Condemns insult to AICCT leaders by Municipal Commissioner: Vijay Doreraju

ಗಂಗಾವತಿ: ದಿನಾಂಕ: ೦೪.೦೧.೨೦೨೫ ರಂದು ನಗರಸಭೆ ಪೌರಾಯುಕ್ತರೊಂದಿಗೆ ಭೇಟಿಯಾಗಿ ಪೌರಕಾರ್ಮಿಕರ ಬಾಕಿ ವೇತನಗಳ ಬಗ್ಗೆ ಚರ್ಚಿಸುವಾಗ, ಪೌರಾಯುಕ್ತರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿ, ಎ.ಐ.ಸಿ.ಸಿ.ಟಿ.ಯು ಮುಖಂಡರಿಗೆ ಬೈಯ್ದಿರಿವುದು ಖಂಡನೀಯವಾಗಿದೆ ಎಂದು ಎ.ಐ.ಸಿ.ಸಿ.ಟಿ.ಯು ಜಿಲ್ಲಾಧ್ಯಕ್ಷ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೌರಾಯುಕ್ತರು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸದೇ ನಿರ್ಲಕ್ಷö್ಯ ಮಾಡುತ್ತಿದ್ದನ್ನು ಪ್ರಶ್ನಿಸಿದಾಗ ಪೌರಾಯುಕ್ತರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ೮-೧೦ ಜನ ಮಹಿಳೆಯರು ಸೇರಿ ಪೌರಕಾರ್ಮಿಕರು ಪೌರಾಯುಕ್ತರನ್ನು ಭೇಟಿಯಾದಾಗ ಅವರು ಪೌರಕಾರ್ಮಿಕರನ್ನು ಹೀನಾಯವಾಗಿ ನಿಂದಿಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಪೌರಾಯುಕ್ತರು ಕಾರ್ಮಿಕರನ್ನು ನಿಂದಿಸಿರುವುದನ್ನು ಪರಿಶೀಲಿಸಿ, ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಎ.ಐ.ಸಿ.ಸಿ.ಟಿ.ಯು ಸಂಘಟನೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ