Breaking News

ವಾಲ್ಮೀಕಿ ನೂತನ ದೇವಸ್ಥಾನದಲೋಕಾರ್ಪಣೆ

Inauguration of Valmiki New Temple


ಕುಷ್ಟಗಿ : ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಟಾಪನೆ , ವಾಲ್ಮೀಕಿ ನೌಕರರ ಸನ್ಮಾನ ಸಮಾರಂಭ ಹಾಗೂ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಮತ್ತು ಶ್ರೀಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಮಂಗಳವಾರ ಜರುಗಿದವು.
ಶಿಕ್ಷಕ ವಾಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದಲ್ಲಿ ವಾಲ್ಮೀಕಿ ಮಂದಿರದ ನಿರ್ಮಾಣ ಮಾಡಲು ಕಳೆದ ಮೂವತ್ತು ವರ್ಷಗಳಿಂದ ಪ್ರಯತ್ನ ನಡೆದಿತ್ತು. ಪರಶುರಾಮ ನಾಯಕ ಅವರ ಮಾರ್ಗದರ್ಶನದಲ್ಲಿ ಶಾಂತಪ್ಪ ಗುಜ್ಜಲ್, ಮಹಾಂತಗೌಡ ಸೇರಿದಂತೆ ಅನೇಕ ಮಹನೀಯರು ದೇಣಿಗೆ ನೀಡಿದ್ದಾರೆ. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಯವರು ಒಂದು ಲಕ್ಷ ರೂ ದೇಣಿಗೆ ನೀಡಿದನ್ನು ಸ್ಮರಿಸಿದರು.ಮಂಗಲಭವನ, ಆವರಣಗೋಡೆ ನಿರ್ಮಾಣ ಮಾಡಲು ಹಲವುರು ಸಹಾಯಹಸ್ತ ನೀಡಿದ್ದಾರೆ ಎಂದರು.
ಮಾಜಿ ಸಚಿವ ಅಮರೇಗೌಡ ಪಾಟಿಲ್ ಮಾತನಾಡಿ, ಈ ಗ್ರಾಮದವರು ಜಾತ್ಯತೀತ ವಾಗಿ ಎಲ್ಲಾ ಜಾತ್ರೆಗಳನು ನಡೆಸಿಕೊಂಡು ಬರುತ್ತಾರೆ. ಮಹರ್ಷಿ ಯವರ ಆದರ್ಶ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರು ಒಂದಾಗಬೇಕೆAಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು. ನಮ್ಮಸ್ವಂತ ಶಕ್ತಿಯಿಂದ ಮುಂದೆ ಬರಬೇಕು. ನಿಮ್ಮ ಮನೆಯ ಮಗಳಂತೆ ಸೊಸೆಯನ್ನು ನೋಡಿಕೊಳ್ಳಬೇಕು. ಸಾಮೂಹಿಕ ವಿವಾಹಗಳಿಂದ ಖರ್ಚು ಕಡಿಮೆ ಆಗುತ್ತದೆ. ಶ್ರೀಗಳ ಆಶೀರ್ವಾದ ಕೂಡ ಸಿಗುತ್ತದೆ. ಕಾಯಕದಿಂದ ಕೈಲಾಸ ಕಾಣಬೇಕು ಎಂದರು.
ನಂತರ ಪ್ರಭಾಕರ ಚಿಣಿ , ಮಾಲತಿ ನಾಯಕ ಮಾತನಾಡಿದರು.
ಯುವ ನಾಯಕ ರಾಹುಲ್ ಸತೀಶ ಜಾರಕಿಹೊಳೆ ಜ್ಯೋತಿ ಬೆಳಗಿಸುವ ಮೂಲಕ ಉಧ್ಘಾಟಿಸಿ ಮಾತನಾಡಿದ ಅವರು, ನಮ್ಮ ವಾಲ್ಮೀಕು ಸಮುದಾಯದವರು ಶಿಕ್ಷಣ ವಂತರಾಗಬೇಕು. ಶಿಕ್ಷಣದಿಂದ ಏನನ್ನನಾದರು ಸಾಧಿಸ ಬಹುದು. ಡಾ. ಬಿ ಆರ್ ಅಂಬೇಡ್ಕರ್ ರವರ ಮಾತಿನಂತೆ ಶಿಕ್ಷಣ ಎಂಬ ಹುಲಿ ಹಾಲನ್ನು ಕುಡಿದವರು ಗರ್ಜಿಸಲೇ ಬೇಕು. ಆಗಾಗಿ ಎಲ್ಲರೂ ಶಿಕ್ಷಣವನ್ನು ಪಡೆದುಕೊಂಡು ಉನ್ನತ ಮಟ್ಟದ ಸರಕಾರಿ ಹುದ್ದೆಯಲ್ಲಿ ಸೇರಿಕೊಳ್ಳಬೇಕು. ನಮ್ಮ ಸಮುದಾಯ ವಿದ್ಯಾವಂತ ಯುವಕರು ನಮ್ಮ ಸತೀಶ ಜಾರಕಿಹೊಳಿ ಪೌಂಡೇಷನ್ ಹಾಗು ಮಾನವ ಬಂಧತ್ವ ವೇದಿಕೆಯ ವತಿಯಿಂದ ವಿವಿಧ ಪರೀಕ್ಷೆಗಳ ಪ್ರöçವೇಶ ಪರೀಕ್ಷೆಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ ಆದ್ದರಿಂದ ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಅದರಲ್ಲಿ ತರಬೇತಿ ಪಡೆದ ಹಲವರು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಅದರಂತೆ ನಮ್ಮ ತಂದೆಯರ ಮೇಲೆ ಈ ತಾಲೂಕಿನ ಜನತೆ ಅಪರವಾದ ಪ್ರೀತಿಯನ್ನು ಇಟ್ಟಿದ್ದಿರಿ ಅದಕ್ಕೆ ಚಿರೃನಿಯಾಗಿರುವೇವು ಎಂದರು.
ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು , ಹುಲಿಹೈದರ್ ವಾಲ್ಮೀಕಿ ಕುಲ ಗುರುಗಳು ರಾಜ ನವೀನಚಂದ್ರ ನಾಯಕ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.
ಸಾಮೂಹಿಕ ವಿವಾಹ ಕಾರ್ಯ ಕ್ರಮದಲ್ಲಿ ೧೩ ನವ ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಿಲೋಗಲ್ ಗ್ರಾಪಂ ಅಧ್ಯಕ್ಷೆ ಮಲ್ಲವ್ವ ತಳವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಬಸವರಾಜ ದಾಸರ ಸಂಗೀತ ಕಾರ್ಯ ಕ್ರಮ ನಡೆಸಿಕೊಟ್ಟರು.
ಅಶೋಕ ಬಡಿಗೇರ ಪ್ರಾರ್ಥಿಸಿದರು. ಹನಮನಾಳ ವಲಯ ಸಿಆರ್ ಪಿ ಶರಣಗೌಡ ಗೌಡ್ರ ಸ್ವಾಗತಿಸಿದರು. ಜಯಶ್ರೀ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್, ಪ್ರಭಾಕರ್ ಚಿಣಿ, ಮಾಲತಿ ನಾಯಕ, ಶಿವಶಂಕರಗೌಡ ಪಾಟೀಲ್ ಕಡೂರು, ಜಿಲ್ಲಾ ಧರ್ಮ ದರ್ಶಕರಾದ ರಾಮಣ್ಣ ಕಲ್ಲಣ್ಣವರ್ , ಜಿಪಂಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಶಿವಮೂರ್ತಿ ಗುತ್ತೂರು ಜಿಲ್ಲಾ ಕಾರ್ಯದರ್ಶಿ, ನಿವೃತ್ತ ಪ್ರಾಧ್ಯಾಪಕರು ಕನಕಪ್ಪ ತಳವಾರ , ರಾಮಣ್ಣ ಬೇವಿನಾಳ ಕುಣಕೇರಿ, ಕೆಆರ್ ಪಾಟೀಲ್, ಹಿರೇಗೋಣ್ಣಗಾರ ಗ್ರಾಪಂ ಅಧ್ಯಕ್ಷೆ ರಂಗಪ್ಪ ವಾಲೇಕಾರ , ತಾಪಂಮಾಜಿ ಸದಸ್ಯ ದೇವರಾಜ ಗೌಡ್ರು ಕುರಕುಂದಾ, ಸೋಮಶೇಖರ ವೈಜಾಪೂರು, ವಾಲ್ಮೀಕಿ ಸಮಾಜದ ಯಲಬುರ್ಗಾ ತಾಲೂಕ ಅಧ್ಯಕ್ಷ ಮಾನಪ್ಪ ಪೂಜಾರ, ಇರಕಲಗಡ್ ಜಿಪಂ ಮಾಜಿ ಸದಸ್ಯ ರಾಮಣ್ಣ ಚೌಡ್ಕಿ, ಹಿರಿಯ ಮುಖಂಡರಾದ ದೇವಪ್ಪ ಗಂಗನಾಳ ಹಿರೇಮನ್ನಾಪೂರು, ವಾಲ್ಮೀಕಿ ಸಮಾಜದ ಕುಷ್ಟಗಿ ತಾಲೂಕಾ ಮಾಜಿ ಅಧ್ಯಕ್ಷ ಸಂಗಣ್ಣ ಕರಡಿ, ರಮೇಶ ಕೊಳ್ಳಿ, ಪರಶುರಾಮ ತಳವಾರ ಕೂಕನೂರು, ಮದಕರಿಸೇನೆ ಯಲಬುರ್ಗಾಗುಂಡನಗೌಡ ಪಾಟೀಲ್ , ಹಂಚಾಳಪ್ಪ ಪೂಜಾರ, ಗ್ರಾಪಂ ಸದಸ್ಯ ದ್ಯಾಮನಗೌಡ ಪೊಲೀಸ್ ಪಾಟೀಲ್, ರಾಮಪ್ಪ ಗುಜ್ಜಲ್ , ಗ್ರಾಪಂ ಸದಸ್ಯ ಉಪಾಧ್ಯಕ್ಷೆ ನೀಲವ್ವ, ಖಜಾಸಾಬ ಕಲ್ಲಭಾವಿ ಗ್ರಾಮದ ಗುರು,ಹಿರಿಯರು ಸೇರಿದಂತೆ ಇನ್ನಿತರ ಗಣ್ಯರು ಹಾಗೂ ವಾಲ್ಮೀಕಿ ಸಮುದಾಯದ ಗಣ್ಯರು ಇದ್ದರು.
ಫೊಟೋ ಶೀರ್ಷಿಕೆ ೨೭ಕುಷ್ಟಗಿ ಪಿ೦೧, ೦೨
ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಟಾಪನೆ , ವಾಲ್ಮೀಕಿ ನೌಕರರ ಸನ್ಮಾನ ಸಮಾರಂಭ ಹಾಗೂ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಮತ್ತು ಶ್ರೀಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಮಂಗಳವಾರ ಜರುಗಿದವು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.