Breaking News

ಪೊನ್ನಾಚಿ ಗ್ರಾಮದಿಂದ ಕ್ವಾರಿ ಕೆಲಸಕ್ಕೆ ತಮಿಳುನಾಡಿಗೆ ತೆರಳಿದ್ದ ಯುವಕ ಸಾವು ಕೆಲವರಿಗೆ ಗಾಯ

The death of a young man who had gone to Tamil Nadu for quarry work from Ponnachi village injured some.


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ತಾಲ್ಲೋಕಿನ ಪೊನ್ನಾಚಿ ಗ್ರಾಮದಿಂದ ಉದ್ಯೋಗ ಅರಸಿ ಹಲವು ಜನ ಗುಳೆ ಹೊರಡುವುದು ಸಾಮನ್ಯ ಅದೆ ರೀತಿಯಲ್ಲಿ ಕೆಲಸಕ್ಕೆ ಹೊರಟ ಗಿರಿಜನ ಸಮುದಾಯದ ವ್ತಕ್ತಿಯೊಬ್ಬ ಬುಧವಾರ ನಡೆದ ದುರಂತದಿಂದ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಗ್ರಾಮದ ಸೋಲಿಗ ಸಮುದಾಯದ ಮುನಿಯಪ್ಪ (40) ಎಂಬವರೇ ಮೃತ ದುರ್ದೈವಿ.
ಇವರಲ್ಲದೆ ಗುಂಡ ಹಾಗೂ ನಾಗ ಎಂಬವರು ಸಹ ಗಾಯಗೊಂಡಿದ್ದಾರೆ.
ಘಟನೆ ವಿವರ: ಕಳೆದ ವಾರದ ಹಿಂದೆ ಗ್ರಾಮದಿಂದ ಸೋಲಿಗ ಹಾಗೂ ಇತರೆ ಸಮುದಾಯದ 30ಕ್ಕೂ ಹೆಚ್ಚು ಜನರು ತಮಿಳುನಾಡಿನ ಬರಗೂರು ಬೆಜ್ಜಲಹಟ್ಟಿ ಸಮೀಪದಲ್ಲಿ ನಡೆಯುತ್ತಿದ್ದ ಕರಿಕಲ್ಲು ಕ್ವಾರಿ ಕೆಲಸಕ್ಕೆ ಹೋಗಿದ್ದು, ಇವರು ಸಹ ಜತೆಯಲ್ಲೇ ತೆರಳಿದ್ದರು. ಬುಧವಾರ ಬೆಳಗ್ಗೆ ತಿಂಡಿ ತಿನ್ನುತ್ತಿದ್ದ ವೇಳೆ ಟಿಪ್ಪರ್ ವಾಹನದಿಂದ ಬಂಡೆ ಉರುಳಿ ಬಿದ್ದು ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟರೆ ಇಬ್ಬರು ಗಾಯಗೊಂಡರು. ಮೃತ ದೇಹವನ್ನು ಗುರುವಾರ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇನ್ನೂಳಿದಂತೆ ಗಾಯಗೊಂಡವರನ್ನು ತಮಿಳುನಾಡಿನ ಹಂದಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದೆ. ಈ ಸಂಬಂದವಾಗಿ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ವಿಷಯ ತಿಳಿದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ್ ಗ್ರಾಮಕ್ಕೆ ಭೇಟಿ ನೀಡಿ ಸ್ಥಳಿಯರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು ಉನ್ನತ ಮಟ್ಟದ ಅಧಿಕಾರಿಗಳಿಗೆ ವಿಷಯ ತಿಳಿಸಿದರು.

ಜಾಹೀರಾತು

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *