Breaking News

ಮಾದಪ್ಪ ಭಕ್ತಾದಿಗಳಿಗೆ ಹೆಬ್ಬಾವು ದರ್ಶನ

Hebba darshan for Madappa devotees


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ರಾಜ್ಯದ ನಾನಾಕಡೆಯಿಂದ ಕಾಲ್ನೆಡೆಗೆಯಲ್ಲಿ ಪಾದಯಾತ್ರೆ ಮಾಡುವ ಭಕ್ತಾದಿಗಳು ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ವನ್ಯಜೀವಿಗಳ ಬಗ್ಗೆ ನಿಗಾ ವಹಿಸುವುದು,ಬಹಳ ಮುಖ್ಯ ಮತ್ತು ಸೂಕ್ಷ್ಮತೆಯನ್ನು ಗಮನಿಸಿ ಹಗಲಿನ ವೇಳೆ ಪಾದಯಾತ್ರೆ ಕೈಗೊಳ್ಳುವುದು ಉತ್ತಮ ಎನ್ನಬಹುದು.
ಹನೂರು ತಾಲ್ಲೂಕಿನ ತಾಳಬೆಟ್ಟ – ಮಲೆ ಮಹದೇಶ್ವರ ಬೆಟ್ಟ ಮಾರ್ಗದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟುಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಪವಿತ್ರ ಜಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯೆ ತಾಳುಬೆಟ್ಟದಲ್ಲಿ ರಸ್ತೆಗೆ ಅಡ್ಡಲಾಗಿ ಹೆಬ್ಬಾವು ಮಲಗಿದ್ದು ಜನರಲ್ಲಿ ಆತಂಕ ಉಂಟು ಮಾಡಿತ್ತು ಕೆಲವರು ಆತಂಕಗೊಂಡರೆ ಇನ್ನು ಕೆಲವರು ವಿಡಿಯೋ ಚಿತ್ರಣ ಮಾಡಿದರು.
ಕೆಲಕಾಲ ಸಂಚಾರದ ದಟ್ಟಣೆಯಾಗಿತ್ತು . ಹೆಬ್ಬಾವು ರಸ್ತೆಗೆ ಅಡ್ಡಲಾಗಿ ಮಲಗಿದ್ದ ಕಾರಣ ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಜೊತೆಗೆ ಹೆಬ್ಬಾವನ್ನು ನೋಡಲು ಜನರು ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂದಿತ್ತು. ಬಳಿಕ ನಿಧಾನವಾಗಿ ಹೆಬ್ಬಾವು ರಸ್ತೆ ಬದಿಗೆ ಹೊರಟ ನಂತರ ವಾಹನಗಳು ಮುಂದೆ ಸಾಗಿದವು.
ಮಹದೇಶ್ವರ ಬೆಟ್ಟಕ್ಕೆ ಅಮಾವಾಸ್ಯೆ ದೀಪಾವಳಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹಗಲು- ರಾತ್ರಿ ಲೆಕ್ಕಿಸದೆ ಮಹಿಳೆಯರು, ಗಂಡಸರು ವೃದ್ಧರು ಮಕ್ಕಳು ಎಲ್ಲರೂ ಪಾದಯಾತ್ರೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ರಾತ್ರಿ ವೇಳೆ ಮರದ ಕೆಳಗೆ ವಿಶ್ರಾಂತಿ ಪಡೆಯುವಾಗ ಪಾದಯಾತ್ರೆಗಳು ಎಚ್ಚರಿಕೆ ವಹಿಸಬೇಕೆಂದು ಸ್ಥಳದಲ್ಲಿದ್ದ ಭಕ್ತಾದಿಗಳು ತಿಳಿಸಿದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.