Massive protest in Tipatur city for implementation of internal reservation.
ತಿಪಟೂರು. ನಗರದ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನಸೌಧದ ವರೆಗೆ ಬೃಹತ್ ತಮಟೆ ಚಳುವಳಿ ಪ್ರತಿಭಟನೆ ನಡೆಸಿ ಮಾನ್ಯ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೋಪ್ಪ ಶಾಂತಪ್ಪ. ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಬೇಕು ಹಲವಾರು ರಾಜ್ಯಗಳು ಒಳ ಮೀಸಲಾತಿ ಜಾರಿಗೆ ಬದ್ಧವಾಗಿರುವುದಾಗಿ ಘೋಷಣೆ ಮಾಡಿದೆ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗ ಒಳಾಮಿಸಲಾತಿ ವಿಚಾರವನ್ನು ಮೂಲೆಗುಂಪು ಮಾಡಿದೆ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿಯನ್ನು ಶೀಘ್ರವೇ ಜಾರಿ ಮಾಡಬೇಕು ಇಲ್ಲವಾದಲ್ಲಿ ಮಾದಿಗ ಸಮುದಾಯ ಇಡೀ ರಾಜ್ಯದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಕುಪ್ಪಾಳು ರಂಗಸ್ವಾಮಿ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮಾಜ ಮೀಸಲಾತಿ ಸೌಲತ್ತುಗಳನ್ನು ಜನಸಂಖ್ಯೆ ಆಧಾರದಲ್ಲಿ ದೊರೆಯದೆ ಮಾದಿಗ ಸಮಾಜ ಅನ್ಯಾಯಕ್ಕೆ ಒಳಗಾಗುತ್ತ ಬಂದಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಶೀಘ್ರವೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ. ನಾಗತಿಹಳ್ಳಿ ಕೃಷ್ಣಮೂರ್ತಿ. ಜನಸಂಖ್ಯೆವಾರು ಮೀಸಲಾತಿ ಹಂಚಿಕೆಯಾಗಬೇಕು ಮೀಸಲಾತಿ ಸೌಲಭ್ಯಗಳಿಂದ ವಂಚನೆಗೆ ಒಳಗಾಗಿರುವ ಮಾದಿಗ ಸಂಬಂಧಿತ ಜಾತಿಗಳಿಗೆ ಹೆಚ್ಚಿನ ಸೌಲತ್ತು ದೊರೆಯಬೇಕು. ಎನ್ನುವ ಕಾರಣಕ್ಕಾಗಿ ಹಲವಾರು ದಶಕರಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು. ಆದರೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ಮೀನಾ ಮೇಷ ಎಣಿಸುತ್ತಿರುವುದು ಖಂಡನೀಯ ಎಂದರು.
ಈ ಪ್ರತಿಭಟನೆಯಲ್ಲಿ. ಹಿರಿಯ ದಲಿತ ಮುಖಂಡ. ಪೆದ್ದಿಹಳ್ಳಿ ನರಸಿಂಹಯ್ಯ. ಶೆಟ್ಟಿಹಳ್ಳಿ ಕಲ್ಲೇಶ್. ಅಶೋಕ್ ಗೌಡನಕಟ್ಟೆ. ಟಿ ರಾಜು ಬೆಣ್ಣೆನಹಳ್ಳಿ. ರಾಘು ಯಗಚಿಗಟ್ಟೆ. ಶಿವಕುಮಾರ್ ಮತ್ತಿಘಟ್ಟ. ಮಂಜುನಾಥ್ ಹರಚನಹಳ್ಳಿ. ಲಿಂಗದೇವರು ಬಾಗವಾಳ. ಹರೀಶ್. ರಮೇಶ್ ಮಾರನಗೆರೆ. ತಿಮ್ಮಯ್ಯ. ಸೇರಿದಂತೆ. ಪ್ರಮುಖ ಮುಖಂಡರುಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ