Breaking News

ಪತ್ರಕರ್ತರನ್ನು ನಿಂದಿಸಿ ಧಮ್ಕಿ ಹಾಕಿದ ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಿರುದ್ಧ ಪತ್ರಕರ್ತರ ಪ್ರತಿಭಟನೆ

Journalists protest against Nelamangala BJP President Jagdish Chaudhary who insulted and threatened journalists.

ಜಾಹೀರಾತು
ಜಾಹೀರಾತು

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಪತ್ರಕರ್ತರನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿರುವ ವಿಚಾರವಾಗಿ ನೆಲಮಂಗಲ ತಾಲ್ಲೂಕು ಸ್ವಾಭಿಮಾನಿ ಪತ್ರಕರ್ತರುಗಳು ಪ್ರೆಸ್ ಕ್ಲಬ್ ಕೌನ್ಸಿಲ್ ನೇತೃತ್ವದಲ್ಲಿ ನೆಲಮಂಗಲ ತಾಲ್ಲೂಕು ಕಚೇರಿ ಎದುರು ಜಗದೀಶ್ ಚೌದ್ರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ರೌಡಿ ಶೀಟರ್ ಜಗದೀಶ್ ಚೌದ್ರಿರವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ನೆಲಮಂಗಲ ಪತ್ರಕರ್ತರ ಪ್ರತಿಭಟನೆಗೆ ವಕೀಲ್ ಸಾಬ್ ಎಂದೇ ಖ್ಯಾತಿಗಳಿಸಿರುವ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ರವರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಪತ್ರಕರ್ತರ ಜೊತೆ ನಿಂತು ರೌಡಿ ಶೀಟರ್ ಜಗದೀಶ್ ಚೌದ್ರಿ ಹೆದರಿಕೆ, ಬೆದರಿಕೆಗೆ ಪತ್ರಕರ್ತರು ಹೆದರಬಾರದು. ರೌಡಿ ಶೀಟರ್ ನನ್ನು ಪೊಲೀಸರು ಮೊದಲು ಮಟ್ಟಹಾಕಿ ಪತ್ರಕರ್ತರನ್ನು ರಕ್ಷಣೆ ಮಾಡಬೇಕು. ನಾನು ಕೂಡ ನಿಮ್ಮ ಜೊತೆ ಇದ್ದೇನೆ ಪೊಲೀಸರು ಕೂಡಲೇ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು. ನೆಲಮಂಗಲ ತಾಲ್ಲೂಕು ಪತ್ರಕರ್ತರಿಗೆ ಜಗದೀಶ್ ಚೌದ್ರಿ ಕೆಲ ವರ್ಷಗಳ ಹಿಂದೆ ಜಾಹಿರಾತು ನೀಡಿದ್ದು ಆ ಹಣವನ್ನು ಫೋನ್ ಪೇ ಮೂಲಕ ನೀಡಿ ಇನ್ನುಳಿದ ಹಣವನ್ನು ನೀಡದೆ ಪತ್ರಕರ್ತರು ಹಣ ಕೇಳಿದ್ರೆ ಬೆದರಿಕೆ ಹಾಕಿ ಪತ್ರಕರ್ತರು ಬ್ಲಾಕ್ ಮೇಲರ್ ಎಂಬಂತೆ ಬಿಂಬಿಸಿದ್ದಾರೆ. 3 ದಿನದ ಹಿಂದೆ ಜಗದೀಶ್ ಚೌದ್ರಿ ವಿರುದ್ಧ ಟಿ.ಬೇಗೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಭ್ರಷ್ಟ ಅಧಿಕಾರಿಗಳಿಗೆ ಜಗದೀಶ್ ಚೌದ್ರಿ ಬೆಂಬಲ ನೀಡಬಾರದು ಎಂದು ತಿಳಿಸಿದ್ದು ಈ ಬಗ್ಗೆ ಸುದ್ದಿ ಮಾಡಿದ ಪತ್ರಕರ್ತರುಗಳಿಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಸುದ್ದಿ ಮಾಡಿದ ಪತ್ರಕರ್ತರನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದು ಪತ್ರಕರ್ತರು ರೋಲ್ ಕಾಲ್ ಎಂದು ಜಗದೀಶ್ ಚೌದ್ರಿ ಸಾರ್ವಜನಿಕವಾಗಿ ಪತ್ರಕರ್ತರನ್ನು ನಿಂದಿಸಿದ್ದು ಪ್ರಶ್ನೆ ಮಾಡಿದ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಹಚರರ ಮೂಲಕ ತೇಜೋವಧೆ ಮಾಡಲು ಮುಂದಾಗಿ ಪತ್ರಕರ್ತರ ಕುಟುಂಬದ ಸಣ್ಣ ಮಗು ಸಹಿತ ಕುಟುಂಬ ಸದಸ್ಯರ ಭಾವಚಿತ್ರಗಳನ್ನು ಹರಿಬಿಟ್ಟು ಹೆದರಿಕೆ ಹಾಕಿದ್ರು ಈ ಬಗ್ಗೆ ಆಕ್ರೋಶಗೊಂಡ ಪತ್ರಕರ್ತರು ರೌಡಿ ಶೀಟರ್ ಜಗದೀಶ್ ಚೌದ್ರಿ ಗಡಿ ಪಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಜಗದೀಶ್ ಹಾಗೂ ತಹಸೀಲ್ದಾರ್ ಅಮೃತ್ ಅತ್ರೆಶ್ ರವರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲ ಸಾಬ್ ಜಗದೀಶ್,ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್, ಪ್ರದಾನ ಕಾರ್ಯದರ್ಶಿ ಆಶಾ ಸೀನಪ್ಪ, ರಾಜ್ಯ ಕಾರ್ಯದರ್ಶಿ ಕೊಟ್ರೇಶ್,ಜಿಲ್ಲಾಧ್ಯಕ್ಷ ಮಂಜುನಾಥ್, ತುಮಕೂರು ಜಿಲ್ಲಾ ಗೌರವ ಅಧ್ಯಕ್ಷ ಸುಧೀಂದ್ರ, ಬೆಂಗಳೂರು ನಗರ ಅಧ್ಯಕ್ಷ ಭಾನುಪ್ರಕಾಶ್, ನೆಲಮಂಗಲ ತಾಲ್ಲೂಕು ಅಧ್ಯಕ್ಷ ಗಂಗಾಧರ್, ಪ್ರದಾನ ಕಾರ್ಯದರ್ಶಿ ವಿಜಯ್ ಹೊಸಪಾಳ್ಯ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬೂದಿಹಾಳ್ ಕಿಟ್ಟಿ, ಉಪಾಧ್ಯಕ್ಷ ರುದ್ರೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಹರೀಶ್, ಮಿಲ್ಟ್ರಿಮಾಮ,ರಾಜಶೇಖರ್,ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸಂಘಟನಾ ಕಾರ್ಯದರ್ಶಿ ವೇಣು, ಪತ್ರಕರ್ತರುಗಳಾದ ಗುರು ಪ್ರಸಾದ್, ದಾಬಸ್ಪೇಟೆ ರಾಜೇಶ್, ಪ್ರದೀಪ್, ಶ್ರೀಧರ್, ಮಾರುತಿ, ರಾಮ್ ಪ್ರಸಾದ್, ರಾಮಚಂದ್ರ ಬಾಬು, ಹೊಸದಿಗಂತ ಬಾಬು, ಕಿಶೋರ್, ಅಲೀಮ್, ನಾಗೇಶ್, ಅಬ್ದುಲ್ ಆಫೀಜ್, ಲಕ್ಷ್ಮಣ್, ಸಿದ್ದರಾಜು, ಪವನ್ ಕುಮಾರ್, ವಂದನಾ, ವರ್ಷ, ಕವಿತಾ, ಉಮೇಶ್ ಪೂಜಾರ್, ಅರುಣ್ ಕುಮಾರ್, ಮಾರುತಿ, ಮೋಹನ್, ಸಂಚಾರಿ ಸತ್ಯ ಸಂಪಾದಕ ಶಂಕರ್, ಟೈಮ್ 9 ಜಯರಾಮ್ ಮತ್ತಿತರರು ಸ್ವಾಭಿಮಾನಿ ಪತ್ರಕರ್ತರು ಉಪಸ್ಥಿತರಿದ್ದರು.

About Mallikarjun

Check Also

ಪುರುಷೋತ್ತಮ ದಾಸ್ ಹೆಗ್ಗಡೆ ಅವರ  “ಯಯಾತಿ” ಕಾದಂಬರಿ ಬಿಡುಗಡೆ 

Purushottam Das Heggade’s novel “Yayati” released ಅತಿ ಕಾಮ ಅತಿರೇಖವಾದ್ದು, ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ; ಸಂಸ್ಕೃತಿ ಚಿಂತಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.