Breaking News

ಪೋಲಿಯೊ ಹನಿ ಹಾಕಿಸುವದರಿಂದ ಮಗುವಿನ ಸಂಪೂರ್ಣ ರಕ್ಷಣೆ; ಡಾ.ರಮೇಶ  ಸಲಹೆ

Complete protection of child from polio vaccination; Dr. Ramesh’s advice

ಗಂಗಾವತಿ.5 : ಐದು ವರ್ಷದೊಳಗಿನ ಮಕ್ಕಳಿಗೆ ಪಾಲಕರು ಎರಡು ಹನಿ ಪೊಲಿಯೋ ಹನಿಯನ್ನು ಹಾಕಿಸುವ ಮೂಲಕ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗಂಗಾವತಿ  ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(1)  ಆಡಳಿತ ವೈದ್ಯಾಧಿಕಾರಿ ಡಾ.ರಮೇಶ ದರೋಜಿ ಅವರು ಅಭಿಪ್ರಾಯಪಟ್ಟರು,

ಗಂಗಾವತಿ ನಗರ ಆರೋಗ್ಯ ಕೇಂದ್ರದಲ್ಲಿ ನಡೆದ ಪೋಲಿ ಯೋ ಲಸಿಕಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾ ಡಿದ ಅವರು ಪೋಷಕರು ಮತ್ತು ಸಾರ್ವಜನಿಕರು ಜಾಗೃ ತರಾಗಿ ಶಾಶ್ವತ 

ಅಂಗವಿ ಕಲತೆಯನ್ನು ತರಬಲ್ಲ ಪೊಲಿಯೋವನ್ನು ಲಸಿಕೆಯ ಮೂಲಕ ತಡೆಯಲು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಮಾರ್ಚ್ 3ರಿಂದ 6ವರೆಗೆ ನಡೆಯುತ್ತಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೊಹನಿ ಹಾಕುವ ಮೂಲಕ ಪೋಲಿಯೊ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ನಾಲ್ಕು ದಿನಗಳವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಶರಣಗೌಡ ಹೇರೂರು,ಆರೋಗ್ಯ ಸಿಬ್ಬಂದಿ ಪ್ರಭುರಾಜ,ಸುರೇಶ ಹೆಚ್ ,ರಾಜೇಸಾಬ,ವಿರೇಶ,ಬಿಂಧು,ಗುರುರಾಜ ಸೇರಿದಂತೆ ಇತರರು ಇದ್ದರು

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.