Blossom Festival 2025 was completed by the children in a unique way
ಕನಕಪುರ: ಡಾ ಬಿ.ಶಶಿಧರ್ ರವರ ಬ್ಲಾಸಮ್ ಶಾಲೆಯು ವಿಶಿಷ್ಟವಾದ ಮೂವತ್ತಮೂರನೆಯ
ವರ್ಷದ ಸಾಂಸ್ಕೃತಿಕ ಹಬ್ಬವನ್ನು ಬಹಳ ಸಂಭ್ರಮದಿಂದ ಕನಕಪುರದ
ಡಾ.ಬಿ.ಆರ್.ಅಂಬೇಡ್ಕರ್ ಪುರಭವನದಲ್ಲಿ ಆಚರಿಸಲಾಯಿತು. ಪ್ರತಿ ವರ್ಷದಂತೆ ಸಂಪೂರ್ಣ ಕಾರ್ಯಕ್ರಮವನ್ನು
ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ವಿನೂತನವಾಗಿ ನಡೆಸಿಕೊಟ್ಟರು.
ಶ್ರೀ ಸಿದ್ಧಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್ ಸಂಸ್ಥಾಪಕರಾದ ನಮ್ಮ ತಂದೆ
ಡಾ. ಬಿ. ಶಶಿಧರ್ ರವರ ಮಹದಾಸೆಯಂತೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ
ದೃಷ್ಟಿಯಿಂದ ಹಾಗೂ ಮಕ್ಕಳು ಪುಸ್ತಕ ಪ್ರೇಮಿಗಳಾಗಬೇಕೆಂದು ಮಕ್ಕಳಿಗಾಗಿ ಪ್ರತಿ
ವರ್ಷದಂತೆ ಈ ವರ್ಷವೂ ಯಂಗ್ ರೀಡರ್ ಅವಾರ್ಡ್'ಗೆ
ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ವಿಜೇತರು ‘ ಮತ್ತು “ಭಾರತದ ಮಹಿಳಾ ಸಾಧಕಿಯರು” ಎಂಬ ವಿಷಯಗಳ ಬಗ್ಗೆ
ಸ್ಪರ್ಧೆಯನ್ನು ಏರ್ಪಡಿಸಿ ಅವರಿಗೆ ಶ್ರೀ ಸಿದ್ಧಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್
ಛೆರ್ಮನ್‌ರಾದ ಡಾ|| ಶ್ವೇತಾ ಶಶಿಧರ್ ರವರು 9ನೇ ತರಗತಿಯ ಚಂದನ ಎಸ್ ಮತ್ತು 5ನೇ
ತರಗತಿಯ ಕಣ್ಣಯಿ ಶೆಟ್ಟಿ ಪಿ ರವರಿಗೆ ಉತ್ತಮ ಪುಸ್ತಕಗಳನ್ನು ಮತ್ತು ಪಾರಿತೋಷಕವನ್ನು ಬಹುಮಾನವಾಗಿ ವಿತರಿಸಿದರು.
2024 ನೆ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು
ಅತ್ಯುತ್ತಮ ಪ್ರತಿಭೆ ತೋರಿ “ಉತ್ತಮ ಸಾಧಕಿ” ಪ್ರಶಸ್ತಿಗೆ ಭಾಜನರಾದ ಮಧುರರವರನ್ನು
ಗುರುತಿಸಿ ಡಾ|| ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ವತಿಯಿಂದ ಡಾ|| ಶ್ವೇತಾ ಶಶಿಧರ್
ರವರು ನಗದು ಬಹುಮಾನ 2,500 ರೂಪಾಯಿಗಳನ್ನು ಕೊಟ್ಟು ಸನ್ಮಾನಿಸಿದರು. ಪ್ರಸ್ತುತ ವರ್ಷದಿಂದ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಗಳಿಸುವುದರ ಜೊತೆಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಗಳಿಸಿದ ಗೈಡ್ ಭುವನರವರಿಗೆ ನಗದು ಬಹುಮಾನ 2,500 ರೂಪಾಯಿಗಳನ್ನು ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ವತಿಯಿಂದ ಕೊಟ್ಟು ಸನ್ಮಾನಿಸಲಾಯಿತು.
ಹತ್ತನೇ ತರಗತಿಯ ಸುರಕ್ಷಾ ಸಿ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ
ಮಾತನಾಡುತ್ತ ನಮ್ಮ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯ
ಪ್ರಾಂಶುಪಾಲರು ಮತ್ತು ಶಿಕ್ಷಕರ ವೃಂದದವರು ಸದಾ ಸಹಕರಿಸುತ್ತಾ ಬಂದಿದ್ದಾರೆ ಎಂದು
ಹೇಳಿದರು.
8ನೇ ತರಗತಿಯ ಹರ್ಷಿತಾ ಎನ್ ಮಾತನಾಡುತ್ತಾ ನಮ್ಮ ಶಾಲೆಯಲ್ಲಿ ಉಚಿತವಾಗಿ
ನಡೆಸುವಂತಹ ಭರತನಾಟ್ಯ, ಸಂಗೀತ ಮತ್ತು ಚಿತ್ರಕಲೆ ತರಗತಿಗಳಿಗೆ ಸೇರಲು ಅವಕಾಶ
ಮಾಡಿಕೊಟ್ಟಿರುವ ನಮ್ಮ ಪ್ರಾಂಶುಪಾಲರಾದ ಶ್ರೀಮತಿ ಗಂಗಾಂಬಿಕಾ ಹಾಗೂ ಶಿಕ್ಷಕರ
ವೃಂದದವರಿಗೆ ಧನ್ಯವಾದವನ್ನು ಅರ್ಪಿಸಿದರು.
ಶಾಲೆಯ ವಾರ್ಷಿಕೋತ್ಸವದ ಅತಿಥಿಯಾಗಿದ್ದಂತಹ 7ನೇ ತರಗತಿಯ
ಖುಷಿ ಎಸ್ ರವರು ಮಾತನಾಡಿ ನಮ್ಮ ಶಾಲೆಯಲ್ಲಿ ನಡೆಯುವ ಶಾಲಾ
ವಾರ್ಷಿಕೋತ್ಸವ ಮತ್ತು ಎಲ್ಲಾ ರಾಷ್ಟೀಯ ಹಬ್ಬಗಳಿಗೂ ಮಕ್ಕಳನ್ನೇ ಅತಿಥಿಗಳಾಗಿ ಆಯ್ಕೆ
ಮಾಡುತ್ತಿರುವುದು ವಿಶಿಷ್ಟವಾಗಿದೆ. ಅಂತರ ಶಾಲಾ ಮಟ್ಟದ ಚೆಸ್, ಗಾಯನ ಸ್ಪರ್ಧೆ, ಚರ್ಚಾ
ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವಿಜ್ಞಾನ ವಸ್ತುಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ
ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆಯಲು ನಮ್ಮ ಶಾಲೆಯ ಪ್ರಾಂಶುಪಾಲರು ಮತ್ತು
ಶಿಕ್ಷಕರ ವೃಂದದ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು.
ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿಯಾಗಿದ್ದ 1ನೇ ತರಗತಿಯ
ನಭಾ ಕೌನೈ ನ್ ರವರು ಮಾತನಾಡಿ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ನನಗೆ ಈ
ಅವಕಾಶವನ್ನು ಕಲ್ಪಿಸಿಕೊಟ್ಟ ಶಾಲೆಗೆ ನಾನು ಕೃತಜ್ಞನಾಗಿರುತ್ತೇನೆ ಎಂದು ಹೇಳಿದರು.
2024ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ
ವಿದ್ಯಾರ್ಥಿಗಳನ್ನು ಮತ್ತು ರಾಜ್ಯಪುರಸ್ಕಾರ ಪಡೆದ ವಿದ್ಯಾರ್ಥಿನಿಯರನ್ನು “ಭಾರತ ಸೇನೆಯ
ಪರಮ ವೀರರು” ಎಂಬ ಪುಸ್ತಕ ಮತ್ತು ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.
ಪಿ.ಕೆ.ಜಿ ಯಿಂದ 10ನೇ ತರಗತಿವರೆಗಿನ ಮಕ್ಕಳು ಹಿಂದೂಸ್ಥಾನಿ ಗಾಯನ, ಭರತನಾಟ್ಯ,
ನಾಟಕ, ಸೆಮಿಕ್ಲಾಸಿಕ್ ನೃತ್ಯ, ಮೈಮ್, ಹಾಗೂ ವಿವಿಧ ನೃತ್ಯಗಳ ಮೂಲಕ
ವರ್ಣರಂಜಿತ ಕಾರ್ಯಕ್ರಮಗಳನ್ನು ನೀಡಿ ಪ್ರೇಕ್ಷಕರ ಮನಸೂರೆಗೊಂಡರು.
10ನೇ ತರಗತಿಯ ಸುಪ್ರಜಾ ಆಚಾರ್ಯ ಹೆಚ್ ಸಿ ಎಲ್ಲರನ್ನು ಸ್ವಾಗತಿಸಿದರು. ಶಶಾಂಕ್ ಮತ್ತು ಭೂಮಿಕಾ ಎಸ್
ಶಾಲಾ ವರದಿ ಮಂಡಿಸಿದರು. ಚಂದನ ಎಂ ಎಂ ವಂದಿಸಿದರು. ಕಾರ್ಯಕ್ರಮವನ್ನು ಯಶಸ್ವಿನಿ, ಮೆಹಕ್ ಫಾತಿಮಾ,
ಹಿತೇಶ್ ಡಿ ಗೌಡ, ಭೂಮಿಕಾ ಎಸ್ , ಭೂಮಿಕಾ ಕೆ, ಹಾಗೂ ಅನುಷರವರು
ನಿರೂಪಿಸಿದರು. ಈ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮಗಳ ಮಧ್ಯದಲ್ಲಿ “ಭಾರತದ ಮಹಿಳಾ ಸಾಧಕಿಯರ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು.