Breaking News

ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಿ, ಡೆಂಗ್ಯೂ ಜ್ವರ ಭಯ ಬಿಡಿ ಡಾ.ರಮೇಶ ಕರೆ

Maintain cleanliness around the house, stop fear of dengue fever, call Dr. Ramesh

ಗಂಗಾವತಿ.01: ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಿ, ಡೆಂಗ್ಯೂ ಜ್ವರ ಭಯ ಬಿಡಿ ಎಂದು   ವೈಧ್ಯಾಧಿಕಾರಿ ಡಾ.ರಮೇಶ ಹೇಳಿದರು .

ಅಂಬೇಡ್ಕರ್ ನಗರದ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈಡಿಸ್ ಈಜೀಪ್ಟ್ ಎಂಬ ಸೋಂಕಿತಗೊಂಡ ಸೊಳ್ಳೆ ಕಚ್ಚುವಿಕೆಯಿಂದ ಡೆಂಗ್ಯೂ ಜ್ವರ ಬರುತ್ತದೆ ಈ ಸೊಳ್ಳೆ ಆರೋಗ್ಯ ವ್ಯಕ್ತಿಯನ್ನು ಕಚ್ಚುತ್ತಾ ಹೊಂದಂತೆ ರೋಗ ಹರಡುತ್ತಾ ಹೋಗುತ್ತದೆ ಇದರ ನಿಯಂತ್ರಣಕ್ಕೆ ಮನೆಯ ಸುತ್ತಲೂ ಸ್ವಚ್ಚತೆ, ನೀರಿನ ತೊಟ್ಟಿಗಳನ್ನು

ಶುಚಿಗೊಳಿಸುವುದು,ಮಲಗುವಾಗ ಸೊಳ್ಳೆಪರದೆಯನ್ನು ಉಪಯೋಗಿಸಿದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು ಈ ಡೆಂಗ್ಯೂ ಜ್ವರದಿಂದ ಮುಕ್ತರಾಗಬಹುದು ಎಂದರು.th-rajyotsava-background

 

ನಂತರ ಮಾತನಾಡಿದ ಡಾ.ಶರಣೆಗೌಡ ಹಿರೇಗೌಡ ಡೆಂಗ್ಯೂ ವಿರೋಧಿ ದಿನಾಚರಣೆ ಗಂಗಾವತಿ ನಗರ ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ವಿರೋಧಿ ದಿನಾಚರಣೆಯನ್ನು

ಆಚರಿಸಲಾಯಿತು. ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಮನೆಯ ಹಿಂದೆ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ವಾರಕ್ಕೆಒಂದು ಬಾರಿಯಾದರೂ ನೀರು ಸಂಗ್ರಹ ತೊಟ್ಟಿಗಳನ್ನು ಸ್ವಚ್ಛೆಗೊಳಿಸಿ  ಮುಚ್ಚಿಡುವಂತೆ ಸಲಹೆ ನೀಡಿದರು .ಯಾವುದೇ ವ್ಯಕ್ತಿಗೆ ರೋಗಗಳ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿ ಪ್ರಥಮ ಚಿಕಿತ್ಸೆ ಪಡೆಯಿರಿ ನಿರ್ಲಕ್ಷ್ಯ ವಹಿಸದೆ ಆರೋಗ್ಯ ಕಾಪಾಡಿಕೊಳ್ಳಿ ಎಂದುಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಪ್ರಭುರಾಜ, ಮಲೇರಿಯಾ ಲಿಂಕ್ ವರ್ಕರ  ಹೆಚ್.ಸುರೇಶ,ಗುರುಪ್ರಸಾದ್,ವೀರೇಶ,ರಾಜೇಸಾಬ,ಮಾಹೇವತಿ,ಸ್ಪೂರ್ತಿ ಕಾಲೇಜು ವಿಧ್ಯಾರ್ಥಿಗಳು ಸಾರ್ವಜನಿಕರು ಸೇರಿದಂತೆ ಇತರರು ಇದ್ದರು

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.