77th Kalyana Karnataka Utsav Dayacharana conducted by Taluk Administrator

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತವತಿಯಿಂದ
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದಲ್ಲಿ ಶಾಸಕರಾದ ಹಂಪಯ್ಯ ನಾಯಕ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸಂದೇಶವನ್ನು ನೀಡಿದರು.
ನಂತರದಲ್ಲಿ ತಹಸೀಲ್ದಾರ್ ರಾಜು ಪಿರಂಗಿ ಮಾತನಾಡಿ, ದೇಶಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಸಿಕ್ಕರೆ ಈಗಿನ ಕಲ್ಯಾಣ ಕರ್ನಾಟಕ ಹಿಂದಿನ ಹೈದರಾಬಾದ್ ಕರ್ನಾಟಕ ಭಾಗಕ್ಕೆ 1948ರ ಸೆ.17ರಂದು ಸ್ವಾತಂತ್ರ್ಯ ದೊರಕಿತು. ಹೈದರಾಬಾದ್ ನಿಜಾಮನಿಂದ ಈ ಭಾಗ ವಿಮೋಚನೆಗೊಂಡಿದ್ದರಿಂದ ಪ್ರತಿವರ್ಷ ಸೆ.17ರಂದು ವಿಮೋಚನಾ ದಿನ ಹಾಗೂ ಈಗ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಇ.ಓ.ಖಾಲಿದ್ ಅಹಮ್ಮದ್, ಬಿ,ಇ.ಓ,ಚಂದ್ರಶೆಖರ .ಡಿ.ಪುರಸಭೆ ಮುಖ್ಯಧಿಕಾರಿ ಗಂಗಾಧರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ದುಲ್ ಗಾಫೂರ್ ಸಾಬ್,ಬಿ.ಕೆ.ಅಮರೇಶಪ್ಪ,ಸಾಲಿಂಪಾಷಾ, ರಾಜಾ ಸುಭಾಷ ಚಂದ್ರನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು,ಪುರಸಭೆ ಸದಸ್ಯರು, ಇನ್ನು ಇತರರು ಹಾಜರಿದ್ದರು.