Breaking News

ಓದಿನೊಂದಿಗೆ ದೇಶಾಭಿಮಾನ ಮೂಡಿಸುವ ಶಿಕ್ಷಣ ಇಂದಿನ ಆದ್ಯತೆಗೆ ಒತ್ತು ಕೊಡಿ : ಸೈನಿಕ ಪಿ.ದಿವ್ಯಪ್ರಸಾದ್

Emphasis on education that instills patriotism with reading is today’s priority : Sainik P. Divyaprasad

ಜಾಹೀರಾತು

ಬೆಂಗಳೂರು : ವಿದ್ಯಾರ್ಥಿಗಳಿಗೆ ದಿನನಿತ್ಯದ ಓದು, ಬರಹದ ಶಿಕ್ಷಣ ದೊಂದಿಗೆ ದೇಶಾಭಿಮಾನ ಹೊಂದುವಂತಹ ನೈತಿಕ ಶಿಕ್ಷಣವನ್ನು ಬೋಧಿಸುವ, ಅಭಿಮಾನ ಮೂಡಿಸುವ ಕೆಲಸವನ್ನು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಂಥ ಕಾಲೇಜುಗಳು ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ನನಗೆ ಅತೀವ ಸಂತಸ ಹಾಗೂ ಗೌರವ ಮೂಡುವಂತಾಗಿದೆ ಎಂದು ಮಾಜಿ ಸೈನಿಕರು, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಪಿ.ದಿವ್ಯಪ್ರಸಾದ್ ಅಭಿಪ್ರಾಯಪಟ್ಟರು. ಅವರು ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನ 2024–25 ರ ಸಾಲಿನ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ ವಿಜೇತರಾದ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.‌ಇಂದು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದು ಪೋಷಕರಿಗೆ, ಓದಿದ ಕಾಲೇಜಿಗೆ ಕೀರ್ತಿ ತರುತ್ತಿರುವುದು ಬಹಳ ಸಂತೋಷವೇ, ಆದರೆ ನೈತಿಕ, ಶಿಕ್ಷಣ, ದೇಶಾಭಿಮಾನ ಮೂಡಿಸುವ, ಸಮಾಜದಲ್ಲಿ ಮಹಿಳೆಯರಿಗೆ, ಬಡವರಿಗೆ, ನಿರ್ಗತಿಕರಿಗೆ ಸಮಾನತೆ ಮೂಡಿಸುವ, ಅವರೂ ನಮ್ಮಂತೆ ಮನುಷ್ಯರು ಎಂಬ ಭಾವನೆ ಮೂಡುವಂತೆ ಮಕ್ಕಳಲ್ಲಿ ಶಿಕ್ಷಣದ ಸಂಸ್ಥೆಗಳು, ಅಧ್ಯಾಪಕರು ಗಮನ ಹರಿಸಬೇಕಿದೆ , ವಿದ್ಯಾರ್ಥಿಗಳಲ್ಲಿ ಅಸಾಮಾನ್ಯ ಶಕ್ತಿ, ಸಾಮರ್ಥ್ಯ ಇದ್ದು, ಕ್ರೀಡೆ , ಸಾಹಿತ್ಯ, ಸಂಸ್ಕೃತಿ ಮೌಲ್ಯಾತ್ಮಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವ ಸೌಭಾಗ್ಯ ನನ್ನದು .ಇಂತಹ ಕಾರ್ಯಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಮನೋಧರ್ಮ ಬದಲಾಗುತ್ತದೆ.

ಆರೋಗ್ಯಕರ ಸಮಾಜವೂ ನಿರ್ಮಾಣವೂ ಆಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆ ಸಹಕಾರ್ಯದರ್ಶಿ ಎಂ.ಎಸ್.ನಟರಾಜ್ ಅವರು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿರಿ, ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಕೀರ್ತಿವಂತರಾಗಿರಿ, ಸರ್ವಜನಾಂಗದ ಶಾಂತಿಯ ಸಂದೇಶ ಸಾರುವ ದಾರ್ಶನಿಕರನ್ನು ಓದಿರಿ, ಅವರ ಹಾದಿಯಲ್ಲಿ ನಡೆದರೆ ನಮ್ಮ ಬದುಕು ಸುಂದರವಾಗುವುದು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಆರ್.ವಿ.ಮಂಜುನಾಥ್ ಅವರು ವಿದ್ಯಾರ್ಥಿ ಜೀವನದಲ್ಲಿ ರ್ಯಾಂಕ್ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ಸಾರ್ವಜನಿಕ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು, ಸಮಯ, ಸಂದರ್ಭವನ್ನು ಚೆನ್ನಾಗಿ ಬಳಸಿಕೊಂಡು, ತಂದೆ ತಾಯಿ ಗುರು ಹಿರಿಯರಿಗೆ ಸದಾ ಮಾದರಿಯಾಗಬೇಕೆಂದು ಹಿತವಚನ ಹೇಳಿದರು.‌ಇದೇ ಸಮಯದಲ್ಲಿ ‌ಅತಿಥಿ ಪಿ.ದಿವ್ಯ ಪ್ರಸಾದ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ.ಎಸ್.ರಾಮಲಿಂಗೇಶ್ವರ, ಪ್ರೊ.ಮಧು.ಬಿ.ಎನ್. ಅಧ್ಯಾಪಕರುಗಳಾದ ಗುರುರಾಜ್, ಸಹನಾ.ಎಸ್, ಕಾವ್ಯ.ವಿ, ಜೀವಿತಾ ಮುಂತಾದವರಿದ್ದರು. 300 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

About Mallikarjun

Check Also

ಪತ್ರಕರ್ತರ ಬೆನ್ನೆಲುಬಾಗಿ ನಿಲ್ಲಲಿದೆ ಮಾಧ್ಯಮ ಪತ್ರಕರ್ತರ ಸಂಘ.

The Media Journalists Association will stand as the backbone of journalists. ಉಡುಪಿ:ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರು ಸೇರಿದಂತೆ …

Leave a Reply

Your email address will not be published. Required fields are marked *