Breastfeeding week program at Hadi Community Bhavan.
ವರದಿ : ಬಂಗಾರಪ್ಪ ಸಿ .
ಚಾಮರಾಜನಗರ / ಮಡಿಕೇರಿ : ಪ್ರಾಥಮಿಕ ಆರೋಗ್ಯ ಕೇಂದ್ರ ತಿತಿಮತಿಗೆ ಸೇರಿದ ಹೆಬ್ಬಾಲೆ AAM ಸಣ್ಣರೇಷ್ಮೆ ಹಾಡಿ ಸಮುದಾಯ ಭವನದಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ನಡೆಸಲಾಯಿತು ಈ ಕಾರ್ಯಕ್ರಮಕ್ಕೆ ಜಿಲ್ಲಾ ನರ್ಸಿಂಗ್ ಆಫೀಸರ್ ಶ್ರೀಮತಿ ಭವಾನಿ ಮೇಡಂ ಅವರು ಹಾಗೂ ತಾಲೂಕು ಹಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಗಳಾದ ಶ್ರೀಮತಿ ಕಾವೇರಮ್ಮ ಮೇಡಂ ಹಾಗೂ ತಾಲೂಕು ಬಿಸಿಎಂ ಅವರಾದ ಶ್ರೀಮತಿ ದೀಪ ಮೇಡಂ ಅವರು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಎದೆ ಹಾಲಿನ ಮಹತ್ವದ ಬಗೆಯಲ್ಲಿ ಮಾಹಿತಿ ನೀಡುತ್ತಾ ತಾಯಿ ಎದೆ ಹಾಲು ಅಮೃತಕೆ ಸಮ ಇದಕ್ಕೆ ಯಾವುದೇ ಖರ್ಚು ಇಲ್ಲ ಎಲ್ಲಿ ಬೇಕಾದ್ರು ಯಾವ ಸಮಯದಲ್ಲಿ ಆದರೂ ತಾಯಿ ಮಗುವಿಗೆ ಎದೆ ಹಾಲು ಹುಣಿಸಬಹುದು,, ಹಾಗೂ ಯಾವ ಭಂಗಿಯಲ್ಲಿ ಎದೆಹಾಲು ಹುಣಿಸಬೇಕು ಎಂದು ಸಂಪೂರ್ಣ ಮಾಹಿತಿ ನೀಡಿದರು .ಜೊತೆಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಯ್ಯ ರವರು ಆರೋಗ್ಯ ಇಲಾಖೆ ಇಂದ ಸಿಗುವ ಆರೋಗ್ಯ ಸೌಲಭ್ಯ ಗಳ ಕುರಿತು ಮಾಹಿತಿ ನೀಡಲಾಯಿತು.
. ಇದೇ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ , ಗೀತಾ,,CHO ರಾದ ವರ್ಷ ಹಾಗೂ ಪೃಥ್ವಿ ಹಾಗೂ ಆಶಾ ಕಾರ್ಯಕರ್ತೆಯರಾದ ,, ಪಂಕಜ,ಸೌಮ್ಯ,ರೋಜ, ಹಾಗೂ ಅಂಗನವಾಡಿ ಕಾರ್ಯಕರ್ತರಾದ ಮೀನಕುಮಾರಿ. ವಿನ್ಯಾ. ನೀಲಮ್ಮ.ಸವಿತಾ ಬೋಜಿ.,ಸಹಾಯಕಿ. ರತಿ ಹಾಗೂ ವಿವೇಕಾನಂದ ಯೂಥ್ ಮೂವ್ಮೆಂಟ್ ನಾ ಕ್ಷೇತ್ರ ಸಿಬ್ಬಂದಿ ಮೋಹಿನಿ ಶಾಲಾ ಶಿಕ್ಷಕಿ ಸ್ಮಿತಾ ಮತ್ತು ಗರ್ಭಿಣಿ ಯರು ಮಕ್ಕಳ ತಾಯಂದಿರು ಗ್ರಾಮಸ್ಥರು ಸೇರಿದಂತೆ ಇನ್ನಿತರರು ಹಾಜರಿದ್ದರು