Breaking News

ಗ್ರಾಮೀಣ ಕೃಪಾಂಕ ನಿರ್ಲಕ್ಷ್ಯಿಸದಿರಿ ಹಳ್ಳಿ ಪಾಲಕರಿಗೆ ಜಿಜಿಡಿಇ ಟ್ರಸ್ಟ್ ಅಧ್ಯಕ್ಷ ಜಿ. ಶ್ರೀಧರ ಕಿವಿಮಾತು

Gramin Krupanka Do not neglect the village parents GGDE Trust President G. Sridhar’s ear

ಗಂಗಾವತಿ: ಹಳ್ಳಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.25ರಷ್ಟು ಮೀಸಲಾತಿ ಇದ್ದು, ಪಾಲಕರು ಈ ವಿಷಯವನ್ನು ನಿರ್ಲಕ್ಷ್ಯಿಸಬಾರದು ಎಂದು ಕೇಸರಹಟ್ಟಿಯ ಗದ್ದಡಿಕಿ ಗಂಗಮ್ಮ ದೇವಪ್ಪ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀಧರ ಹೇಳಿದರು.

ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಗ್ರಾಮೀಣ ಶಾಲೆಯ 20ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1ರಿಂದ 10ನೇ ತರಗತಿ ವರೆಗೆ ಗ್ರಾಮೀಣ ಶಾಲೆಗಳಲ್ಲಿ ಅಭ್ಯಾಸ ಮಾಡಿದವರಿಗೆ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಮತ್ತಿತರ ಉನ್ನತ ವ್ಯಾಸಂಗಗಳಿಗೆ ಶೇ.25ರಷ್ಟು ಸ್ಥಾನಗಳನ್ನು ಸರ್ಕಾರ ಮೀಸಲು ಇರಿಸಿದೆ. ಕೇವಲ ಶೇ.2ರಷ್ಟು ಮೀಸಲಾತಿ ಪಡೆಯಲು ಗಂಭೀರ ಹೋರಾಟ ನಡೆದಿರುವುದನ್ನು ಕಾಣುತ್ತಿರುವ ಪಾಲಕರು ಸರ್ಕಾರವೇ ಕೊಟ್ಟಿರುವ ಗ್ರಾಮೀಣ ಕೃಪಾಂಕದತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಸ್ವಾ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಗಂಗಾವತಿ ಬಿಇಒ ವೆಂಕಟೇಶ ಸಿಂಧ್ಯ ಮಾತನಾಡಿ, ಕೇಸರಹಟ್ಟಿ ಗ್ರಾಮ ಗಂಗಾವತಿ ತಾಲೂಕಿಗೆ 25 ವೈದ್ಯರನ್ನು ಕೊಟ್ಟಿದೆ. ಇದಕ್ಕೆ ಕಾರಣ ಅವರು ಪಡೆದ ಶಿಕ್ಷಣ. ಶಿಕ್ಷಣ ವ್ಯವಹಾರವಲ್ಲ. ಅದೊಂದು ಸಾಮಾಜಿಕ ಸೇವೆ. ಇಂಥ ಸೇವೆ ಮಾಡುತ್ತಿರುವ ಜಿಜಿಡಿಇ ಟ್ರಸ್ಟ್ ಕೆಲಸ ಶ್ಲಾಘನೀಯ ಎಂದರು.

42 ಜನ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಜಿ.ಜಯಶ್ರೀ ಅವರು, ಮಹಿಳೆಯರು, ಮಕ್ಕಳು ವಿಶೇಷವಾಗಿ ಗರ್ಭಿಣಿಯರ ಆರೋಗ್ಯ ಕಾಳಜಿ ಮಾಡುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಸ್ವಸ್ಥ ಸಮಾಜಕ್ಕಾಗಿ ದುಡಿಯುತ್ತಿರುವ ಇಂಥವರನ್ನು ಗುರುತಿಸಿ ಸನ್ಮಾನಿಸಲು ಸಂತೋಷ ಎನಿಸುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಸಿದ ಮಕ್ಕಳ ವೈದ್ಯ ಡಾ.ಅಮರ್ ಪಾಟೀಲ ಮಾತನಾಡಿ,    ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆ ಸಂಸ್ಕಾರವನ್ನು ಕೊಡಿಸಬೇಕು. ವಿದ್ಯಾವಂತರು ಕೃಷಿ, ಪಶು ಸಂಗೋಪನೆಗೆ ಮುಂದಾಗಬೇಕು. ಈ ಶಾಲೆಯಲ್ಲಿ ಗೋಶಾಲೆ ಸ್ಥಾಪಿಸಿ, ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡಬೇಕು ಎಂದು ಸಲಹೆ ನೀಡಿದರು.

ಬಿಆರ್‌ಸಿ ಮಂಜುನಾಥ ವಸ್ತ್ರದ್ ಮಾತನಾಡಿ, ಈ ಶಾಲೆ ಮಕ್ಕಳಿಗೆ ಶಿಕ್ಷಣ ಕೊಡುವುದರ ಜತೆಗೆ ಭಾರತೀಯ ಸಂಸ್ಕೃತಿಯನ್ನು ಕಲಿಸುತ್ತಿರುವುದು, ಮಕ್ಕಳಲ್ಲಿ ನೈತಿಕ ಮೌಲ್ಯ ಬಿತ್ತುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಸಿಆರ್‌ಸಿ ಬೆಟ್ಟದಪ್ಪ ಮಾತನಾಡಿ, ಶಿಕ್ಷಣ ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಘರ್ಜಿಸಲೇ ಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಶಿಕ್ಷಣಕ್ಕೆ ಅಂತಹ ಶಕ್ತಿ ಇದೆ ಎಂದರು.

ಇದೇ ವೇಳೆ ಆಶಾ ಕಾರ್ಯಕರ್ತೆಯರನ್ನುಮತ್ತು ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಕಾಸ ಮತ್ತು ಕರುಣಾಕರ ಹಾಗೂ ಸರ್ಕಾರಿ ಶಾಲೆಗೆ ನೇಮಕಗೊಂಡ ಹಿರಿಯ ಶಿಕ್ಷಕ ಮೌನೇಶ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು. 

ಜಿಜಿಡಿಇ ಟ್ರಸ್ಟಿಗಳಾದ ಶಾರದಮ್ಮ ಜಿ.ಮಂಜುನಾಥ, ಪಂಪಾಪತಿ ನಾಗಪ್ಪ ಇದ್ದರು. ಆಡಳಿತಾಧಿಕಾರಿ ಲಿಂಗಾರೆಡ್ಡಿ ಆಲೂರು ಪ್ರಾರ್ಥಿಸಿದರು. ಮುಖ್ಯಶಿಕ್ಷಕ ರಾಘವೇಂದ್ರ ದಂಡಿನ್ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಪ್ರಶಾಂತ ಮತ್ತು ಶ್ರಾವಣಿ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.