ಗಂಗಾವತಿ ನಗರ ಠಾಣೆಯಲ್ಲಿ  ತೆರೆದ ಮನೆ ಕಾರ್ಯಕ್ರಮ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Open House Program at Gangavati Nagar Station

ಜಾಹೀರಾತು

ಗಂಗಾವತಿ ‌,1: ಇಂದು ನಗರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಎಂಬ ಕಾರ್ಯಕ್ರ ಮವನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ಮಾತನಾಡಿದ ಗಂಗಾವತಿ ನಗರ  ಠಾಣೆಯ ಪಿಐ ಪ್ರಕಾಶ ಮಾಳಿ ಶ್ರೀ ರಾಘವೇಂದ್ರ ಪಬ್ಲಿಕ್  ಶಾಲಾ ಮಕ್ಕಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಈ ಒಂದು ತೆರೆದ ಮನೆ ಕಾರ್ಯಕ್ರಮದ ಉದ್ದೇಶ ಎಂದು ಮಕ್ಕಳಿಗೆ ಸಲಹೆ ಮತ್ತು ನೇಮ ಪಾಲನೆ ಬಗ್ಗೆ ಹೇಳಿದು

ಪೋಲಿಸ್ ಕರ್ತವ್ಯನಿರ್ವಹಣಾ ವಿಧಾನ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಅಪರಾಧ ವಿಭಾಗ, ತನಿಖಾಧಿಕಾರಿ ವಿಭಾಗ, ಕಂಪ್ಯೂಟರ್ ವಿಭಾಗ, ಠಾಣಾ ಬರಹಗಾರರ ವಿಭಾಗ, ಠಾಣಾ ದಿನಚರಿ, ಅರ್ಜಿಗಳ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುವದು. ಅಂಗ ಶೋಧನಾ ಪುಸ್ತಕ, ಕೈದಿ ಬಂಧನ ಪುಸ್ತಕ, ಸಮನ್ಸ್ ನೋಂದಣಿ, ವಾರಂಟ್ ನೋಂದಣಿ, ಎಂಒಬಿ ಪುಸ್ತಕ, ರೌಡಿ ರಿಜಿಸ್ಟರ್, ಪೂರ್ವ ಸಜಾ ಅಪರಾಧಿ ನೋಂದಣಿ, ಬಂದೂಕು ನೋಂದಣಿ, ಸಣ್ಣ ಅಪರಾಧ ಪುಸ್ತಕ, ಮೋಟಾರು ವಾಹನ ಅಪರಾಧ ಪುಸ್ತಕ ಹಾಗೂ ಅಪರಾಧಿ ದಾಖಲಾತಿ ಪುಸ್ತಕ, ಕಾನೂನು ತಿಳಿವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುವ ಕಾನೂನುಗಳ ಬಗ್ಗೆಯೂ ಮಕ್ಕಳಿಗೆ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಎಎಸ್ಐ ಶಿವಶರಣ ,ಪೋಲಿಸ್ ಫೆದೆ ವಿಜಯಕಾಂತ್, ,ಶಿಕ್ಷಕರಾದ ಲಕ್ಷ್ಮಣ ಕೆ,ಡಿ ಶ್ರೀ ಕೃಷ್ಣ, ಶಿವಪ್ರಕಾಶ್, ದೌವಲಬಿ,ಶ್ರುತಿ, ಮೇಘ,ಪ್ರೀತಿ, ಪದ್ಮಾವತಿ, ಪ್ರವೀಣ್, ಸೇರಿದಂತೆ ಇತರರು ಇದ್ದರು

Total Views: 0
Share This Article