Breaking News

ಕಾರ್ಗಿಲ್‌ನಲ್ಲಿ ಹಿಮಕರಗಿಸಿ ನೀರು ಕುಡಿಯುವ ಪರಿಸ್ಥಿತಿ-ರಾಯಪ್ಪ.

The situation of drinking snowmelt water in Kargil-Rayappa.


ಕೊಪ್ಪಳ : ಭಾಗ್ಯನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್‌ವೀಲ್ ಕ್ಲಬ್ ಹಾಗೂ ಜೆ.ಸಿ.ಐ ಕ್ಲಬ್‌ಗಳ ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಸಿ.ಐ ಹಾಗೂ ಇನ್ನರ್‌ವೀಲ್ ಕ್ಲಬ್‌ಗಳು ಅಧ್ಯಕ್ಷರಾದ ಶಾರದಾ ಪಾನಘಂಟಿಯವರು ವಹಿಸಿದ್ದರು. ಪ್ರ‍್ರಾಸ್ತಾವಿಕವಾಗಿ ಮಾತನಾಡಿದ ಅವರು, ನಮ್ಮ ದೇಶದ ಹೆಮ್ಮೆಯ ಸೈನಿಕರ ಚಾರಿತ್ರಿಕ ಗೆಲುವಿಗೆ ೨೪ ವರ್ಷ
ಈ ಸಂದರ್ಭದಲ್ಲಿ ನಾವೆಲ್ಲರೂ ಸೈನಿಕರ ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕು ಎಂದರು. ಸನ್ಮಾನಿತರಾಗಿ ಆಗಮಿಸಿದ ಮಾಜಿ ಸೈನಿಕ ರಾಯಪ್ಪನವರು ಮಾತನಾಡುತ್ತಾ ಹಿಮ ಬೀಳುವ ಪ್ರದೇಶ ಕಾರ್ಗಿಲ್ ಅತ್ಯಂತ ದುರ್ಗಮ ಪರ್ವತವಾಗಿದೆ. ಮಳೆ ರೀತಿಯಲ್ಲಿ ಮಂಜುಗಡ್ಡೆ ಬೀಳುತ್ತದೆ. ಅದು ೨೪ ಡಿಗ್ರಿ ಸೆಲ್ಸಿಯಸ್ ಹೊಂದಿರುವAತಹ ಶೀತಲ ಪ್ರದೇಶ. ಹಿಮಕರಗಿಸಿ ನೀರು ಕುಡಿಯುವ ಪರಿಸ್ಥಿತಿ. ಪ್ರಾಣ ಪಣಕಿಟ್ಟು ಹೋರಾಡಿ ಯುದ್ಧ ಗೆದ್ದಿದ್ದೇವೆ ಎಂದರು. ಎದುರಾಳಿ ಸೇನೆ ಇಂಪುö್ರವೈಸ್ ಎಕ್ಸಪ್ಲೋಸಿವ್ ಡಿವೈಸ್ ಗಳನ್ನು ರಸ್ತೆ ಪಕ್ಕಕ್ಕೆ ಕೆಟ್ಟು ನಿಂತ ವಾಹನಗಳಿಗೆ ಅಳವಡಿಸಿ ನಮ್ಮನ್ನು ಕೊಲ್ಲುವ ಸಂಚು ರೂಪಿಸಲಾಗಿತ್ತು. ಅದೃಷ್ಟವಶಾತ್ ಚಾಲಕನ ಚಾಣಾಕ್ಷತನದಿಂದ ಜೀವ ಉಳಿಸಿಕೊಂಡು ಬಂದಿದ್ದೇವೆ ಎಂದು ಮಾಜಿ ಸೈನಿಕ ಚಂದ್ರಕಾAತ ನುಡಿದರು. ಮುಖ್ಯ ಅತಿಥಿಗಳಾದ ಸಾಹಿತಿ, ಉಪನ್ಯಾಸಕ ಮಂಜುನಾಥ ಚಿತ್ರಗಾರ ಮಾತನಾಡಿ ಸೈನಿಕರ ಬದುಕಿಗೆ ಸಾರ್ಥಕತೆ ಇದೆ. ದೇಶದಲ್ಲಿರುವವರೆಲ್ಲ ರಾಷ್ಟç ಅಭಿಮಾನಿಗಳಾದರೆ ಪರಕೀಯರ ದಾಳಿ ಅಸಾಧ್ಯ. ರಾಷ್ಟçದ ಪ್ರಗತಿಗೆ ಸೇನೆ, ರೈತ ಹಾಗೂ ಸಾಹಿತಿಗಳ ಕೊಡುಗೆ ಅಪಾರ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸೈನಿಕರಿಗೆ ಸನ್ಮಾನ ಮಾಡಲಾಯಿತು. ಇನ್ನರ್‌ವೀಲ್ ಕ್ಲಬ್ ಕಾರ್ಯದರ್ಶಿ ಶ್ರೀಮತಿ ಸುವರ್ಣ ಗಂಟಿ, ಜೆ.ಸಿ.ಐ.ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗೀತಾ ಪಾಟೀಲ್, ಮಾಜಿ ಸೈನಿಕ ಶಿವಣ್ಣ, ಖಜಾಂಚಿ ಶ್ರೀಮತಿ ನಿರ್ಮಲ, ಶಾಲೆಯ ಮುಖ್ಯ ಶಿಕ್ಷಕ ಲಕ್ಷ÷್ಮಣ ತಳಕಲ್, ಶ್ರೀಮತಿ ಶಾಂತಾ ಗೌಡರ್, ವಿರೂಪಾಕ್ಷಪ್ಪ ಬ್ಯಾಗೋಡಿ, ಕೀರ್ತಿ ಪಾಟೀಲ್, ವಿನಿತಾ ಪಟ್ಟಣಶೆಟ್ಟಿ, ಶ್ರೀಮತಿ ನೀತು ಮೇಘರಾಜ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಮೆರುಗು ತಂದರು.

ಜಾಹೀರಾತು

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.