Breaking News

ತಾಲೂಕುಮಟ್ಟದ ದಸರಾ ಕ್ರೀಡಾಕೂಟ”

Taluk Level Dussehra Games

ಜಾಹೀರಾತು
ಜಾಹೀರಾತು

ಕೊಟ್ಟೂರು:ಕ್ರೀಡೆ ಪ್ರಶಸ್ತಿಯನ್ನು ಮೀರಿದ ವ್ಯವಸ್ಥೆ
ಇಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಬಹುಮಾನ ಸಿಗದೆ ಇರಬಹುದು, ಆದರೆ ಅವರಿಗೆಲ್ಲ ಪ್ರಶಸ್ತಿಗಿಂತ ಮುಖ್ಯವಾದ ಆರೋಗ್ಯ ಭಾಗ್ಯ ಸಿಗುತ್ತದೆ.
ಎಂದು ಯುವಜನ ಸೇವಾ ಇಲಾಖೆ ಅಧಿಕಾರಿ ಜಗದೀಶ್  ಅವರು ಹೇಳಿದರು.

ಕ್ರೀಡಾ ಇಲಾಖೆ ಬಳ್ಳಾರಿ ವತಿಯಿಂದ ದಸರಾ ಕ್ರೀಡಾ ಕೂಟ ಬುಧವಾರ ಏರ್ಪಡಿಸಲಾಗಿತ್ತು.ರಾಷ್ಟ್ರಮಟ್ಟದ ಖೋ ಖೋ ಕ್ರೀಡಾಪಟು ಪ್ರತಿಕ್ಷಾ ಸಸಿಗೆ  ನೀರು ಹಾಕುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಮೈದೂರು  ಶಶಿಧರ್ ಹಾಗೂ ಅಜಯ್ ತಳವಾರ್ ಮಾತನಾಡಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕೊಟ್ಟೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ದೈಹಿಕವಾಗಿ ಸದೃಢ ವಾಗಿದ್ದರೆ ಜೀವನ ಸುಗಮವಾಗಿ ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಕಡಿಮೆ ಆಗುತ್ತಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.

ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಮಾತನಾಡಿ ಕ್ರೀಡಾ ಸ್ಫೂರ್ತಿ, ಶಿಸ್ತಿನಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಸಾಧನೆ ತೋರಬೇಕು ಯುವ ಸಮುದಾಯಕ್ಕೆ ತನ್ನ ಸಾಮರ್ಥ್ಯ ಸಾಬೀತು ಪಡಿಸಲು ದಸರಾ ಕ್ರೀಡಾಕೂಟ ಒಂದು ಉತ್ತಮ ವೇದಿಕೆ ಎಂದರು.

ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್‌, ಖೋ-ಖೋ, ಕಬಡ್ಡಿ, ಥ್ರೋಬಾಲ್, ಕ್ರೀಡೆಗಳಲ್ಲಿ ಪ್ರಥಮ ಸ್ಥಾನ, ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಗಳಿಸಿದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರು.

ವಿವಿದ ಕ್ರಿಡೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರವನ್ನು ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಹಾಗೂ ಯುವಜನ ಸೇವಾ ಇಲಾಖೆ ಅಧಿಕಾರಿ ಜಗದೀಶ್ ಅವರು ವಿತರಿಸಲಾಯಿತು.
ಈ ಸಂಧರ್ಬದಲ್ಲಿ ದೈಹಿಕ ಶಿಕ್ಷಕರು ಹಾಜರಿದ್ದರು.

About Mallikarjun

Check Also

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ.

Inaugural ceremony of the State Committee for Implementation of Kannada Language in Courts. ಬೆಂಗಳೂರು ಮಾರ್ಚ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.