ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
If the Congress government is pro-farmers, it will present a budget of 490 crores for the reservoir, former MLA R Narendra Santhosh.




ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.

ಜಾಹೀರಾತು


ವರದಿ: ಬಂಗಾರಪ್ಪ .ಸಿ.‌
ಹನೂರು :ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದನಂತರ ಗ್ಯಾರಂಟಿ ಯೋಜನೆಯ ಮೂಲಕ ಬಡವರ ಪರವಾಗಿದೆ ಎಂಬುದನ್ನು ಜನತೆಗೆ ತೋರಿಸಿಕೊಟ್ಟಿದೆ , ಹಾಗೇಯೆ ಏತ ನೀರಾವರಿ ಯೋಜನೆಯಿಂದ ರೈತರ ಜಮಿನುಗಳಿಗೆ ನೀರಿನ ಸಮಸ್ಯೆಗಳಿಗೆ ಇತಿ ಶ್ರೀ ಹಾಡಿದೆ ಎಂದರು ತಪ್ಪಾಗಲಾರದು ಎಂದು ಮಾಜಿ ಶಾಸಕ ಆರ್ ನರೇಂದ್ರ ರವರು ತಿಳಿಸಿದರು.
ಹನೂರು ಪಟ್ಟಣದಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಭಾಗದ
ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆ ಯನ್ನು ಇಂದಿನ ಬಜೆಟ್‌ನಲ್ಲಿ ನಮ್ಮ ಸರಕಾರ ಘೋ ಷಣೆ ಮಾಡಿರುವುದರಿಂದ ಈ ಭಾಗದಲ್ಲಿ ಶಾಶ್ವತವಾಗಿ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ,

ಕ್ಷೇತ್ರ ವ್ಯಾಪ್ತಿಯ ಪ್ರಮುಖ ಜಲಾಶಯಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಹಲವಾರು ವರ್ಷಗಳಿಂದ ನಮ್ಮ ತಂದೆಯವರಾದಿಯಾಗಿ ನಾನು ಸಹ ಶ್ರಮವಹಿಸಿ ಡಿಪಿಆರ್ ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಕಳೆದ ಬಾರಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಯಾವುದೇ ಅನುದಾನ ನೀಡಲಿಲ್ಲ ಇ ದಿನದ ಬಜೆಟ್‌ನಲ್ಲಿ ಅಂದಾಜು ಮೊತ್ತ 490 ಕೋಟಿ ರೂಗಳ ವೆಚ್ಚದ ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆಯಿಂದ ಸುಮಾರು 15 ಸಾವಿರ ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದರು.

ಕೆಶಿಪ್ ಯೋಜನೆಯಡಿ ಮೊದಲ ಹಂತದಲ್ಲಿ ರಸ್ತೆ ಅಭಿವೃದ್ಧಿಪಡಿಸಲು 108 ಕೋಟಿ ರೂ ಗಳ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ, ಕಳೆದ ಬಾರಿಯೇ ಹನೂರು ತಾಲ್ಲೂಕು ಕೇಂದ್ರದಿಂದ ರಾಮಾಪುರ ಮಾರ್ಗವಾಗಿ ಪಾಲಾರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಕೆ ಶಿಪ್ ಯೋಜನೆ ಘೋಷಣೆಯಾಗಿದೆ, ನಂತರ ಹಣ ಬಿಡುಗಡೆ ಯಾಗಿರಲಿಲ್ಲ, ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಕಾಮಗಾರಿಗಳನ್ನು ನಮ್ಮ ಸರ್ಕಾರವು ಮಾಡುತ್ತದೆ ಎಂದು ತಿಳಿಸಿದರು. ‌

Total Views: 0
Share This Article