , ಲಚಾಯ, ಸಂತೋಷ, ಹೇಮಲಪ್ಪ, ಅಂಗನವಾಡಿ ಕಾರ್ಯಕರ್ತೆ ಕಲಾವತಿ, ಅನೇಕರು ಉಪಸ್ಥಿತರಿದ್ದರು..