Menala Dakshina Kannada Zilla Panchayat Ajjavar Government Junior Primary School request for additional room
ಅಜ್ಜಾವರ: ಮೇನಾಲ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಈ ದಿನ ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಇ ರಮೇಶ್ ರವರಿಗೆ ಹೆಚ್ಚುವರಿ ಶಾಲಾ ಕೊಠಡಿಗೆ ಮನವಿ ಸಲ್ಲಿಸಲಾಯಿತು. ಮೇನಾಲ ಶಾಲೆಯಲ್ಲಿ ಇದುವರೆಗೆ ಒಂದರಿಂದ ಐದನೇ ತರಗತಿಯೊಂದಿದ್ದು. ಮಕ್ಕಳ ಸಂಖ್ಯೆ ಹೆಚ್ಚು ಇದ್ದು ಕೊಠಡಿಯ ಕೊರತೆಯಾಗಿದ್ದು ಕೊಠಡಿಯ ಅವಶ್ಯಕತೆ ಇದ್ದು ಜೊತೆಗೆ ಹೆಚ್ಚುವರಿಯಾಗಿ ಆರನೇ ತರಗತಿ ಕೊಠಡಿ ಇಲಾಖೆಯ ಮುಖಾಂತರ ಒದಗಿಸಿ ಕೊಡಬೇಕಾಗಿ ಮತ್ತು ಆರನೇ ತರಗತಿಯವರೆಗೆ ವಿಸ್ತರಿಸಲು ಹಾಗೂ ಶಾಲೆಯಲ್ಲಿ ಮಕ್ಕಳಿಗೆ ಬೆಂಚು,ಡಸ್ಕಿನ ಅನುಕೂಲ ಒದಗಿಸಿ ಕೊಡಬೇಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಅರ್ಜಿ ಸಲ್ಲಿಸಲಾಯಿತು ಮೇನಾಲ ಶಾಲಾ ಎಸ್ ಡಿ.ಎಂ.ಸಿ.ಅಧ್ಯಕ್ಷರಾದ ಸೌಕತ್ ಮೇನಾಲ ರವರು ಶಾಲಾಭಿವೃದ್ಧಿ ಸಮಿತಿಯ ಮತ್ತು ಮುಖ್ಯೋಪಾಧ್ಯಯರ ಪರವಾಗಿ ಮನವಿ ಮಾಡಿದರು