Breaking News

ಜನ ಬಲದ ಮುಂದೆ ಹಣ ಬಲದ ಕೆಲಸ ನಡೆಯಲಿಲ್ಲಅಭಿವೃದ್ಧಿಗಾಗಿ ರೈತರು ನನ್ನ ಕೈಯಿಡಿದರು ಆರ್ ನರೇಂದ್ರ

Money power did not work before people power. Farmers put their hands on me for development. R. Narendra.

ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು : ಇತಿಹಾಸದಲ್ಲಿ ಪ್ರಪಥಮ ಬಾರಿಗೆ ಚುನಾವಣೆ ನಡೆದರು ಸಹ ನನ್ನು ಕೈ ಬಲಪಡಿಸಿದ್ದಾರೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದ ಮತದಾನ ಕೇಂದ್ರದಲ್ಲಿ ಎಣಿಕೆ ಮುಗಿದ ನಂತರ ಮಾತನಾಡಿದ
ಆರ್ ನರೇಂದ್ರ ರವರು ಸಾಲಗಾರರಲ್ಲದ ಕ್ಷೇತ್ರದಲ್ಲಿ ನನ್ನನ್ನು ಆಯ್ಕೆ ಮಾಡಲಾಗಿದೆ , ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟು ಇಪ್ಪತೈದು ವರ್ಷದಲ್ಲಿ ಇಂದು ನಡೆದ ಚುನಾವಣೆಯು ಕರಾಳ ದಿನವಾಗಿದೆ ,ನಂತರದ ದಿನಗಳಲ್ಲಿ ನಾನು ನಿರ್ದೇಶಕ ಸ್ಥಾನದಲ್ಲಿ ಕಳೆದ ಹದಿನೈದುಇಪ್ಪತ್ತು ವರ್ಷಗಳಿಂದ ಚುನಾವಣಾ ನಡೆಯದೆ ಇಂದು ನಡೆದಿದೆ ರೈತರ ಹಿತಕಾಯುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದೆನು . ನನ್ನ ಅವಧಿಯಲ್ಲಿ ಬಹಳ ಪ್ರಾಮಾಣಿಕ ಕೆಲಸ ಮಾಡಿದ್ದೆನೆ ನನ್ನಿಂದ ಜಿಲ್ಲೆಗೆ ಉತ್ತಮ ಕೆಲಸ ಮಾಡಿದ್ದೆನೆ . ಮೂನ್ನೂರು ಕೋಟಿ ತಂದು ಸಂಸ್ಥೆಯನ್ನು ಅಭಿವೃದ್ಧಿ ಮಾಡಿದ್ದೆನೆ ಇದರಲ್ಲಿ ಕೇವಲ ಇಪ್ಪತ್ತು ಕೋಟಿ ಹಣ ಮಾತ್ರ ನಮ್ಮ ಜಿಲ್ಲೆಗೆ ಕೊಟ್ಟದ್ದರು ಕಾರಣ ಕೇಳಿದರೆ ನಮಗೆ ಮಲತಾಯಿ ದೋರಣೆ ಮಾಡುತ್ತಿದ್ದರು ಅದರಲ್ಲಿ ವಾಸ್ತವವಾಗಿ ನೋಡಿದರೆ ಅಲ್ಲಿ ನಮ್ಮ ಜಿಲ್ಲೆಯ ಸಾಲಗಾರರೆ ಹೆಚ್ಚು ಹಣ ಪಾವತಿ ಮಾಡಿದರು ಇದನ್ನು ಮನಗಂಡು ನಾನು ಖುದ್ದಾಗಿ ಹೆಚ್ಚಿನ ಹಣ ತರಲು ಶ್ರಮಿಸಿದ್ದೆನೆ ,ಇದನ್ನೆಲ್ಲ ಸಹಿಸದೆ ಕೆಲವೇ ಕೆಲವು ಬಿಜೆಪಿ ಮುಖಂಡರು ,ಮತ್ತು ಜೆಡಿಎಸ್ ಎಲ್ಲಾ ಪ್ರಭಾವಿ ಮುಖಂಡರು ಸೇರಿ ಇತಿಹಾಸದುದ್ದಕ್ಕು ನಡೆಯಬಾರದ ಚುನಾವಣೆಯನ್ನು ನಡೆಸಿದರು ಸಹ ನಮ್ಮ ರೈತಾಪಿವರ್ಗದವರು ನನ್ನ ಕೈಹಿಡಿದು ಜಯಶಿಲರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು. .

ಮಾಜಿ ಶಾಸಕ ಆರ್ ನರೇಂದ್ರ ಭರ್ಜರಿ ಗೆಲುವು.
ಹನೂರು
ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ
ಸಾಲಗಾರರಲ್ಲದ ಕ್ಷೇತ್ರದಿಂದ
ಮಾಜಿ ಶಾಸಕ ಆರ್.ನರೇಂದ್ರ ಭರ್ಜರಿ ಗೆಲುವು.
ಒಟ್ಟು ಮತಗಳು 270.
ಜೆ.ಡಿ.ಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಿರೀಶ್, ಪಡೆದ ಮತಗಳು 97
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾಜಿ ಶಾಸಕ ಆರ್.ನರೇಂದ್ರ ರಾಜೂಗೌಡ 171
74 ಮತಗಳ ಅಂತರ ದಿoದ
ಮಾಜಿ ಶಾಸಕರಾದ ಆರ್ ನರೇಂದ್ರ ರವರು ಜಯಭೇರಿ ಬಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತರು ಹಾಗೂ ಜೆಡಿಎಸ್ ಬಿಜೆಪಿ ಬೆಂಬಲಿತರು ಸೇರಿದಂತೆ ಸಾಮನ್ಯ ಕ್ಷೇತ್ರದಲ್ಲಿ ಕೆ ರಾಜುಗೌಡ ಎಲ್ ನಟರಾಜು . ಅನಿಲ್ ಕುಮಾರ್ , ಎಸ್ ಲಿಂಗೇಗೌಡ ರಂಗಸ್ವಾಮಿನಾಯ್ಡು . ಆಯ್ಕೆಗೊಂಡರೆ . ಮಹಿಳ ಮೀಸಲು ಕ್ಷೇತ್ರದಿಂದ ನಾಗರತ್ನಮ್ಮ ,ಪುಷ್ಪಲತಾ ಆಯ್ಕೆ ಹಿಂದುಳಿದವರ್ಗ ಪವರ್ಗ ಎ ಗೊವಿಂದ ಹಿಂದುಳಿದ ವರ್ಗ ಬಿ ಶ್ರೀನಿವಾಸ್ ಗೌಡ . ಪರಿಶಿಷ್ಟ ಜಾತಿ ಮಿಸಲುವರ್ಗ ಟಿಎಸ್ ಮಹಾದೇಶ್ . ಪರಿಶಿಷ್ಟ ಪಂಗಡ ಕೆಂಚನಾಯ್ಕ ಜಯಗಳಿಸಿದ್ದಾರೆ . ಇದೇ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿ ಗೀರಿಶ್ ,ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *