Breaking News

ಕೊಪ್ಪಳಜಿಲ್ಲಾಯಲಬುರ್ಗಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನನ್ನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಇವರ ಕ್ರಮಕ್ಕೆ ನನ್ನ ನಮನಗಳು

My salutations to the President and office bearers of the Koppal District Working Journalists’ Association who have appealed to the Hon’ble Chief Minister demanding action against me.

ಜಾಹೀರಾತು
ಜಾಹೀರಾತು

ಕೊಪ್ಪಳ ಜಿಲ್ಲಾ ಯಲಬುರ್ಗಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನನ್ನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಇವರ ಕ್ರಮಕ್ಕೆ ನನ್ನ ನಮನಗಳು :-ಕೈಲಾಗದವರು ಮೈಪರಚಿಕೊಂಡರೆಂಬ ಗಾದೆಯನ್ನು ಈ ಸಂದರ್ಭದಲ್ಲಿ ನೆನೆಯುತ್ತಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ಕಳೆದ ತಿಂಗಳು ದಿನಾಂಕ:- 16/12/2024 ರಂದು ನನ್ನ ನೇತೃತ್ವದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ 500 ರಕ್ಕೂ ಅಧಿಕ ಪತ್ರಕರ್ತರು ಬೆಳಗಾವಿಯ ಸುವರ್ಣಾ ಸೌಧದ ಮುಂಭಾಗದಲ್ಲಿ ಇತ್ತೀಚೆಗೆ ಸಿದ್ದರಾಮಯ್ಯನವರ ಸರ್ಕಾರ ಗ್ರಾಮಾಂತರ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಆದೇಶ ಹೊರಡಿಸಿದ್ದಾರೆ. ಪತ್ರಿಕೆ ಮಾಧ್ಯಮ ಪಟ್ಟಿಯಲ್ಲಿರಬೇಕು ಹಾಗೂ ನಾಲ್ಕು ವರ್ಷಗಳ ಖಾಯಂ ನೇಮಕಾತಿ ಆದೇಶ ಪತ್ರವಿರಬೇಕೆಂಬ ಕರಾಳ ಮಾನದಂಡಗಳಿಂದಾಗಿ ರಾಜ್ಯದ ಹೆಚ್ಚಿನ ಪತ್ರಕರ್ತರು ಈ ಸೌಲಭ್ಯದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಮಾನದಂಡಗಳನ್ನು ಸರಳಿಕರಿಸಬೇಕೆಂದು ಬೃಹತ್ ಹೋರಾಟವನ್ನು ಬೆಳಗಾವಿಯ ಸುವರ್ಣಾಸೌಧದ ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರಾದ ಶಿವರಾಜ್ ತಂಗಡಿಯವರಿಗೆ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಆದ ನಾನು ಒಂದು ತಿಂಗಳು ಗಡುವನ್ನು ಸರ್ಕಾರಕ್ಕೆ ನೀಡಿ ಮನವಿ ಸಲ್ಲಿಸಿದ್ದು ರಾಜ್ಯದ ಪ್ರತಿಯೊಬ್ಬ ಪತ್ರಕರ್ತರ ಗಮನಕ್ಕೆ ಇದೆ. ಅಂದಿನ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾನು ತಗಡೂರು ರವರಿಗೂ ಬಹಿರಂಗ ಸವಾಲ್ ಹಾಕಿದ್ದು,ತಾವುಗಳು ಗ್ರಾಮಾಂತರ ಬಸ್ ಪಾಸ್ ಆದೇಶವನ್ನು ಸ್ವಾಗತಿಸಿರುವ‌ ಹಿನ್ನೆಲೆಯಲ್ಲಿ ಸರ್ಕಾರ ಕೇಳಿರುವ ಖಾಯಂ ನೇಮಕಾತಿ ಆದೇಶ ಪತ್ರವನ್ನು ತಗಡೂರು ಕಾರ್ಯನಿರ್ವಹಿಸುತ್ತಿರುವ ತಮ್ಮ ವಿಜಯವಾಣಿ ಪತ್ರಿಕೆಯ ಮುಖಾಂತರ ಇದೇ ಪತ್ರಿಕೆಯಲ್ಲಿ ತಾಲೂಕು,ಹೋಬಳಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ನೇಮಕಾತಿ ಆದೇಶ ಪತ್ರ ವಿಜಯವಾಣಿ ಪತ್ರಿಕೆಯ ಸಂಪಾದಕರಿಂದ ತಗಡೂರು ರವರು ಕೊಡಿಸಿಕೊಟ್ಟಿದ್ದೇ ಆದರೆ ಸಂಘಟನೆಗೆ ಹಾಗೂ ಪತ್ರಿಕೋಧ್ಯಮಕ್ಕೂ ನಿವೃತ್ತಿ ಘೋಷಿಸಿ ಸನ್ಯಾಸತ್ವ ಸ್ವೀಕರಿಸುತ್ತೇನೆಂಬ ಸವಾಲಿಗೆ ಉತ್ತರಿಸದೇ ದಿಕ್ಕು ತಪ್ಪಿಸುವ ಕಾರ್ಯಕ್ಕೆ ಇಳಿದಿರುವುದು ವಿಷಾದಕರ. ಕಳೆದ ಮೂರು ವರ್ಷಗಳಿಂದ ಪತ್ರಕರ್ತರ ಉಚಿತ ಬಸ್ ಪಾಸ್,ರಕ್ಷಣಾ ಕಾಯ್ದೆ, ಜೀವವಿಮೆ ಹಾಗೂ ಮಾಸಾಶನ ಕುರಿತಂತೆ ಸುವರ್ಣಾ ಸೌಧದ ಮುಂಭಾಗ ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಹೋರಾಟಗಳನ್ನು ಮಾಡಿದಂತ ಕೀರ್ತಿ ಕಾನಿಪ ಧ್ವನಿ ಸಂಘಟನೆಗಿದೆ. ಎಂದೂ ಬೀದಿಗಳಿದು ಹೋರಾಟಗಳನ್ನು ಮಾಡದೇ ಇರುವವರು ಮೊಸರು ಗಡಿಗೆಯಲ್ಲಿ ಕಲ್ಲುಗಳನ್ನು ಹುಡುಕಾಡುತ್ತಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಎಲ್ಲೂ ಯಾರಿಗೂ ಅವಾಚ್ಛ ಶಬ್ದಗಳನ್ನಾಗಲಿ ತೇಜೋವಧೆಗಳನ್ನಾಗಲಿ ನಾನು ಉಪಯೋಗಿಸದಿದ್ದರೂ ಹೆಸರಿಗೆ ಕಳಂಕ ತರಲು ಹೊರಟಿರುವ ಯಲಬುರ್ಗಾ ದ ಪದಾಧಿಕಾರಿಗಳಾದ ತಾವುಗಳು ತಮ್ಮ ರಾಜ್ಯಾಧ್ಯಕ್ಷರಾದ ತಗಡೂರು ರವರಿಗೆ ಹೇಳಿ ನಾನು ಹಾಕಿರುವ ಸವಾಲಿಗೆ ಧೈರ್ಯವಾಗಿ ಉತ್ತರಿಸೋಕೆ ಹೇಳಿ. ಖಾಯಂ ನೇಮಕಾತಿ ಆದೇಶ ಪತ್ರ ಕೊಡಿಸುವುದಕ್ಕೆ ಆಗುತ್ತೋ‌ ಇಲ್ಲವೋ ಎಂಬ ಸ್ಪಷ್ಟತೆ ಹಾಗೂ ವಾಸ್ತವಾಂಶ ರಾಜ್ಯದ ಸಮಸ್ತ ಪತ್ರಕರ್ತರಿಗೆ ಗೊತ್ತಾಗಬೇಕಿದೆ. ನಾನು ಸಂಘಟನೆ ನನ್ನ ಕಾನಿಪ ಧ್ವನಿ ಪತ್ರಕರ್ತರಿಗೋಸ್ಕರ ಮಾಡಿಲ್ಲ. ಇಡೀ ರಾಜ್ಯದಲ್ಲಿ ನೊಂದಂತ ಸಮಸ್ತ ಪತ್ರಕರ್ತರಿಗೋಸ್ಕರ ಹಾಗೂ ಅವರ ಮೂಲಭೂತ ಸೌಕರ್ಯಕೋಸ್ಕರ ನನ್ನ ಈ ಹೋರಾಟವೇ ಹೊರೆತು ನನ್ನ ಸ್ವಾರ್ಥಕ್ಕಾಗಿ ಅಲ್ಲ. ರಾಜ್ಯದಲ್ಲಿ ಮಹಿಳೆಯರಿಗಿರುವ ಬೆಲೆ ಪತ್ರಕರ್ತರಿಗಿಲ್ಲವಲ್ಲ ಎಂಬ ನೋವು ಒಂದೆಡೆಯಾದರೆ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಾಕು ರಾಜ್ಯ ಪೂರ್ತಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಇನ್ನೊಂದೆಡೆ. ಕಾರ್ಯನಿರ್ವಹಿಸುವ ನಿಜವಾದ ಪತ್ರಕರ್ತರಿಗೆ ಜಿಲ್ಲಾ ಪೂರ್ತಿ ಓಡಾಡಲು ಸರ್ಕಾರದ ಈ ಕಠಿಣ ನಿಯಮಕ್ಕೆ ನಮ್ಮಲ್ಲಿರದ ಪರಿಪೂರ್ಣ ಜ್ಞಾನ ಹಾಗೂ ಸರಿಯಾದ ತಿಳುವಳಿಕೆ ಇರದಿರುವುದು. ಆದರೂ ಈ ಸಂದರ್ಭದಲ್ಲಿ ನನ್ನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಳಾದ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಿರುವ ಯಲಬುರ್ಗಾದ ತಮ್ಮೆಲ್ಲರಿಗೂ ಹೃದಯ ಪೂರ್ವಕ ನಮನಗಳು ಜೊತೆಗೆ ಮಾನ್ಯ ಪ್ರಧಾನ ಮಂತ್ರಿಗಳು,ಗೃಹಮಂತ್ರಿಗಳಿಗೂ ಮನವಿ ಸಲ್ಲಿಸಬೇಕೆಂದು ಮನವಿ. ಬಂಗ್ಲೆ ಮಲ್ಲಿಕಾರ್ಜುನ,ಕಾನಿಪ ಧ್ವನಿ ರಾಜ್ಯಾಧ್ಯಕ್ಷರು.ಮೊ:-9535290300

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.