Breaking News

ಜೂ.೦೩ರಿಂದ ಅಂಗನವಾಡಿ ಬಂದ್: ಅನಿರ್ಧಿಷ್ಟಾವಧಿ ಪ್ರತಿಭಟನೆ

If the temperature is to decrease, everyone should plant a plant.. Environment lover Gudlanu

ಜಾಹೀರಾತು


ಗಂಗಾವತಿ: ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ (ಇಸಿಸಿಇ) ಆರಂಭಕ್ಕೆ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಿಂದ ಕ.ಕ ಭಾಗದ ೭ ಜಿಲ್ಲೆಗಳಲ್ಲಿ ಇಸಿಸಿಇ ಆರಂಭಿಸಲು ಏಕಾಏಕಿ ಆದೇಶ ನೀಡಿದ್ದು, ಇದರಿಂದ ಕ.ಕ ಭಾಗದ ಜಿಲ್ಲೆಗಳ ೩೯ ತಾಲ್ಲೂಕುಗಳಲ್ಲಿ ೧೧೭೦ ಅಂಗನವಾಡಿ ಕೇಂದ್ರಗಳು ಮುಚ್ಚಲಿದ್ದು, ಈ ಸುತ್ತೋಲೆ ತಕ್ಷಣ ವಾಪಾಸ್ಸಿಗೆ ಆಗ್ರಹಿಸಿ ಮುಂದಿನ ತಿಂಗಳ ದಿ.೩ರಂದು ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಅಂಗನವಾಡಿ ನೌಕರರು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಗುಲ್ವರ್ಗಾ ಚಲೋ ಅಭಿಯಾನ ನಡೆಸಲು ನರ್ಧಸಲಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.
ಶನಿವಾರ

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರದರ್ಶಿಸಿ ಅವರು ಮಾತನಾಡಿ, ರಾಷ್ಟ್ರೀಯ ಮಕ್ಕಳ ಶಿಕ್ಷಣ ನೀತಿಯ ಭಾಗವಾಗಿ ಲೀಗ್ ಆಫ್ ನೇಷನ್ ರಾಷ್ಟ್ರಗಳು ಯುನಿಸೆಫ್ ಸಂಸ್ಥೆ ಮುಖಾಂತರ ೬ ವರ್ಷದ ಮಕ್ಕಳು ದೇಶದ ಸಂಪತ್ತು, ಸಮಾಜದ ಪುನರುತ್ಪಾದನೆ ಎಂದು ಭಾರತದಲ್ಲಿ ಐಸಿಡಿಎಸ್ ಯೋಜನೆ ಆರಂಭಿಸಿತ್ತು.ಇದರಿAದ ಅಪೌಷ್ಟಿಕತೆ ನಿವಾರಣೆ, ಮರಣ ಪ್ರಮಾಣ ಕಡಿ ಮೆ, ಗರ್ಭಿಣಿ ಸ್ತ್ರಿಯರ ಆರೈಕೆಯಾಗಿ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೆಕೆಂಬ ಸ್ಪಷ್ಟತೆಯು ದೊರೆಯಿತು. ಆದರೆ ರಾಜ್ಯ ಸರ್ಕಾರದ ಶಿಕ್ಷಣ ಇಲಾಕೆಯ ಇತ್ತೀಚಿಗೆ ಹೊರಡಿಸಿದ ಸುತ್ತೋಲೆಯಿಂದ ಆರು ವರ್ಷದೊಳಗಿನ ಮಕ್ಕಳ ಮತ್ತು ಗರ್ಭಿಣಿಯರಿಗೆ ಪೌಷ್ಠಿಕಾಂಶಯುವ ಆಹಾರ ಸಿಗದೇ ಮರಣದ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಆದೇಶ ನೀಡಿಲ್ಲ ಬದಲಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾತ್ರ ಈ ವಿಧಾನ ಅನುಸರಿಸುವ ಆದೇಶ ಹೊರಡಿಸಲಾಗಿದೆ ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳಲಿದ್ದು ಕೂಡಲೆ ಆದೇಶ ಹಿಂಪಡೆಯಬೇಕು. ಈಗಿರುವ ಅಂಗನಾವಡಿ ಕೇಂದ್ರಗಳಿಗೆ ಮೂಲ ಸೌಕರ್ಯ ನೀಡಿ ಅಲ್ಲಿಯೇ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಬೇಕು,
ಕೂಡಲೆ ಸರ್ಕಾರ ಮತ್ತು ಕಲಬುರಗಿ ಆಯುಕ್ತರು ಇಸಿಸಿಇ ಶಿಕ್ಷಣ ಪ್ರಾರಂಭಿಸಲು ಹೊರಡಿಸಿದ ಆದೇಶವನ್ನು ಹಿಂಪಡೆ ದು, ಐಸಿಡಿಎಸ್ ಆದೇಶವನ್ನು ಮುಂದುವರೆಸಬೇಕು. ಇಲ್ಲ ವಾದಲ್ಲಿ ಅಂಗನವಾಡಿ ನೌಕರರಿಂದ ಉಗ್ರಹೋರಾಟ ನಡೆ ಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ ದರೋಜಿ, ಗಂಗಾವತಿ ತಾಲೂಕಾ ಅಧ್ಯಕ್ಷ ಮಂಜುನಾಥ್ ಇದ್ದರು.

About Mallikarjun

Check Also

ಸಾವಳಗಿ ಗ್ರಾಮದಲ್ಲಿ ಕೂಸಿನ ಮನೆ ಯೋಜನೆ ಆಟಕ್ಕುಂಟು ಲೇಕ್ಕಕಿಲ್ಲ !?

In Savalgi village, the milking house project will be played!? ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಸಾವಳಗಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.